Tuesday, 26th November 2024

ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

ತುಮಕೂರು: ಶಿಕ್ಷಕರಾದವರು ತಮ್ಮ ಕಲಿಕೆಯನ್ನು ಹೆಚ್ಚು ವಿಸ್ತಾರಗೊಳಿಸಿ ಕೊಂಡಂತೆಲ್ಲಾ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಗ್ರಹಿಕೆ ಕೂಡ ಹೆಚ್ಚುತ್ತದೆ ಎಂದು ಸಿದ್ಧಗಂಗಾ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ ತಿಳಿಸಿದರು.
ಅವರು ನಗರದ ಸಿದ್ಧಗಂಗಾ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ಸಾಧನೆಯ ಹಿಂದೆ ಹೇಗೆ ಗುರುವಿನ ಪಾತ್ರ ವಿರುತ್ತದೆಯೋ ಹಾಗೇಯೇ ಉತ್ತಮ ಶಿಕ್ಷಕರ ಹಿಂದೆ ಕಲಿಕೆಯ ಆಸಕ್ತಿ ಯುಳ್ಳ ವಿದ್ಯಾರ್ಥಿ ಗಳಿರುತ್ತಾರೆ. ಭಾರತ ರತ್ನ, ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಿಗಷ್ಟೇ ಅಲ್ಲದೆ ಭಾರತದ ಶೈಕ್ಷಣಿಕ ಮೌಲ್ಯದ ರಾಯಭಾರಿಗಳಾಗಿದ್ದರು ಎಂದರು.
ಫಿಸಿಯಾಲಜಿ ಮುಖ್ಯಸ್ಥರಾದ ಡಾ.ಶಶಿರಾಜ್ ಮಾತನಾಡಿ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಮಹನೀಯರ ಮೌಲ್ಯಗಳನ್ನು ನಮ್ಮ ಇಂದಿನ ಶಿಕ್ಷಕರು  ಅಭ್ಯಸಿಸಿ ವಿದ್ಯಾರ್ಥಿ ಗಳಿಗೂ ಮಾದರಿಯಾಗಬೇಕು. ಸರಳತೆ, ಸೌಜನ್ಯತೆ ಹಾಗೂ ಶಿಕ್ಷಕರ ಮೇಲಿನ ಅವರ ಅಪಾರ ನಿರೀಕ್ಷೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ಸಿದ್ದಗಂಗಾ ಮೆಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ,ಉಪನ್ಯಾಸಕರಾದ ಡಾ.ಹಂಸ, ಡಾ.ರವಿಚಂದ್ರ ಹಾಗೂ ಸಿದ್ಧಗಂಗಾ ಆಸ್ಪತ್ರೆ ನೆಫ್ರಾಲಜಿಸ್ಟ್ ಡಾ.ಗಣೇಸ್ ಎಸ್.ಪ್ರಸಾದ್, ಸಿಇಓ ಡಾ.ಸಂಜೀವ್ ಕುಮಾರ್ ಉಪಸ್ಥಿತರಿದ್ದರು.