Tuesday, 26th November 2024

ಉತ್ತಮ ಪ್ರಜೆಗಳನ್ನು ರೂಪಿಸುವುದು ಸಂಸ್ಥೆಯ ಉದ್ದೇಶ : ನಾಡೋಜ ವೂಡೇ ಪಿ.ಕೃಷ್ಣ

ತುಮಕೂರು: ಉತ್ತಮ ಪ್ರಜೆಗಳನ್ನು ರೂಪಿಸುವುದು ಸಂಸ್ಥೆಯ ಉದ್ದೇಶವೆಂದು ಶೇಷಾ ದ್ರಿಪುರಂ ಶಿಕ್ಷಣ ಸಂಸ್ಥೆಯ ಕರ‍್ಯರ‍್ಶಿ, ನಾಡೋಜ ವೂಡೇ ಪಿ.ಕೃಷ್ಣ ತಿಳಿಸಿದರು.

ನಗರದ ಶೇಷಾದ್ರಿಪುರಂ ಪಿ.ಯು.ಕಾಲೇಜಿನಲ್ಲಿ ವಿದ್ಯರ‍್ಥಿಗಳಿಗೆ ಮೆರಿಟ್ ಸ್ಕಾಲರ್ ಶಿಪ್ ವಿತರಿಸಿ ಮಾತನಾಡಿದರು. ನಮ್ಮ ಶಿಕ್ಷಣ ದತ್ತಿಯ ತುಮಕೂರು ಬೆಂಗಳೂರು, ಮಂಡ್ಯ, ಮೈಸೂರು, ಪದವಿ ಪರ‍್ವ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯರ‍್ಥಿಗಳಿಗೆ ೨.೬ ಕೋಟಿ ವಿದ್ಯರ‍್ಥಿ ವೇತನ ವಿತರಿಸುವುದು ಹೆಮ್ಮೆಯಸಂಗತಿ. ಕರೋನ ವೇಳೆ ಸಹ ನಮ್ಮ ಅಧ್ಯಾಪಕರು ಶ್ರಮವಹಿಸಿ ಪಾಠ ಮಾಡಿ ಸಂಸ್ಥೆಗೆ ಹೆಸರು ತಂದರು. ಶಿಕ್ಷಕರೇ ಶಿಕ್ಷಣದ ಆತ್ಮ. ನಮ್ಮ ಸಂಸ್ಥೆಯ ಶಕ್ತಿ ಉತ್ತಮ ಅಧ್ಯಾಪಕರು ಎಂದು ಶ್ಲಾಘಿಸಿದರು.

ಡಾ. ಟಿ. ಹೆಚ್ ಆಂಜನಪ್ಪ ಮಾತನಾಡಿ, ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಮಕ್ಕಳ ಶ್ರೇಯೋ ಭಿವೃದ್ಧಿಗೆ ಶ್ರಮಿಸುವ ನಾಡಿನ ಉತ್ತಮ ಸಂಸ್ಥೆಯಾಗಿದೆ. ನಮ್ಮ ಕಾಲದಲ್ಲಿ ಶಿಕ್ಷಣ ಪಡೆಯು ವುದು ಕಷ್ಟವಾಗಿತ್ತು. ನೀವು ಅದೃಷ್ಟವಂತರು. ನಿಮಗೆ ಸಿಕ್ಕ ಅವಕಾಶಗಳನ್ನು ಬಳಸಿ ಕೊಂಡು ಉತ್ತಮ ಸಾಧನೆ ಮಾಡಿ ಎಂದು ತಿಳಿ ಹೇಳಿದರು.

ಕರ‍್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ರ‍್ಮರ‍್ಶಿ ಡಬ್ಲ್ಯೂ.ಡಿ ಅಶೋಕ್, ಬಿ.ಎಂ ರ‍್ಥಸಾರಥಿ, ಬಿ.ಎ.ಅನಂತರಾಮು, ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ವಿ.ಬಸವರಾಜು, ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಜಿ.ಟಿ., ಜಿ.ಸಿ. ಬರ‍್ಡ್ ಸದಸ್ಯೆ ಶಾಂತಕುಮಾರಿ, ಸಿಬ್ಬಂದಿ, ವಿದ್ಯರ‍್ಥಿಗಳು ಉಪಸ್ಥಿತರಿದ್ದರು.