Tuesday, 26th November 2024

ತಾತನ ಅಂತ್ಯ ಸಂಸ್ಕಾರಕ್ಕೆ ೧ ಕೀ.ಮಿ. ನೀರಿನಲ್ಲೇ ಮಗುವಿನೊಂದಿಗೆ ನಡೆದು ಬಂದ ೧೨ ದಿನದ ಬಾಣಂತಿ ಡಾ.ಮಹರಾಜು

ಮಧುಗಿರಿ: ತಾತನ ಅಂತ್ಯ ಸಂಸ್ಕಾರ ಕ್ಕೆ ತೆರಳಲು ರಸ್ತೆ ಇಲ್ಲದೆ ೧೨ ದಿನದ ಬಾಣಂತಿ ಒಂದು ಕಿ.ಮೀ ನಡೆದ ಮನಕಲಕುವ ಘಟನೆ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯ ಗೌರೆಡ್ಡಿ ಪಾಳ್ಯದ ವಾಸಿ ಪತ್ರ ಕರ್ತ ರಾಮರೆಡ್ಡಿ ತಂದೆ ಶನಿವಾರ ಸಂಜೆ ವಯೋ ಸಹಜ ಖಾಯಿಲೆಯಿಂದ ಮೃತರಾಗಿದ್ದರಿಂದ ಭಾನುವಾರ ಇವರ ಅಂತ್ಯ ಸಂಸ್ಕಾರ ಇಟ್ಟುಕೊಳ್ಳ ಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಬರಬೇಕಿದ್ದ ಸಂಬ0ಧಿಕರು ಜಯಮಂಗಲಿ ನದಿ ತುಂಬಿ ಹರಿಯುತ್ತಿದ್ದರಿಂದ ಬರಲಿಲ್ಲ.

ಆದರೆ, ತಾತನ ಅಂತ್ಯ ಸಂಸ್ಕಾರ ಬಾಗಿಯಾಗಿ ಕೊನೆಯ ಬಾರಿ ಮುಖ ನೋಡಲು ಹಟಕ್ಕೆ ಬಿದ್ದ ಗೌರೆಡ್ಡಿ ಪಾಳ್ಯದ ವಾಸಿ ಜಯಂತಿ ಎಂಬುವರು ೧೨ ದಿನದ ಬಾಣಂತಿಯಾಗಿದ್ದರು ಸಹ ಧೈರ್ಯಮಾಡಿ ಜಯಮಂಗಲಿ ನದಿ ದಡದ ಸಮೀಪ ೧ ಕಿಮೀ ಜಮೀನಿನ ಹೊಲ,ಗದ್ದೆಯ ಬದುಗಳಲ್ಲಿ ನಡೆದು ಬಂದು ತಾತನ ಅಂತ್ಯಕ್ರಿಯೆಯಲ್ಲಿ ಬಾಗಿ.

ಕೊಡಿಗೇನಹಳ್ಳಿಯ ಜಯಮಂಗಲಿ ನದಿ ಅಂಚಿನಲ್ಲಿರುವ ಸುಮಾರು ೫೦ ಕ್ಕು ಹೆಚ್ಚು ಕುಟುಂಬಗಳು ವಾಸವಿದ್ದು ಸೂಕ್ತ ರಸ್ತೆ ಇಲ್ಲದೆ ಅಂತ್ಯ ಸಂಸ್ಕಾರಕ್ಕೆ ತೆರಳಲು ಸಾಧ್ಯವಾಗದೆ ಇಂದಿಗೂ ಪರದಾ ಡುತ್ತಿದ್ದಾರೆ.

ಸೂಕ್ತ ರಸ್ತೆ ಇಲ್ಲದ ಕಾರಣ ಜಯಮಂಗಲಿ ನದಿಯಲ್ಲಿ ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಬಂದು ನದಿ ದಾಟಿ ಅಂತ್ಯ ಸ0ಸ್ಕಾರ ಮಾಡುವ ಪರಿಸ್ಥಿತಿ ಇಂದಿಗೂ ಇದೆ. ಕೊಡಿಗೇನಹಳ್ಳಿಯಿಂದ ಸುಮಾರು ೨ ಕಿಮಿ ದೂರದಲ್ಲಿರುವ ಗೌರೆಡ್ಡಿ ಪಾಳ್ಯದಲ್ಲಿ ಸ್ವಾತಂತ್ರö್ಯ ಪೂರ್ವದಿಂದಲೂ ಸುಮಾರು ೫೦ ರಿಂದ ೬೦ ಕುಟುಂಬಗಳು ತಮ್ಮ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸವಿದ್ದಾರೆ.

ಹೀಗಾದರೆ ನಿತ್ಯ ಶಾಲಾ ಕಾಲೇಜು ಹಾಗೂ ಡೇರಿಗೆ ಹಾಲು ಹಾಕಲು ದಿನಸಿ ಇತ್ಯಾದಿ ತರಲು ಜಯಮಂಗಲಿ ನದಿ ದಡ ಅಥವ ನದಿ ಪಕ್ಕದ ಜಮೀನಿನ ಬದುಗಳನ್ನು ಆಶ್ರಯಿಸಿದ್ದಾರೆ. ಮಳೆ ಬಂದು ನದಿ ಪ್ರವಾಹ ಹೆಚ್ಚಾದಾಗ ವೃದ್ದರು, ವಿದ್ಯಾರ್ಥಿ ಗಳು, ಮಹಿಳೆಯರು, ಗರ್ಭಿಣಿಯರು ಹಾಗೂ ರೋಗಿಗಳ ಪಾಡುಹೇಳ ತೀರದಾಗಿದೆ. ಚುನಾವಣೆ ಸಂದರ್ಭದಲ್ಲಿ ಮತಯಾ ಚಿಸುವ ಅಭ್ಯರ್ಥಿಗಳು ರಸ್ತೆ ಹಾಗೂ ಸೇತುವೆ ಮಾಡಿಸುವ ಭರವಸೆ ನೀಡಿ ಹೋಗುತ್ತಾರೆ. ಆದರೆ ಅವರು ಗೆದ್ದ ನಂತರ ಈ ಕಡೆ ತಿರುಗಿಯು ನೋಡುವುದಿಲ್ಲ. ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನಾದರೂ ಸಂಬ0ಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಾರಾ ಕಾದು ನೋಡಬೇಕಿದೆ.