Tuesday, 26th November 2024

ಲೋಕಾಯುಕ್ತ ಡಿವೈಎಸ್‌ಪಿ ರವೀಶ್ ನೇತೃತ್ವದಲ್ಲಿ ಅಹವಾಲು ಸ್ವೀಕಾರ

ಚಿಕ್ಕನಾಯಕನಹಳ್ಳಿ : ತುಮಕೂರು ಲೋಕಾಯುಕ್ತ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮ ಪಟ್ಟಣದ ತಾ.ಕಚೇರಿ ಸಭಾಂಗಣದಲ್ಲಿ ನಡೆಯಿತು. ಲೋಕಾಯುಕ್ತ ಡಿವೈಎಸ್‌ಪಿ ರವೀಶ್ ಅವರ ನೇತೃತ್ವದಲ್ಲಿ ಅಹವಾಲು ಸ್ವೀಕಾರ ನಡೆಯಿತು.

ಈ ವೇಳೆ ಮಾತನಾಡಿದ ಲೋಕಾಯುಕ್ತ ಡಿವೈಎಸ್‌ಪಿ ರವೀಶ್ ಅಧಿಕಾರಿಗಳು ಕಾಂiÀið ನಿರ್ವಹಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಸಾರ್ವಜನಿಕ ಕುಂದು ಕೊರತೆ ಆಲಿಸುವ ವೇಳೆ ಜನರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳಿ, ಕಚೇರಿ ಗಳಲ್ಲಿ ಕಡ್ಡಾಯ ವಹಿ ಮಾಡಿ ನೌಕರನು ತನ್ನ ಬಳಿ ಇರುವ ಹಣದ ಮೊತ್ತವನ್ನು ದಾಖಲಿಸಬೇಕು. ಸಾರ್ವಜನಿಕರು ಹೆಚ್ಚು ಭೇಟಿ ನೀಡುವ ಕಚೇರಿಗಳಲ್ಲಿ ಲೋಕಾಯುಕ್ತ ಪೋಲೀಸರ ದೂರವಾಣಿ ಸಂಖ್ಯೆಗಳನ್ನು ನಾಮಫಲಕದಲ್ಲಿ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಾಯುಕ್ತ ಸಂಸ್ಥೆಯ ಪೋಲೀಸ್ ಘಟಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ತಯಾರಿ ಆರಂಭಿಸಲಾಗಿದೆ. ನ್ಯಾಯಿಕ ವಿಭಾಗ ಪೋಲೀಸ್ ಘಟಕದ ಜೊತೆ ನಿರಂತರ ಸಭೆ ನಡೆಸಿದ್ದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕೇಸು ದಾಖಲಿಸಲು ಲೋಕಾಯುಕ್ತರು ಪೋಲೀಸ್ ಘಟಕಕ್ಕೆ ಸೂಚನೆ ನೀಡಿದ್ದಾರೆ.

ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ, ಅಧಿಕಾರ ದುರ್ಬಳಕೆ ಸಂಬ0ಧ ಸಾರ್ವಜನಿಕ ನೌಕರ ಅಥವಾ ಜನ ಪ್ರತಿನಿಧಿಗಳ ವಿರುದ್ದ ದೂರು ಬಂದರೆ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಲು ಲೋಕಾಯುಕ್ತ ಪೋಲೀಸ್ ಘಟಕಕ್ಕೆ ಅಧಿಕಾರವಿದೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ಚಕಾರ ಎತ್ತದ ಲೋಕಾಯುಕ್ತ ಪೋಲೀಸರು
ತಾಲ್ಲೂಕು ಕಚೇರಿ ಆವರಣದಲ್ಲಿರುವ (ರೆಕಾರ್ಡ್ ರೂಂ) ದಾಖಲೆಗಳ ನಿರ್ವಹಣಾ ಕಚೇರಿಯಲ್ಲಿ ಅಲ್ಲಿನ ಸಿಬ್ಬಂದಿ ರೈತರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಕೈಬರಹದ ಪಹಣಿ ಇತರೆ ತಿದ್ದುಪಡಿ ಪತ್ರಗಳನ್ನು ಪಡೆಯಲು ಅರ್ಜಿ ಸಲ್ಲಿಸಿದರೆ ದಾಖಲೆ ಪತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಜೆರಾಕ್ಸ್ ಮಾಡಿಸಿ ನೀಡುತ್ತಾರೆ. ಇದು ನಿರಂತರವಾಗಿ ನಡೆಯುತ್ತಿದ್ದು ಕಳೆದ ಸಭೆಯಲ್ಲಿ ತಹಸೀಲ್ದಾರ್ ತೇಜಸ್ವಿನ ನೀಡಿದ್ದ ಭರವಸೆ ಹಾಗೆ ಉಳಿದಿದೆ. ಈ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಚಕಾರ ಎತ್ತದೆ ಹಿಂದಿನ ಪ್ರಕರಣಗಳ ಬಗ್ಗೆ ಯಾವುದೇ ವಿಚಾರಣೆಯನ್ನು ನಡೆಸದೆ ತೆರಳಿರುವುದು ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಯಿತು.

ಪ್ರಗತಿಪರ ರೈತ ತರಬೇನಹಳ್ಳಿ ಷಡಕ್ಷರಿ, ಲಂಚಮುಕ್ತ ವೇದಿಕೆಯ ಭಟ್ಟರಹಳ್ಳಿ ಮಲ್ಲಿಕಾರ್ಜುನ್, ಸಾಮಾಜಿಕ ಕಾರ್ಯಕರ್ತ ಮಹಮದ್‌ಹುಸೇನ್ ದೂರುಗಳನ್ನು ದಾಖಲಿಸಿದರು. ಸಭೆಯಲ್ಲಿ ಇಓ ವಸಂತ್‌ಕುಮಾರ್, ಟಿಹೆಚ್‌ಓ ನವೀನ್, ಸಿಪಿಐ ನಿರ್ಮಲ, ಹಾಗು ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.