ತುಮಕೂರು: ತುಮಕೂರು ವಿಶ್ವವಿದ್ಯಾನಿಯದಲ್ಲಿ ಆರಂಭವಾಗಿರುವ ವೀರ ಸಾರ್ಕರ್ ಅಧ್ಯಯನ ಪೀಠ ರದ್ದು ಮಾಡುವಂತೆ ಆಗ್ರಹಿಸಿ ತುಮಕೂರು ಜಿಲ್ಲಾ ಪ್ರಗತಿಪರ ವಿದ್ಯರ್ಥಿಗಳ ಒಕ್ಕೂಟದವತಿಯಿಂದ ಕುಲಪತಿಗೆ ಮನವಿ ಸಲ್ಲಿಸಲಾಯಿತು.
ವಿವಿಯಲ್ಲಿ ಸಾರ್ಕರ್ ಹೆಸರಿನಲ್ಲಿ ಪೀಠ ಆರಂಭಿಸಿ ಕೋಮುಭಾವನೆಯನ್ನು ಸೃಷ್ಟಿಸುವುದು ಸರಿಯಲ್ಲ.ಈಗಿರುವ ಪೀಠಗಳು ಯಾವುದೇ ಅನುದಾನ ವಿಲ್ಲದೆ, ಕರ್ಯಚಟುವಟಿಕೆಗಳಿಲ್ಲದೆ ಕೊರಗುತ್ತಿವೆ. ಶೈಕ್ಷಣಿಕ ವಾತಾವರಣ ಸುಗಮವಾಗಿರಲು ಸಾರ್ಕರ್ ಪೀಠವನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಸಿಂಡಿಕೇಟ್ ಸದಸ್ಯರು ಇಲ್ಲದ ಸಮಯ ನೋಡಿ ಸಾರ್ಕರ್ ಪೀಠ ಸ್ಥಾಪನೆಗೆ ಸಹಕಾರ ನೀಡುತ್ತಿರುವುದು ಸರಿಯಲ್ಲ. ಪೀಠದಿಂದ ಮಕ್ಕಳಿಗೆ ಯಾವುದೇ ಉಪಯೋಗವಿಲ್ಲ, ಕೂಡಲೇ ರದ್ದು ಮಾಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು ಎಂದು ಮುಖಂಡ ರಾಯಸಂದ್ರ ರವಿಕುಮಾರ್ ತಿಳಿಸಿದರು.
ಈ ವೇಳೆ ಕೊಟ್ಟಶಂಕರ್, ಕರಿಯಣ್ಣ, ಎಸ್.ಎಫ್.ಐ ಶಿವಣ್ಣ, ರಂಗಧಾಮಯ್ಯ, ಗೋಪಿ ಇತರರಿದ್ದರು.