ಕರ್ನಾಟಕದ ರಾಜಧಾನಿಯ 6 ಕಡೆಗಳಲ್ಲಿ ಶುಕ್ರವಾರದಿಂದ ಶೋಧ ನಡೆಸ ಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಶನಿವಾರವೂ ಕಾರ್ಯಾಚರಣೆ ಮುಂದುವರಿದಿದೆ ಎಂದು ಇ.ಡಿ ತಿಳಿಸಿದೆ.
ತನಿಖಾ ಸಂಸ್ಥೆಯು ಚೀನೀ ವ್ಯಕ್ತಿಗಳು ನಿಯಂತ್ರಿಸಲ್ಪಡುತ್ತಿದ್ದ ಈ ಘಟಕಗಳ ವ್ಯಾಪಾರಿ ಐಡಿಗಳು ಮತ್ತು ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ ₹ 17 ಕೋಟಿ ಹಣ ವಶಪಡಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೇಮೆಂಟ್ ಗೇಟ್‌ವೇಗಳು/ಬ್ಯಾಂಕ್‌ಗಳೊಂದಿಗೆ ಹೊಂದಿರುವ ವಿವಿಧ ವ್ಯಾಪಾರಿ ಐಡಿಗಳು/ಖಾತೆಗಳ ಮೂಲಕ ಈ ಘಟಕಗಳು ತಮ್ಮ ಅಕ್ರಮ ವ್ಯವಹಾರವನ್ನು ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.