ತೆಲಂಗಾಣದ ಶಿಲ್ಪಕಲಾ ವೇದಿಕೆಯಲ್ಲಿ ಸ್ಟ್ಯಾಂಡಪ್ ಕಾಮಿಡಿ ಯನ್ ಮುನಾವರ್ ಫಾರೂಕಿ ಶನಿವಾರ ಕಾಮಿಡಿ ಪ್ರದರ್ಶನ ನೀಡಲಿದ್ದು, ವೇದಿಕೆಗೆ ಬೆಂಕಿ ಇಡುವುದಾಗಿ ಹೇಳಿ ತೆಲಂಗಾಣದ ಘೋಷಾಮಹಲ್ ಬಿಜೆಪಿ ಶಾಸಕ ರಾಜಾ ಸಿಂಗ್ ಹೊರಟಿದ್ದರು. ಈ ಸಂದರ್ಭದಲ್ಲಿ ಹೈದರಾಬಾದ್ ಪೊಲೀಸರು ಶಾಸಕರನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನ ಜೆ.ಪಿ.ನಗರದ ಎಂಎಲ್ಆರ್ ಕನ್ವೆನ್ಷನ್ ಹಾಲ್ನಲ್ಲಿ ಇಂದು ಮುನಾವರ್ ಫಾರೂಕಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಬುಕ್ ಮೈಶೋನಲ್ಲಿ ಇದರ ಆನ್ಲೈನ್ ಟಿಕೆಟ್ ಬುಕಿಂಗ್ ನಡೆಯುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ಇದ್ದ ಈ ಕಾರ್ಯಕ್ರಮ ರದ್ದುಗೊಂಡಿದೆ.