ನಗರದ ಅಮಾನಿಕೆರೆ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭೋವಿ ಜನ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಈ ಸಮುದಾಯ ದೇಶ ಕಟ್ಟುವ, ದೇವಾಲಯ ಕಟ್ಟುವ ಸಮುದಾಯ. ಈ ಸಮುದಾಯದ ಜೊತೆಗೆ ನನಗೆ 40 ವರ್ಷ ಒಡನಾಟವಿದೆ.
ದುಡಿಮೆಯೇ ದೊಡ್ಡಪ್ಪ ಎಂಬ ಕಾಲವಿದು. ದುಡ್ಡೇ ದೊಡ್ಡಪ್ಪ ಕಾಲವಿತ್ತು, ಈಗಿಲ್ಲ. ನಿಮ್ಮಿಂದ ದೇವಾಲಯ ಗಳು ನಿರ್ಮಾಣವಾಗುತ್ತಿವೆ. ಕಲ್ಲು ರಸ್ತೆ ಮೇಲೆ ಬಿದ್ದಿದ್ದರೆ ತುಳಿದುಕೊಂಡು ಹೋಗುತ್ತಾರೆ ಅದೇ ಕಲ್ಲು ಮೂರ್ತಿ ಯಾದರೆ ಪೂಜೆ ಮಾಡುತ್ತಾರೆ. ಲಯ ಬದ್ದ ಸೂಕ್ಷ್ಮತೆ ಇದ್ದರೇ ನಿಮ್ಮ ಸಮಾಜದಲ್ಲಿ ಮಾತ್ರ. ಕಲ್ಲನ್ನು ಹೇಗೆ ಬೇಕೋ ಹಾಗೆ ಬದಲಾವಣೆ ಮಾಡೋ ಶಕ್ತಿ ಭಗವಂತ ನಿಮಗೆ ನೀಡಿದ್ದಾನೆ ಎಂದರು.
21ನೇ ಶತಮಾನ ಜ್ಞಾನದ ಶತಮಾನವಾಗಿದೆ. ನಿಮ್ಮಲ್ಲಿರುವ ಜ್ಞಾನವೇ ಕಂಪ್ಯೂಟರ್ ಸೈನ್ಸ್ ಆಗಿದೆ. ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಕೋಡಬೇಕಿದೆ. ಈ ಸಮಾಜದ ಅಭಿವೃದ್ಧಿಗಾಗಿ ವಿಶೇಷ ಯೋಜನೆ ಮಾಡಲಾಗಿದೆ. ಎಸ್ಸಿ ಎಸ್ಟಿ ಹಾಸ್ಟೆಲ್ ಗಳನ್ನ ಐದು ಹೊಸದಾಗಿ ನೀಡಲಾಗಿದೆ. ಎಸ್ಸಿ ಎಸ್ಟಿ ಜನಾಂಗದವರಿಗೆ ಉಚಿತವಾಗಿ 75 ಯೂನಿಟ್ ವಿದ್ಯುತ್ ಮಂಜೂರು ಮಾಡಲಾಗಿದೆ. ಇದುವರೆಗೂ ಯಾರು ಮಾಡಿರಲಿಲ್ಲ. ಹಳ್ಳಿಗಳಲ್ಲಿ ವಿದ್ಯುತ್ ಸರಿಯಾಗಿ ಇಲ್ಲ. ಇದೆಲ್ಲಾ ಬದಲಾವಣೆ ಆಗಬೇಕು. ಮಕ್ಕಳಿಗೆ ವಿದ್ಯುತ್ ನೀಡಿದ್ರೆ ಓದುತ್ತಾರೆ, ಉದ್ಯೋಗಿಗಳಾಗುತ್ತಾರೆ. ಎಸ್ಸಿ ಎಸ್ಟಿ ಹೆಣ್ಣು ಮಕ್ಕಳಿಗೆ ಸಾಲ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಹಾಡಿ ಹೊಗಳಿದ ಸಿಎಂ
ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನು ಬೊಮ್ಮಾಯಿ ಹಾಡಿ ಹೊಗಳಿದ್ದಾರೆ. ಎಂತಹ ಸಮಸ್ಯೆಗಳನ್ನು ಸಹ ಎದುರಿಸುವ ಸಾಮರ್ಥ್ಯ ಇದೆ. ಅವರು ಈ ಹುದ್ದೆಯನ್ನು ಕೇಳಿರಲಿಲ್ಲ, ನಾನೇ ಕರೆದು ಕೊಟ್ಟಿದ್ದೇನೆ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರ ಮಾಡುವ ವ್ಯಕ್ತಿ ಮಂಜುನಾಥ್ ಪ್ರಸಾದ್. ವೆಸ್ಟ್ ಬೆಂಗಾಲ್ ನಲ್ಲಿ ಅವರು ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಸೋಲಬಾರದು ಎಂದು ಆಟ ಆಡುವ ಅಧಿಕಾರಿಯಲ್ಲ ಬದಲಾಗಿ ಗೆಲ್ಲಬೆಕೆಂದು ಆಟವಾಡುವ ಅಧಿಕಾರಿ. ಇವರ ಬದುಕು ಎಲ್ಲರಿಗೂ ಪ್ರೇರಣೆ ಯಾಗಲಿ ಎಂದರು.