Thursday, 28th November 2024

ಲಂಗ್ಯಾ: ಚೀನಾದಿಂದ ಮತ್ತೊಂದು ವೈರಸ್‌ !

ವೈದ್ಯ ವೈವಿಧ್ಯ

drhsmohan@gmail.com

ಪರಿಸರ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ. ಮನುಷ್ಯ ತನ್ನ ವಸತಿ ಸ್ಥಾನಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾನೆ, ಜೀವವೈವಿಧ್ಯತೆ ಕಡಿಮೆ ಆಗುತ್ತಿದೆ. ಇವೆಲ್ಲವುಗಳ ಪರಿಣಾಮ ಕಾಡು ಪ್ರಾಣಿಗಳ ಜತೆಗೆ ಮಾನವ ನೇರ ಸಂಪರ್ಕಕ್ಕೆ ಬರುತ್ತಿದ್ದಾನೆ. ಅಥವಾ ಡೇರಿಗೆ ಸಂಬಂಧಪಟ್ಟ ಪ್ರಾಣಿಗಳು ಅಥವಾ ಮತ್ತಿತರ ಪ್ರಾಣಿಗಳ ಸಾಕುವಿಕೆಯ ದೆಸೆಯಿಂದ ಪರೋಕ್ಷವಾಗಿ ಸಂಪರ್ಕಕ್ಕೆ ಬರುತ್ತಿದ್ದಾನೆ. ಒಟ್ಟೂ ಪರಿಣಾಮವೇ ಕರೋನಾ, ಮಂಕಿ ಪಾಕ್ಸ್, ಮಾರ್ ಬರ್ಗ್, ಲಂಗ್ಯ…

ಕರೋನಾ ವೈರಸ್ ಹಾವಳಿ ಒಂದು ಹಂತಕ್ಕೆ ಬಂದು ಈಗ ಮಂಕಿ ಪಾಕ್ಸ್ ದಾಂಗುಡುತ್ತಿದೆ, ಶಬ್ದ ಮಾಡುತ್ತಿದೆ. ಜಗತ್ತಿನ ಹಲವು ದೇಶಗಳಲ್ಲಿ ಈ ಮಂಕಿಪಾಕ್ಸ್ ವ್ಯಾಪಕವಾಗಿ ಹರಡುತ್ತಿದ್ದು ಭಾರತದಲ್ಲಿಯೂ ಇತ್ತೀಚಿನ ವರೆಗೆ ೫ ವ್ಯಕ್ತಿಗಳಲ್ಲಿ ಕಂಡುಬಂದಿದೆ. ಮಂಕಿ ಪಾಕ್ಸ್ ಹರಡುವಿಕೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿಯೇ ‘ಲಂಗ್ಯಾ’ ಎಂಬ ಹೊಸ ವೈರಸ್ ಸುದ್ದಿ ಮಾಡಿದೆ.

ಲಂಗ್ಯಾ ಹೆನಿಪಾ ವೈರಸ್ (LayV) ಚೀನಾದ ಶೆನ್ ಡಾಂಗ್, ಹೆನಾನ್ ಪ್ರಾಂತ್ಯಗಳಲ್ಲಿ 2018ರ ಕೊನೆಯ ಭಾಗದಲ್ಲಿ ಕಂಡು ಬಂದಿದ್ದರೂ ಅದನ್ನು ಇತ್ತೀಚೆಗೆ ವಿಜ್ಞಾನಿಗಳು ನಿಖರವಾಗಿ ಪತ್ತೆ ಹಚ್ಚಿದ್ದಾರೆ. ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಈ ವೈರಸ್‌ನ ಬಗ್ಗೆ ವಿಜ್ಞಾನಿಗಳು ಹಲವು ಕಾಡು ಪ್ರಾಣಿಗಳಲ್ಲಿ ಪರೀಕ್ಷೆ ನಡೆಸಿದರು. ಹಾಗೆ ಅವರು 262 ಕಾಡಿಲಿ ರೀತಿಯಲ್ಲಿ ರುವ ‘ಶ್ರೂ’ ಎಂಬ ಪ್ರಾಣಿಯಲ್ಲಿ ಪರೀಕ್ಷಿಸಿದಾಗ ಶೇ.25ಕ್ಕೂ ಹೆಚ್ಚು ಪ್ರಾಣಿ ಗಳಲ್ಲಿ Lay V ವೈರಲ್ ಆರ್‌ಎನ್‌ಎ ಪತ್ತೆಯಾಯಿತು.

ಹಾಗಾಗಿ ಇಲಿ ರೀತಿಯ ಈ ‘ಶ್ರೂ’ ಪ್ರಾಣಿ ಲಂಗ್ಯಾ ವೈರಸ್‌ನ ಕಣಜ ಎಂದು ವಿಜ್ಞಾನಿಗಳ ಅಭಿಮತ. ಅಲ್ಲದೆ ಶೇ.5ರಷ್ಟು ನಾಯಿಗಳಲ್ಲಿ, ಶೇ.2ರಷ್ಟು ಮನೆಯಲ್ಲಿ ಸಾಕುವ ಆಡಿನಲ್ಲಿಯೂ ಕಂಡುಬಂದಿದೆ.

ಏನಿದು ಲಂಗ್ಯಾ ವೈರಸ್: ಇದು ಹನೀಫ್ ವೈರಸ್ ಜಾತಿಗೆ ಸೇರಿದ ವೈರಸ್. ಇದು ಸಾಮಾನ್ಯವಾಗಿ ಬಾವಲಿಗಳಲ್ಲಿ ಕಂಡುಬರುತ್ತದೆ. ಈ ಗುಂಪಿನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. 1994ರಲ್ಲಿ ಆಸ್ಟ್ರೇಲಿಯಾದಲ್ಲಿ ಗುರುತಿಸಿಲಾದ ಹೆಂಡ್ರಾ ವೈರಸ್, 1999ರಲ್ಲಿ ಮಲೇಷ್ಯಾದಲ್ಲಿ ಕಂಡುಬಂದ ನಿಫಾ ವೈರಸ್. ಈ ಎರಡು ವೈರಸ್ ಗಳೂ ತುಂಬಾ ಅಪಾಯಕಾರಿ. ಸೋಂಕು ಪೀಡಿತ ವ್ಯಕ್ತಿಗಳಲ್ಲಿ ಹಲವರ ಮರಣಕ್ಕೆ ಕಾರಣವಾಗುತ್ತವೆ.

ಈ ನಿಫಾ ವೈರಸ್ ಸೋಂಕು ನವೆಂಬರ್ 2021ರಲ್ಲಿ ನಮ್ಮ ದೇಶದ ಕೇರಳದಲ್ಲಿ ಕಂಡುಬಂದು ಒಬ್ಬ ಹುಡುಗ ಮೃತ ನಾಗಿದ್ದ. ಈ ಹಿಂದೆಯೂ ನಮ್ಮ ದೇಶ ಮತ್ತು ಬಾಂಗ್ಲಾ ದೇಶಗಳಲ್ಲಿ ನಿಫಾ ವೈರಸ್ ಸೋಂಕು ಕಂಡು ಬಂದಿವೆ. ಚೀನಾದ ತಜ್ಞ ಸಂಶೋ ಧಕರ ಪ್ರಕಾರ ಈ ಲಂಗ್ಯಾ ವೈರಸ್, ಮೋಜಿಯಾಂಗ್ ಹೆನಿಪಾ ವೈರಸ್‌ಗೆ ಬಹಳ ಹತ್ತಿರದಲ್ಲಿದೆ.

ಮೋಜಿಯಾಂಗ್ ಹೆನಿಪಾ ವೈರಸ್ 2012ರಲ್ಲಿ ಹಲವರಲ್ಲಿ ತೀವ್ರ ರೀತಿಯ ನ್ಯುಮೋನಿಯಾಕ್ಕೆ ಕಾರಣವಾಗಿ ಮೂವರು ಮರಣ ಹೊಂದಿದ್ದರು. ಇತ್ತೀಚಿಗೆ ಕಳೆದ ವಾರ ವ್ಯಕ್ತಿಯೊಬ್ಬರಲ್ಲಿ ಗಂಟಲ ಸ್ವಾಬ್ ಪರೀಕ್ಷೆಯಲ್ಲಿ ಲಂಗ್ಯಾ ವೈರಸ್ ಕಂಡು ಬಂದಾಗ ಸಂಶೋಧಕರು ಹಿಂದಿನ ದಾಖಲೆಗಳನ್ನು ತೆಗೆದು ಪರಿಶೀಲಿಸಿದಾಗ ಡಿಸೆಂಬರ್ 2018 ಮತ್ತು ಮೇ 2021ರ ಮಧ್ಯೆ ಚೀನಾದ ಶಾನ್ ಡಾಂಗ್ ಮತ್ತು ಹೆನಾನ್ ಪ್ರಾಂತ್ಯಗಳಲ್ಲಿ 35 ಜನರಲ್ಲಿ ಈ ವೈರಸ್‌ನ ಇರುವಿಕೆ ಕಂಡುಬಂದಿದೆ.

ಇವರಲ್ಲಿ ಹೆಚ್ಚಿನವರು ರೈತರು ಎಂಬುದು ಗಮನಿಸಬೇಕಾದ ಅಂಶ. ಇವರಲ್ಲಿ 26 ಜನರಲ್ಲಿ ರೋಗ ಲಕ್ಷಣಗಳು ಕಂಡು ಬಂದಿ
ದ್ದವು. ಜ್ವರ, ಸುಸ್ತು,ಮೈಕೈ ನೋವು ಮಾಂಸಖಂಡಗಳ ಒಳಗೆ ನೋವು, ವಾಂತಿ ಬರುವ ಲಕ್ಷಣ, ತಲೆನೋವು, ವಾಂತಿ ಬರುವುದು – ಈ ರೀತಿಯ ಲಕ್ಷಣಗಳು. ಅರ್ಧಕ್ಕೂ ಹೆಚ್ಚು ಜನರಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆ
ಯಾಗಿತ್ತು. ಅಂದರೆ ವೈರಸ್ ವಿರುದ್ಧ ಹೋರಾಡುವ ಶಕ್ತಿ ರಕ್ತಕ್ಕೆ ಕಡಿಮೆಯಾಗಿತ್ತು ಎಂದು ಅರ್ಥ.

ಸುಮಾರು ಶೇ.35 ಜನರಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿತ್ತು. ಪರಿಣಾಮ ಎಂದರೆ ರಕ್ತ ಸರಿಯಾಗಿ ಹೆಪ್ಪುಗಟ್ಟುವುದಿಲ್ಲ. ಶೇ.35 ಜನರಲ್ಲಿ ಲಿವರ್‌ನಲ್ಲಿ ತೊಂದರೆ ಕಾಣಿಸಿಕೊಂಡರೆ ಶೇಕಡ ಎಂಟು ಜನರಲ್ಲಿ ಕಿಡ್ನಿಯಲ್ಲಿ ತೊಂದರೆ ಇತ್ತು. ಮೊದಲು ತಿಳಿಸಿದಂತೆ ಈ ವೈರಸ್‌ನ ಮೂಲ ವಿವಿಧ ಪ್ರಾಣಿಗಳು, ಅಲ್ಲದೆ ಮನುಷ್ಯರಿಂದ ಮನುಷ್ಯರಿಗೆ ಹರಡುವ ಬಗ್ಗೆ ಸಂಶೋಧಕರಿಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಈ ವೈರಸ್ ತುಂಬಾ ಅಪಾಯಕಾರಿಯೇ ?
ಸೋಂಕಿತ ವ್ಯಕ್ತಿಗಳಲ್ಲಿ ಇದುವರೆಗೆ ಮರಣ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ ಕೆಲವರಲ್ಲಿ ಶ್ವಾಸಕೋಶದ ಸೋಂಕು ನ್ಯುಮೋನಿಯಾ ಕಂಡುಬಂದಿತ್ತು. ಈ ವೈರಸ್ ಬಗ್ಗೆ ಹಲವು ಜಾಗತಿಕ ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹನಿಪಾ ವೈರಸ್‌ಗಳು ಸಾಮಾನ್ಯವಾಗಿ ಜನರಿಂದ ಜನರಿಗೆ ಹರಡುವುದಿಲ್ಲ. ಹಾಗಾಗಿ ಲಂಗ್ಯಾ ವೈರಸ್ ಸಾಂಕ್ರಾಮಿಕದ ರೀತಿ ಕಾಣಿಸಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಆಲಿವರ್ ರೆಸ್ಟಿ- ಅಭಿಪ್ರಾಯ ಪಡುತ್ತಾರೆ. ಈ ಗುಂಪಿನ ವೈರಸ್‌ಗಳಲ್ಲಿ ನಿಫಾ ವೈರಸ್ ಮಾತ್ರ ಜನರಿಂದ ಜನರಿಗೆ ಸೋಂಕು ಹರಡಬಲ್ಲದು.

ಇಷ್ಟು ವರ್ಷಗಳಲ್ಲಿ ಲಂಗ್ಯಾ ವೈರಸ್ ಬಹಳ ನಿಧಾನವಾಗಿ ಹರಡಿದ್ದು, ಹಾಗಾಗಿ ತುಂಬಾ ಕಡಿಮೆ ರೋಗಿಗಳಲ್ಲಿ ಕಾಣಿಸಿ ಕೊಂಡಿರುವುದರಿಂದ ಇದು ವೇಗವಾಗಿ ಹರಡುವ ವೈರಸ್ ಅಲ್ಲ ಎಂದು ಲಂಡನ್ನಿನ ವಿಶ್ವವಿದ್ಯಾಲಯದ ಕಾಲೇಜಿನ
ಫಾಂಕೋವಿಸ್ ಬಕ್ಸ್ ಅಭಿಪ್ರಾಯಪಡುತ್ತಾರೆ. ಆದರೆ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಯಾವುದೇ ಸಾಂಕ್ರಾಮಿಕವೂ ಪ್ರಾಣಿ ಗಳಿಂದ ಮಾನವನಿಗೆ ಹಬ್ಬುವ ವೈರಸ್ಸೇ ಆಗಿರುತ್ತದೆ ಎಂದು ಅವರ ಖಚಿತ ಅಭಿಪ್ರಾಯ.

ಕರೋನಾ, ಮಂಕಿ ಪಾಕ್ಸ್, ಮಾರ್ ಬರ್ಗ್ ಹಾಗೂ ಈಗಿನ ಲಂಗ್ಯಾ ವೈರಸ್ – ಇವುಗಳ ಹಿನ್ನೆಲೆಯಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಬರುವ ಕಾಯಿಲೆಗಳ ಬಗ್ಗೆ ವಿಜ್ಞಾನಿಗಳ ಗಮನ ವಿಶೇಷವಾಗಿ ಹರಿದಿದೆ. ಇದರ ಮೂಲ ಕಾರಣಗಳನ್ನು ವಿಜ್ಞಾನಿ
ಗಳು ಅರಸುತ್ತ ಹೋದಹಾಗೆ ಅವರಿಗೆ ಗೋಚರವಾದ ಮುಖ್ಯ ಕಾರಣ ಅರಣ್ಯ ನಾಶ. ಹಲವು ಅಧ್ಯಯನಗಳ ಪ್ರಕಾರ ಈ ರೀತಿಯ ಅರಣ್ಯ ನಾಶ ಆದ ಹಾಗೆ ಅಲ್ಲಿನ ಪ್ರಾಣಿಗಳು ಮಾನವರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು.

ಆಗ ಪ್ರಾಣಿಗಳಿಂದ ವೈರಸ್ ಮನುಷ್ಯರಿಗೆ ರವಾನೆಯಾಗುತ್ತದೆ. ಹೌದು, ಮಾನವನು ಸಂಪತ್ತನ್ನು ಹಾಳುಗೆಡವುವಲ್ಲಿ ಅಗ್ರಗಣ್ಯ ಜೀವಿ. ಪ್ರಕೃತಿಯ ಮುಖ್ಯ ಸಂಪತ್ತು ವನ್ಯಜೀವಿ ಹಾಗೂ ಅರಣ್ಯ ಸಂಪತ್ತು. ಅಂದರೆ ಕಾಡನ್ನು ಹಂತಹಂತವಾಗಿ ವ್ಯವಸ್ಥಿತ ರೀತಿಯಲ್ಲಿ ಮನುಷ್ಯ ಹನನ ಮಾಡುತ್ತ ಬಂದಿದ್ದಾನೆ.

ಅಲ್ಲಿನ ಭೂಮಿಯನ್ನು ಸಮತಟ್ಟು ಮಾಡಿ ವ್ಯವಸಾಯ ಮಾಡಲು ಇರಬಹುದು. ಹಾಗೆಯೇ ಅಲ್ಲಿ ಅರಣ್ಯ ಧ್ವಂಸಮಾಡಿ ಮನೆಕಟ್ಟಿ ವಾಸಿಸಲೂ ಆಗಿರಬಹುದು. ಈ ರೀತಿಯ ಅರಣ್ಯ ನಾಶವಾದ ಹಾಗೆ ಕಾಡಿನಲ್ಲಿರುವ ಪ್ರಾಣಿಗಳು ತಮ್ಮ ರಕ್ಷಣಾ ಕವಚವನ್ನು ಕಳೆದುಕೊಳ್ಳುತ್ತವೆ. ಪರಿಣಾಮ ಎಂದರೆ ಅರಣ್ಯ ಬಯಲಾಗಿ ಬಯಲಾದ ಸ್ಥಳದಲ್ಲಿಯೇ ಪ್ರಾಣಿಗಳು ವಾಸಿಸಬೇಕಾಗುತ್ತದೆ. ನಂತರದ ಪರಿಣಾಮ ಮೇಲೆ ತಿಳಿಸಿದ ಹಲವು ಅಪಾಯಕಾರಿ ವೈರಸ್ ಗಳು ಮನುಷ್ಯರಿಗೆ ದಾಟುತ್ತವೆ. ತುಂಬಾ ಗಂಭೀರವಾದ ಕಾಯಿಲೆ ತರುತ್ತವೆ.

ಅಮೆರಿಕದ ಪ್ರತಿಷ್ಠಿತ ವೈಜ್ಞಾನಿಕ ನಿಯತಕಾಲಿಕ Proceedings of the National Academy of USA ದ ಪ್ರಕಾರ ಮನುಷ್ಯನಿಗೆ ಬರುವ ರೋಗಗಳಲ್ಲಿ ಅರ್ಧಕ್ಕಿಂತ ಹೆಚ್ಚು ರೋಗಗಳು ಪ್ರಾಣಿಗಳ ಮೂಲದಿಂದಲೇ ಬರುವುದು. ಅಂದರೆ ರೋಗ ಉಂಟುಮಾಡುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಮಾನವನಲ್ಲದ ಬೇರೆ ಪ್ರಾಣಿಗಳಲ್ಲಿ ಕಾಣಿಸಿಕೊಂಡು ಕ್ರಮೇಣ ಮನುಷ್ಯನಿಗೆ ವರ್ಗಾವಣೆ ಹೊಂದುತ್ತವೆ. ಹೀಗೆ ಆಗಲು ವಿಜ್ಞಾನಿಗಳು ಹಲವಾರು ಕಾರಣಗಳನ್ನು ಗುರುತಿಸಿದ್ದಾರೆ.

ಈ ಕಾರಣಗಳಲ್ಲಿ ಹಲವು ಕಾರಣಗಳು ಒಂದಕ್ಕೊಂದು ಸಂಬಂಧ ಹೊಂದಿವೆ. ಮುಖ್ಯವಾದ ಕಾರಣಗಳು – ಮಾನವನ ಆಶೋತ್ತರ ಹೆಚ್ಚುತ್ತಿದೆ, ಕ್ರಮೇಣ ಜನಸಂಖ್ಯೆಯು ಹೆಚ್ಚುತ್ತಿದೆ. ಮೊದಲಿಗಿಂತ ತೀವ್ರವಾದ ಕೃಷಿ ಚಟುವಟಿಕೆಗಳು ಜಾಸ್ತಿ ಯಾಗುತ್ತಿವೆ. ಪರಿಣಾಮ ಎಂದರೆ ವಾತಾವರಣ, ಪರಿಸರ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿದೆ.

ಮನುಷ್ಯ ತನ್ನ ವಸತಿ ಸ್ಥಾನಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾನೆ, ಜೀವವೈವಿಧ್ಯತೆ ಕಡಿಮೆ ಆಗುತ್ತಿದೆ. ಇವೆಲ್ಲವುಗಳ ಪರಿಣಾಮ ಕಾಡು ಪ್ರಾಣಿಗಳ ಜತೆಗೆ ಮಾನವ ನೇರ ಸಂಪರ್ಕಕ್ಕೆ ಬರುತ್ತಿದ್ದಾನೆ. ಅಥವಾ ಡೇರಿಗೆ ಸಂಬಂಧಪಟ್ಟ ಪ್ರಾಣಿಗಳು ಅಥವಾ ಮತ್ತಿತರ ಪ್ರಾಣಿಗಳ ಸಾಕುವಿಕೆಯ ದೆಸೆಯಿಂದ ಪರೋಕ್ಷವಾಗಿ ಸಂಪರ್ಕಕ್ಕೆ ಬರುತ್ತಿದ್ದಾನೆ. ಒಟ್ಟೂ ಪರಿಣಾಮವೇ ಕರೋನಾ, ಮಂಕಿ ಪಾಕ್ಸ್, ಮಾರ್ ಬರ್ಗ್, ಲಂಗ್ಯಾ – ಈ ರೀತಿಯ ವೈರಸ್‌ಗಳು ಮಾನವನಲ್ಲಿ ಕಾಣಿಸಿಕೊಂಡು ನಾನಾ ರೀತಿಯಲ್ಲಿ ತೊಂದರೆ ಕೊಡುತ್ತಿವೆ. ಹಾಗಾಗಿ ಅರಣ್ಯ ನಾಶ, ವಾತಾವರಣದ ಬದಲಾವಣೆ ಮತ್ತು ಮಾನವನ ಬಡತನ – ಈ ಎಲ್ಲ ಕಾರಣಗಳಿಂದ ಮೇಲಿನ ರೀತಿಯ ಕಾಯಿಲೆಗಳು ಉಗಮವಾಗುತ್ತವೆ ಎಂದು ಮೊದಲು ತಿಳಿಸಿದ ಅಧ್ಯಯನ ನಡೆಸಿದ
ಅಮೆರಿಕದ ವಿeನಿಗಳಾದ ಲಾರಾ ಬ್ಲೂಮ್ ಫೀಲ್ಡ್  ಮತ್ತು ಪ್ರೊ. ಏರಿಕ್ ಲ್ಯಾಂಬಿನ್ ಅಭಿಪ್ರಾಯ ಪಡುತ್ತಾರೆ.

ಇವರು ತಮ್ಮ ಅಧ್ಯಯನಕ್ಕೆ ಆಫ್ರಿಕಾ ಖಂಡದ ಉಗಾಂಡಾದ ಕೆಲವು ಪ್ರದೇಶಗಳನ್ನು ಆರಿಸಿಕೊಂಡಿದ್ದರು. ಅರಣ್ಯದ ಆಸುಪಾಸಿನ ವಾಸಿಸುತ್ತಿರುವ ಜನಸಮೂಹವು ಇಲ್ಲಿ ಇತ್ತು. ಒಂದು ಕಾಲದಲ್ಲಿ ಅರಣ್ಯ ಭೂಮಿ ಎಂದು ಗುರುತಿಸಿಕೊಂಡಿದ್ದ ಸ್ಥಳ ಈಗ ನಾಡಿನ ಭೂಮಿಯಾಗಿ ಮಾರ್ಪಟ್ಟಿರುವುದು ಹಾಗೂ ಈ ಎರಡೂ ರೀತಿಯ ಭೂಮಿಗಳು ಅಕ್ಕ ಪಕ್ಕದಲ್ಲಿಯೇ ಇವೆ. ಈ ಪ್ರದೇಶಗಳಲ್ಲಿ ಮಾನವನು ಕೃಷಿ ಭೂಮಿ ವಿಸ್ತರಿಸುತ್ತ ಅರಣ್ಯ ಪ್ರದೇಶಗಳನ್ನು ಬೋಳಿಸಿ ಕೃಷಿ ಭೂಮಿಯಾಗಿ ಮಾರ್ಪಡಿ ಸಿದ್ದಾನೆ. ಮಾರ್ಪಾಟಾದ ಕೃಷಿ ಭೂಮಿಯ ಮಧ್ಯೆ ಮಧ್ಯೆ ದ್ವೀಪದ ತರದಲ್ಲಿ ಅರಣ್ಯವೂ ಸ್ವಲ್ಪ ಸ್ವಲ್ಪ ಇದೆ. ಹಾಗಾದಾಗ ಅರಣ್ಯದಲ್ಲಿ ವಾಸಿಸುತ್ತಿದ್ದ ಹಲವು ಪ್ರಾಣಿಗಳ ಸಂಪರ್ಕದಲ್ಲಿ ಮನುಷ್ಯ ನೇರವಾಗಿ ಬರುತ್ತಿದ್ದಾನೆ.

ತನ್ನ ಕೃಷಿಗೆ ಅನುಕೂಲವಾಗಲೆಂದು ಸಾಕಿದ ಹಸು, ಕುರಿ ಅಥವಾ ಕೋಳಿಗಳ ಮೂಲಕ ಪರೋಕ್ಷವಾಗಿ ಕಾಡು ಪ್ರಾಣಿಗಳ ಸಂಪರ್ಕಕ್ಕೆ ಬರುತ್ತಿದ್ದಾನೆ. ಕಾಡು ಪ್ರಾಣಿಗಳಿಂದ ನೇರವಾಗಿ ರವಾನೆಯಾದ ಕಾಯಿಲೆಗಳಲ್ಲಿ ಮುಖ್ಯವಾಗಿ ಹೆಸರಿಸಬಹು ದಾದದ್ದು 1980 ರ ದಶಕದಲ್ಲಿ ಮೊದಲ ಬಾರಿಗೆ ಕಾಣಿಸಿದ ಏಡ್ಸ್ ಮತ್ತು ಈಗ ನಮಗೆ ತೊಂದರೆ ಕೊಡುತ್ತಿರುವ ಕೋವಿಡ್-19.

ಮಾನವನ ಧೋರಣೆಗಳು: ಅಮೆರಿಕದ ವಿಜ್ಞಾನಿಗಳು ಅಲ್ಲಿ ಮನುಷ್ಯರ ಧೋರಣೆಗಳು ಹಾಗು ವರ್ತನೆಗಳನ್ನು ಸಹಿತ
ಅಧ್ಯಯನ ಮಾಡಿದ್ದಾರೆ. ಅವರು ಈ ಅಧ್ಯಯನಕ್ಕೆ ಅಲ್ಲಿನ ರೈತರ ನೇರ ಸಂದರ್ಶನ ಮಾಡಿದುದೇ ಅಲ್ಲದೆ ಉಪಗ್ರಹ ಮೂಲಕ ಮನುಷ್ಯ ವರ್ತನೆಯನ್ನು ಅಧ್ಯಯನ ಮಾಡಿದ್ದಾರೆ. ಅರಣ್ಯ ಹತ್ತಿರ ಕೃಷಿ ಮಾಡುತ್ತಿರುವ ರೈತರು ತಮ್ಮ ಹಲವಾರು ಅಗತ್ಯಗಳಿಗೆ ಉದಾಹರಣೆಗೆ ಮನೆ ಕಟ್ಟಲು ಬೇಕಾದ ಸಾಮಗ್ರಿಗಳಿಗಾಗಿ ಅರಣ್ಯವನ್ನು ಪ್ರವೇಶ ಮಾಡುತ್ತಾರೆ.

ಅಲ್ಲಿರುವ ದೊಡ್ಡ ದೊಡ್ಡ ಮರಗಳಿಗಾಗಿ ಅರಣ್ಯದ ಒಳಭಾಗಕ್ಕೇ ಲಗ್ಗೆ ಇಡುತ್ತಾರೆ. ಆಗ ರೈತರು ಕಾಡಿನ ಪ್ರಾಣಿಗಳ
ಸಂಪರ್ಕಕ್ಕೆ ಬರುವ ಸಾಧ್ಯತೆ ಜಾಸ್ತಿ. ಹಾಗಾಗಿ ಅವರು ಒಂದು ಸಲಹೆ ನೀಡುತ್ತಾರೆ. ಅದೆಂದರೆ ಕಾಡು ಮತ್ತು ಮಾನವನ ವಾಸಸ್ಥಾನಗಳ ಮಧ್ಯೆ ಬಫರ್ ಝೋನ್ ಅಂತ ಪ್ರತ್ಯೇಕ ಸ್ಥಳಗಳನ್ನು ನಿಗದಿಪಡಿಸಿದರೆ ಈ ರೀತಿಯ ಪ್ರಾಣಿ ಮನುಷ್ಯ ಸಂಪರ್ಕ ಕಡಿಮೆ ಮಾಡಲು ಸಾಧ್ಯ.

ಪ್ರಾಣಿಜನ್ಯ ಕಾಯಿಲೆಗಳು: ಮೇಲೆ ತಿಳಿಸಿದಂತೆ ಪ್ರಾಣಿಗಳಿಂದ ಮನುಷ್ಯರಿಗೆ ಹಲವಾರು ಕಾಯಿಲೆಗಳು ಬರುತ್ತವೆ. ಒಂದು
ಅಂದಾಜಿನ ಪ್ರಕಾರ ಮನುಷ್ಯನಿಗೆ ಬರುವ ಶೇ.61 ರೋಗಗಳು ಪ್ರಾಣಿಜನ್ಯವಾದವುಗಳು. ಅಲ್ಲದೆ ಕಳೆದ ದಶಕದಲ್ಲಿ ಹೊಸದಾಗಿ ಕಂಡುಬಂದ ಕಾಯಿಲೆಗಳಲ್ಲಿ ಶೇ.75 ಕಾಯಿಲೆಗಳು ಪ್ರಾಣಿಜನ್ಯ ಕಾಯಿಲೆಗಳು. ಪ್ರಾಣಿಗಳಲ್ಲಿ ಇರುವ
ಬ್ಯಾಕ್ಟೀರಿಯಾ -ಂಗಸ್ ಪರಾವಲಂಬಿ ಜೀವಿಗಳು ಹಾಗೂ ವೈರಸ್ ಗಳು- ಇವುಗಳ ಮೂಲಕ ಮನುಷ್ಯನಿಗೆ ರೋಗ ಬರುತ್ತದೆ.

ಪ್ರಚಲಿತ ಪ್ರಾಣಿಜನ್ಯ ಕಾಯಿಲೆಗಳೆಂದರೆ – ರೇಬೀಸ್, ಮಲೇರಿಯಾ, ಡೆಂ, ಚಿಕೂನ್ ಗುನ್ಯಾ, ಮಂಗನ ಕಾಯಿಲೆ, ಸಾನ್ಮೆನೆ ಸೋಂಕು, ಈ ಕೋಲೈ ಸೋಂಕು, ಆಂತ್ರಾಕ್ಸ್, ಹಕ್ಕಿ ಜ್ವರ, ಎಬೋಲಾ, ಝೀಕಾ ಜ್ವರ, ಹಂದಿ ಜ್ವರ ಇತ್ಯಾದಿ. ಹಾಗಾಗಿ ಈ ರೀತಿಯ ಕಾಯಿಲೆಗಳು ಬರದಿರುವಂತೆ ಪ್ರಯತ್ನಗಳಾಗಬೇಕಿದೆ.