ಬೆಂಗಳೂರು
ರಾಜ್ಯದಲ್ಲಿ ಇದುವರೆಗೆ ಕೊರೋನಾ ಸೋಂಕು ವರದಿಗಳಲ್ಲಿ ಮಹಾರಾಷ್ಟ್ರ ಮೂಲದವರೇ ಅತಿ ಹೆಚ್ಚು ಮಂದಿಯಾಗಿದ್ದಾರೆ.
ಕಳೆದ ೨೪ ಗಂಟೆಗಳ ಒಟ್ಟಾರೆ ಪ್ರಕರಣಗಳಲ್ಲಿ ಶೇಕಡ ೫೩ ರಷ್ಟು ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ನೆರೆ ರಾಜ್ಯಕ್ಕೆ ತೆರಳಿದ್ದ ಕೂಲಿ ಕಾರ್ಮಿಕರು, ಟೆಕ್ಕಿಗಳು, ವ್ಯಾಪಾರಸ್ಥರು, ಮಕ್ಕಳು, ಹಿರಿಯ ನಾಗರಿಕರು ಎಲ್ಲಾ ವರ್ಗದ ಜನರು ರಾಜ್ಯಕ್ಕೆ ಮರಳಿದ್ದಾರೆ. ಹೀಗೆ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಬಹುತೇಕರು ಸೋಂಕಿತರಾಗಿದ್ದು, ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸೋಂಕಿತರು ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿದ್ದವರಾಗಿದ್ದಾರೆ.
ಈಗಾಗಲೇ ಸೋಂಕು ಇದ್ದವರ ಸಂಪರ್ಕಕ್ಕೆ ಬಂದವರಲ್ಲಿ ಶೇಕಡಾ ೮ ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಇರುವವರಲ್ಲಿ ಶೇಕಡಾ ೩ ಜನ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮತ್ತು ಮಥುರಾ ಪ್ರಯಾಣದ ಮೂಲ ಇರುವವರಲ್ಲಿ ಸೋಂಕಿನ ಪ್ರಮಾಣ ಶೇಕಡಾ ೧ ರಷ್ಟಿದೆ.