Tuesday, 26th November 2024

ಪ್ರೆಸ್ ಕ್ಲಬ್ ಪರ‍್ಕಿನಲ್ಲಿ ಪರಿಸರ ಸ್ನೇಹಿ ಗಣಪತಿ ನಿರ‍್ಮಾಣ ಕಾರ‍್ಯಾಗಾರ

ತುಮಕೂರು: ಪ್ರೆಸ್ ಕ್ಲಬ್ (ಆಲದ ಮರದ) ಪರ‍್ಕಿನಲ್ಲಿ ಜಮಾಯಿಸಿದ್ದ ವಿವಿಧ ಶಾಲೆಗಳ ನೂರಾರು ಮಕ್ಕಳು ಗಣೇಶೋತ್ಸವ ಸಂಭ್ರಮದಲ್ಲಿ ಸಮಾಜದಕ್ಕೆ ಒಳ್ಳೆಯ ಸಂದೇಶ ನೀಡಿದರು.

ರ‍್ಣೋದಯ ರ‍್ಟ್ ಗ್ರೂಪ್ ಟ್ರಸ್ಟ್, ಪ್ರೆಸ್ ಕ್ಲಬ್ ತುಮಕೂರು, ತುಮಕೂರು ಮಹಾನಗರ ಪಾಲಿಕೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಡೆದ ಪರಿಸರ ಸ್ನೇಹಿ ಗಣೇಶಮರ‍್ತಿ ರಚನಾ ಕರ‍್ಯಾಗಾರದಲ್ಲಿ ಸುಂದರ ಗಣೇಶಮರ‍್ತಿಗಳು ಪುಟಾಣಿಗಳ ಕೈಚಳಕ ದಲ್ಲಿ ನರ‍್ಮಾಣವಾದವು.

ಬೃಹತ್ ಆಲದ ಮರದ ನೆರಳಿನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗಣೇಶಮರ‍್ತಿಗಳನ್ನು ನರ‍್ಮಿಸಿದ ಮಕ್ಕಳು ಭವಿಷ್ಯದಲ್ಲಿಯೂ ಪರಿಸರ ಸ್ನೇಹಿ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸುವುದಾಗಿ ಸಂಕಲ್ಪತೊಟ್ಟರು. ಮಕ್ಕಳ ಸಂಭ್ರಮದಲ್ಲಿ ಪೋಷಕರು ಜತೆಯಾಗಿದ್ದರು.

ಸಮಾರಂಭದಲ್ಲಿ ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕರೆಕೊಟ್ಟಾಗ ಈ ಅಭಿಯಾನಕ್ಕೆ ಮಕ್ಕಳೇ ಜಾಸ್ತಿ ಸಾಥ್ ಕೊಟ್ಟಿದ್ದು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಪರಿಸರ ಸ್ನೇಹಿ ಗಣೇಶ ನರ‍್ಮಾಣ ಮಾಡುವ ಮೂಲಕ ಪರಿಸರ ರಕ್ಷಿಸುವ ಪರಿಕಲ್ಪನೆಯನ್ನು ಮಕ್ಕಳಲ್ಲಿ ಬಿತ್ತಲಾಗುತ್ತಿದೆ. ರಾಸಾಯಿನಿಕ ಮಿಶ್ರಿತ ಬಣ್ಣದ ಗಣೇಶ ಈಗ ಮಾರಕಟ್ಟೆಯಲ್ಲಿ ಎಲ್ಲೆಡೆ ರಾರಾಜಿಸುತ್ತಿದೆ. ಈ ಗಣಪನನ್ನು ಕೆರೆ,ಬಾವಿ ನೀರಿನಲ್ಲಿ ವಿರ‍್ಜನೆ ಮಾಡಿದರೆ ಅದರಿಂದ ನೀರು ಮಲೀನಗೊಳ್ಳಲಿದೆ. ಈ ನೀರು ಭೂಮಿ ಸೇರಿ ಗಾಳಿ, ನೀರು, ಮಣ್ಣು ಕಲುಷಿತಗೊಳ್ಳಲಿದೆ. ಇದು ಅಪಾಯಕಾರಿಯಾಗಿದ್ದು ಪ್ರತಿನಿತ್ಯ ದೇಹಕ್ಕೆ ಇದು ಸೇರುತ್ತಿದೆ. ಪರಿಸರ ಸ್ನೇಹಿ ಗಣೇಶನನ್ನು ಪೂಜಿಸೋಣ, ಆರಾಧಿ ಸೋಣ ಎಂದು ಸಲಹೆಕೊಟ್ಟರು.

ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ಮಾತನಾಡಿ, ಪರಿಸರ ಸಂರಕ್ಷಣೆ, ಸ್ವಚ್ಛತೆ ಬಗ್ಗೆ ಜನರಲ್ಲಿ ಎಷ್ಟೆಲ್ಲಾ ಅರಿವು ಮೂಡಿಸುವ ರ‍್ಯವನ್ನು ಕೈಗೊಂಡರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆದು ಪರಿಸರ ಹಾನಿಗೆ ಕಾರಣರಾಗಿದ್ದಾರೆ. ಪರಿಸರ ಸಂರಕ್ಷಣೆ ಬಗ್ಗೆ ಜನರಲ್ಲಿ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸರ‍್ಯ ಆಸ್ಪತ್ರೆ ಮುಖ್ಯಸ್ಥ ಡಾ.ಲಕ್ಷ್ಮಿಕಾಂತ್ ಮಾತನಾಡಿ, ಪರಿಸರ ಮಾಲಿನ್ಯಕ್ಕೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗಿದ್ದೇವೆ. ಜಾಗತಿಕ ತಾಪಮಾನ ಹೆಚ್ಚಳವಾಗಿದೆ. ಹಾಗಾಗಿ, ಪರಿಸರ ಸ್ನೇಹಿ ಗಣೇಶ ನರ‍್ಮಿಸಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಯಾರೂ ರೋಗ ರುಜಿನಗಳಿಗೆ ತುತ್ತಾಗಬಾರದು ಎಂದು ವೈದ್ಯರ ಆಸೆ ಎಂದು ಹೇಳಿದರು.

ರ‍್ಣೋದಯ ರ‍್ಟ್ ಗ್ರೂಪ್ ಟ್ರಸ್ಟ್, ಅಧ್ಯಕ್ಷ ಕಿಶೋರ್ ಕುಮಾರ್, ಪ್ರೆಸ್ ಕ್ಲಬ್ ತುಮಕೂರು ಅಧ್ಯಕ್ಷ ಶಶಿಧರ್ ಎಸ್.ದೋಣಿಹಕ್ಲು, ಉಪಾಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಸತೀಶ್, ಆರ್.ಸಂಗಮೇಶ್, ತೇಜಸ್ವಿನಿ, ಪ್ರೆಸ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.