ತುಮಕೂರು: ಹಾಲಿ ಸಚಿವ ಮಾಧುಸ್ವಾಮಿ ಹಾಗೂ ತುಮಕೂರು ಗ್ರಾಮೀಣ ಮಾಜಿ ಶಾಸಕ ಸುರೇಶ್ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಕೆ.ಎನ್ ರಾಜಣ್ಣ ಅವರ ಹೇಳಿಕೆಯನ್ನು ಮಾಜಿ ಶಾಸಕ ಸುರೇಶ್ ಗೌಡ ಅಲ್ಲೆಗಳೆ ದಿದ್ದು ಬಿಜೆಪಿಗೆ ಬರುವಂತೆ ಕೆ.ಎನ್. ರಾಜಣ್ಣ ಅವರಿಗೆ ಆಹ್ವಾನ ಕೊಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ಒಂದನೇ ಕ್ಲಾಸ್‌ನಿಂದ ಬಿಜೆಪಿ ಪಾಠ ಒದಿಕೊಂಡು ಬಂದಿದ್ದೇನೆ. ಈಗ ನಾನು ಪಕ್ಷದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದೇನೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೊಗಲ್ಲ ಎಂದು ಸ್ಪಷ್ಟಪಡಿಸಿದರು. ಕೆ.ಎನ್. ರಾಜಣ್ಣ ಅವರನ್ನು ಸುಮಾರು ಆರು ತಿಂಗಳ ಹಿಂದೆ ಭೇಟಿ ಮಾಡಿದ್ದು ನಿಜ ಆಗ ಅವರು ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ನೀಡಿದ್ದರು. ನಾನು ಈಗಾಗಲೇ ರಾಜಣ್ಣ ಅವರಿಗೆ ಸ್ಪಷ್ಟನೆ ನೀಡಿದ್ದೇನೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಬರೋದಿಲ್ಲ. ನಾನು ನಾಲ್ಕು ಭಾರಿ ಬಿಜಿಪಿಯಲ್ಲಿ ಸ್ಪರ್ಧೆ ಮಾಡಿದ್ದೇನೆ.
ಎರಡು ಭಾರಿ ಜಿಲ್ಲಾ ಅಧ್ಯಕ್ಷನಾಗಿ ಎರಡು ಭಾರಿ ಸ್ಟೇಟ್ ಸೆಕ್ರೆಟರಿಯಾಗಿ ಕೆಲಸ ಮಾಡಿದ್ದೇನೆ. ನಾನು ೨೫ ವರ್ಷ ಸೀನಿಯರ್. ನನ್ನನ್ನು ರಾಜ್ಯಮಟ್ಟಕ್ಕೆ ಕರೆದುಕೊಂಡು ಹೋಗಿ ಬೆಳೆಸಿರುವ ಪಕ್ಷ ಬಿಜೆಪಿ. ದೇಶಕ್ಕಾಗಿ ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿ ಪಕ್ಷ. ನನ್ನ ವಿಚಾರಗಳು ಬಂದಾಗ ಈ ರೀತಿಯಾದ ಹೇಳಿಕೆಗಳನ್ನು ಕೊಡದಂತೆ ನಾನು ರಾಜಣ್ಣ ಅವರ ಬಳಿ ಮನವಿ ಮಾಡುತ್ತೇನೆ ಎಂದರು.
ಬಿಜೆಪಿಗೆ ಬರುವಂತೆ ಆಹ್ವಾನ : ರಾಜಣ್ಣ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಅವರಿಗೆ ಪಕ್ಷ ಮುಖ್ಯ ಅಲ್ಲ. ಅವರೀಗ ಕಾಂಗ್ರೆಸ್‌ನಲ್ಲಿ ಇರಬಹುದು. ಅವರು ಸಿದ್ದರಾಮಯ್ಯ ಬೆಂಬಲಿಗರು. ಅವರು ಯಾವಗಲೂ ಹೇಳುತ್ತಾರೆ ನಾನು ಯಾವ ಪಕ್ಷನೂ ಅಲ್ಲ ನನ್ನ ಯಾರೂ ಮಂತ್ರಿ ಮಾಡೋತ್ತಾರೋ ಆ ಪಕ್ಷಕ್ಕೆ ಸೇರಿಕೊಳ್ಳುತ್ತೇನೆ ಎಂದು ನಾನು ರಾಜಣ್ಣ ಅವರಿಗೆ ಮನವಿ ಮಾಡುತ್ತೇನೆ ಮಧುಗಿರಿಗೆ ಬನ್ನಿ ನಿಮಗೆ ನಾವು ಬಿಜೆಪಿಯಿಂದ ಟಿಕೆಟ್ ನೀಡುತ್ತೇವೆ. ಅವಕಾಶ ಸಿಕ್ಕಿದರೆ ನಿಮಗೆ ನಾವು ಮಂತ್ರಿಯನ್ನು ಮಾಡುತ್ತೇವೆ. ನೀವು ಸಿದ್ದರಾಮಯ್ಯ ಅವರ ಬೆಂಬಲಿಗರಾಗಿರುವುದರಿ0ದ ನೀವು ಮತ್ರಿಯಾಗಲು ಡಿ.ಕೆ.ಶಿವಕುಮಾರ್ ಅವರು ಬಿಡುವುದಿಲ್ಲ. ನೀವು ಎಲ್ಲ ಸಮಯದಲ್ಲಿಯೂ ನಮಗೆ ಸಹಾಯ ಮಾಡಿದ್ದೀರಾ. ಪಾರ್ಲಿಮೆಂಟ್ ಚುನಾವಣೆಯಲ್ಲಿಯೂ ಸಹ ಮೋದಿಯವರು ಪ್ರಧಾನಿಯಾಗಬೇಕು ಎಂದು ಹೇಳಿ ನಮಗೆ ಸಹಾಯ ಮಾಡಿದ್ದಾರೆ.
ಕೊರಟಗೆರೆಯಲ್ಲಿಯೂ ಎಲ್ಲರೂ ಸೇರಿ ಮೋದಿಯವರು ಪ್ರಧಾನಿಯಾಗುವಂತೆ ಸಹಾಯ ಮಾಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅಸ್ತಿತ್ವವಿಲ್ಲ. ಆದ್ದರಿಂದ ರಾಜಣ್ಣ ಅವರು ಬಿಜೆಪಿಗೆ ಬರಲಿ ಅವರಿಗೆ ಒಳ್ಳೆ ಭವಿಷ್ಯವಿದೆ ಎಂದರು. ಸಿಎಂ ಬದಲಾವಣೆ ವಿಚಾರ ಸಂಬAಧ ಮಾತನಾಡಿ, ನಾನು ಅವತ್ತು ಹೇಳಿದ್ದು ಮುಖ್ಯಮಂತ್ರಿ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆರು ತಿಂಗಳು ಇದ್ದಾಗಲೂ , ವರ್ಷವಿದ್ದಾಗಲೂ ಬದಲಾವಣೆ ಮಾಡಿದೆ ಎಂದು ಆದರೆ ಮಾಧ್ಯಮಗಳಲ್ಲಿ ಗೊಂದಲ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಬದಲಾವಣೆ ನನ್ನ ಕೈಯಲ್ಲಿ ಇಲ್ಲ. ಅದು ಹೈಕಮಾಂಡ್ ಬಿಟ್ಟ ವಿಚಾರ ಎಂದರು. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಆಪರೇಷನ್ ನಡೆದಿದೆ.
ಗುಬ್ಬಿ ಶ್ರೀನಿವಾಸ್ ಅವರನ್ನು ೧೦ ವರ್ಷದ ಹಿಂದೆ ಕರೆದಿದ್ದೆವು. ದೇವೆಗೌಡರು ಹಾಗೂ ಕುಮಾರಸ್ವಾಮಿ ಅವರು ಅವರಿಗೆ ಜೆಡಿಎಸ್‌ನಲ್ಲಿ ಅಸ್ತಿತ್ವ ಇಲ್ಲದಂಗೆ ಮಾಡಿದ್ದಾರೆ. ಗೌರಿಶಂಕರ್ ಬಿಜೆಪಿಗೆ ಬರಲು ಒಪ್ಪಿದ್ದರು. ೪ ವರ್ಷದ ಮುಂಚೆ ಬರ್ತಿವಿ ಅಂತಾ. ಯಡಿಯೂರಪ್ಪ ಸರ್ಕಾರ ಮಾಡವ ಸಂದರ್ಭದಲ್ಲಿ ಹೇಳಿದ್ದರು. ಈಗ ಬಂದರೂ ಗೌರಿಶಂಕರ್ ಅವರನ್ನು ಸ್ವಾಗತ ಮಾಡ್ತಿನಿ. ಬಿಜೆಪಿ ಪಕ್ಷಕ್ಕೆ ಬಂದ್ರೆ ಗೌರಿಶಂಕರ್‌ಗೆ ದೊಡ್ಡಬಳ್ಳಾಪುರದಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.