ತುಮಕೂರು: ನಗರದ ಶ್ರೀ ಕೃಷ್ಣ ಕಾನೂನು ಮಹಾವಿದ್ಯಾಲಯದಲ್ಲಿ ಉಪರಾಷ್ಟçಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವ ಕಾರ್ಯಕ್ರಮ ಹಾಗೂ ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಉಪನ್ಯಾಸಕರುಗಳಿಗೆ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗಿತ್ತು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಮರಿಚನ್ನಮ್ಮ ನವರು ದೇಶದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಹಾಗೂ ಭಾರತ ದೇಶದ ಪ್ರಪ್ರಥಮ ಉಪರಾಷ್ಟ್ರಪತಿಗಳು, ಶಿಕ್ಷಕರುಗಳ ಆದರ್ಶ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದು ಮತ್ತು ಅವರ ಜನ್ಮ ದಿನೋತ್ಸವದ ಪ್ರಯುಕ್ತ ಶ್ರೀ ಕೃಷ್ಣ ಕಾನೂನು ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಮತ್ತು ಪ್ರಾಂಶುಪಾಲ ರಾಗಿ ಕಾರ್ಯ ನಿರ್ವಹಿಸುತ್ತಿರುವ & ಎಲ್ಲಾ ಉಪನ್ಯಾಸಕರುಗಳಿಗೆ ” ಗುರುವಂದನಾ” ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಹತ್ವದ ಕಾರ್ಯವಾಗಿರುತ್ತದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ನಮ್ಮೆಲ್ಲರಿಗೂ ಆದರ್ಶಪ್ರಾಯರು, ಅವರ ತತ್ವಾದರ್ಶಗಳನ್ನ ನಾವೆಲ್ಲರೂ ರೂಡಿಸಿಕೊಳ್ಳಬೇಕು. ಅವರ ಆದರ್ಶಗಳು ನಮ್ಮೆಲ್ಲರ ಬಾಳಿನ ಬೆಳಕಾಗಬೇಕು ಎಂದರು.
ಬೋಧನಾ ವೃತ್ತಿಯಲ್ಲಿರುವ ಎಲ್ಲಾ ಹಂತದ ಶಿಕ್ಷಕರು, ಉಪನ್ಯಾಸಕರು ಡಾ. ರಾಧಾಕೃಷ್ಣನ್ ರವರ ತತ್ವಾದರ್ಶಗಳನ್ನು ಪಾಲನೆ ಮಾಡುವುದರ ಮೂಲಕ ವೃತ್ತಿ ಬದುಕನ್ನ ಪ್ರೀತಿಸಬೇಕು , ಅದರ ಜೊತೆಗೆ ವಿದ್ಯಾರ್ಥಿಗಳು ಕೂಡ ಬೋಧನಾ ವೃತ್ತಿಯಲ್ಲಿರುವ ಎಲ್ಲಾ ಹಂತದ ಶಿಕ್ಷಕರುಗಳ ಪ್ರೀತಿಗೆ ಪಾತ್ರರಾಗುವುದರ ಜೊತೆಗೆ ಅವರನ್ನ ಗೌರವಿಸುವ ಕಾರ್ಯವನ್ನು ಮಾಡಬೇಕು. ಎಲ್ಲ ಹಂತದ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸಬೇಕಾದರೆ, ದೇಶದ ಅತ್ಯುನ್ನತ ಸ್ಥಾನಗಳಿಗೆ ಹೋಗಬೇಕಾದಲ್ಲಿ ಶಿಕ್ಷಕರು & ಉಪನ್ಯಾಸಕರ ಮಾರ್ಗದರ್ಶನ ಮತ್ತು ಅವರ ಆದರ್ಶಗಳು ಅತ್ಯವಶ್ಯಕವಾಗಿ ಬೇಕಾಗುತ್ತವೆ ಎಂದು ಹೇಳಿದರು.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ಸಪ್ಟೆಂಬರ್ 5, 1888ರಲ್ಲಿ ತಿರುತ್ತಣಿ, (ಮದ್ರಾಸ್ ಪ್ರೆಸಿಡೆನ್ಸಿ, ಬ್ರಿಟಿಷ್ ಈಸ್ಟ್ ಇಂಡಿಯಾ )ಯಲ್ಲಿ ಜನಿಸಿದರು. 1939-1948ರವರಗೆ ಬನರಸ ಹಿಂದೂ ವಿಶ್ವವಿದ್ಯಾಲಯದ ನಾಲ್ಕನೇ ಉಪಕುಲಪತಿಯಾಗಿ ಸೇವೆ ಸಲ್ಲಿಸಿದರು. 1949-1952ರವರಗೆ ಸೋವಿಯತ್ ಒಕ್ಕೂಟಕ್ಕೆ ಭಾರತದ ಎರಡನೇ ರಾಯಭಾರಿಯಾಗಿ ಸೇವೆ ಸಲ್ಲಿಸಿದರು. 1952-1962ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ ಸೇವೆ ಸಲಿಸಿದರು.
1962-1967ರವರಗೆ ಭಾರತದ ಎರಡನೇ ರಾಷ್ಟçಪತಿಯಾಗಿ ಸೇವೆ ಸಲ್ಲಿಸಿದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರಿಗೆ 1933ರಲ್ಲಿ ನೈಟ್ ಹುಡ್ ಪ್ರಶಸ್ತಿ, 1954ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ, 1963ರಲ್ಲಿ ಬ್ರಿಟಿಷ್ ರಾಯಲ್ ಆರ್ಡರ್ ಆಫ್ ಮೆರಿಟನ್ ಗೌರವ ಸದಸ್ಯತ್ವ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರು ರಾಜಕಾರಣಿ, ಪ್ರೊಫೆಸರ್, ಉಪಕುಲಪತಿ, ಶಿಕ್ಷಣ ತಜ್ಞರಾಗಿ, ತತ್ವಜ್ಞಾನಿಯಾಗಿ ಅವರು ಸಲ್ಲಿಸಿದ ಸೇವೆ ನಮ್ಮೆಲ್ಲರಿಗೂ ಆದರ್ಶಪ್ರಾಯ ಅವರ ಬದುಕಿನ ಪ್ರತಿ ಕ್ಷಣಗಳನ್ನು ಮಾರ್ಗದರ್ಶನವಾಗಿ ಪಡೆದು ಶಿಕ್ಷಕ ವೃತ್ತಿಯಲ್ಲಿರುವವರು ಮತ್ತು ವಿದ್ಯಾರ್ಥಿಗಳು ಪಾಲಿಸುವುದರೊಂದಿಗೆ ಅವರ ಜನ್ಮ ದಿನೋತ್ಸವವನ್ನು ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನಾಗಿ ನಾವೆಲ್ಲರೂ ಆಚರಿಸುತ್ತಿದ್ದು, ಅವರ ಆದರ್ಶಗಳನ್ನ ಪಾಲಿಸೋಣ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶ್ರೀ ಕೃಷ್ಣ ಕಾನೂನು ಮಹಾವಿದ್ಯಾಲಯದ ಉಪಾಧ್ಯಕ್ಷರಾದ ವೀಣಾ ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಪ್ರತಿ ಹಂತದ ಬದುಕು ಕೂಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಆದರ್ಶ. ಅವರೊಬ್ಬ ತತ್ವ ಜ್ಞಾನಿಯಾಗಿದ್ದರು, ಶ್ರೇಷ್ಠ ಶಿಕ್ಷಣ ಚಿಂತಕರಾಗಿದ್ದರು, ಶ್ರೇಷ್ಠ ರಾಜಕಾರಣಿಯಾಗಿದ್ದರು. ವಿವಿಧ ಕ್ಷೇತ್ರಗಳ ಮಹಾನ್ ಚಿಂತಕ ರಾಗಿದ್ದರು. ಅವರ ಬದುಕು ನಮ್ಮೆಲ್ಲರಿಗೂ ಪ್ರೇರಣಾದಾಯಕವಾಗಿದೆ. ನಾವೆಲ್ಲರೂ ಅವರ ಆದರ್ಶಗಳನ್ನ ಪಾಲಿಸುವು ದರೊಂದಿಗೆ ನಮ್ಮ ಜೀವನದ ಗುರಿಗಳನ್ನು ತಲುಪುವ ಕೆಲಸವನ್ನು ಮಾಡೋಣ ಎಂದು ಕರೆ ನೀಡಿದರು.
ಶ್ರೀ ಕೃಷ್ಣ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ವಿನೆಟ್ ವಿಮಲಾ ಮಾತನಾಡಿ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ಪಡೆದಂತ, ದೇಶದ ಪ್ರಥಮ ಉಪರಾಷ್ಟçಪತಿಗಳಾದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನೋತ್ಸವದ ಅಂಗವಾಗಿ ಪ್ರತಿ ವರ್ಷ ನಾವು ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತೇವೆ. ಅವರು ಹೇಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಶ್ರೇಷ್ಠ ಚಿಂತಕರಾಗಿದ್ದರೋ ಅದೇ ರೀತಿಯಾಗಿ ಶಿಕ್ಷಕ ವೃತ್ತಿಯಲ್ಲಿರುವವರು ಮತ್ತು ವಿದ್ಯಾರ್ಥಿಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಸಮರ್ಪಕವಾಗಿ ಪಾಲ್ಗೊಳ್ಳುವುದರ ಮೂಲಕ ಸಾಧನೆ ಮಾಡುವುದು ಅತ್ಯವಶ್ಯಕವಾಗಿದೆ.
ಅವರೊಬ್ಬ ಮಹಾನ್ ತತ್ವಜ್ಞಾನಿಯಾಗಿದ್ದರು, ಅವರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಅವರ ಬದುಕಿನ ಎಲ್ಲ ಕ್ಷಣಗಳ ಅಧ್ಯಯನ ಮಾಡುವುದರ ಮೂಲಕ ಅವರ ಜನ್ಮದಿನದಂದು ಅವರನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದರು. ಪ್ರತಿ ವರ್ಷದ ಅವರ ಜನ್ಮ ದಿನೋತ್ಸವವನ್ನು ನಮ್ಮ ಬದುಕಿನ ಆದರ್ಶದ ದಿನವನ್ನಾಗಿ ಆಚರಿಸಬೇಕು. ಎಲ್ಲಾ ಶಿಕ್ಷಕ ಬಾಂಧವರು ತಮ್ಮೆಲ್ಲ ಜ್ಞಾನವನ್ನು ವಿದ್ಯಾರ್ಥಿಗಳಿಗೆ ದಾರೆ ಎರೆಯುವ ಕೆಲಸವನ್ನು ಮಾಡಬೇಕು, ಶಿಕ್ಷಕ ವೃತ್ತಿಯನ್ನ ಪ್ರೀತಿಸಬೇಕು, ಶಿಕ್ಷಕ ವೃತ್ತಿಯನ್ನ ಗೌರವಿಸುವುದರೊಂದಿಗೆ ನಿಸ್ವಾರ್ಥ ಸೇವೆ ಮಾಡಬೇಕು ಎಂದರು.
ಕಾನೂನು ಕಾಲೇಜಿನ ಉಪನ್ಯಾಸಕರಾದ ಶುಭ ಮಾತನಾಡಿ, ಡಾ.ರಾಧಾಕೃಷ್ಣನ್ ರವರ ಬದುಕಿನ ಪ್ರತಿ ಹಂತದ ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ. ಲತಾ ಆರ್, ಆಡಳಿತ ಅಧಿಕಾರಿಗಳಾದ ಅಶೋಕ್ ಕೆ.ಎಲ್, ಉಪನ್ಯಾಸಕರುಗಳಾದ ಮಂಜುಳಾ, ಉಮಾಶಂಕರ್, ಕಾನೂನು ವಿದ್ಯಾರ್ಥಿಗಳಾದ ಮುರುಳಿ, ಮಂಜುನಾಥ್, ದಯಾನಂದ್ ಸಾಗರ್, ಚಿಕ್ಕರಾಜು ನಿತಿನ್, ಮದನ್, ಕೌಶಿಕ್ , ಲೋಕೇಶ್, ಮಂಜುನಾಥ್ ಮತ್ತು ಕಾನೂನು ಮಹಾವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಿರೂಪಣೆ ಕಾನುನು ವಿದ್ಯಾರ್ಥಿ ಸೋಮಶೇಖರ್ ಆಲ್ಯಾಳ ನಡೆಸಿಕೊಟ್ಟರು. ಪ್ರಾಸ್ತಾವಿಕ ನುಡಿಗಳನ್ನು ಕಾನೂನು ವಿದ್ಯಾರ್ಥಿ ಚಿಕ್ಕರಾಜು ರವರು, ಸ್ವಾಗತ ಪರಿಚಯ ಶೈಲ, ವಂದನಾರ್ಪಣೆ ಪರಮೇಶ್ ನಡೆಸಿಕೊಟ್ಟರು.