ಮಧುಗಿರಿ: ಪಟ್ಟಣದ ಶಿರಾಗೇಟ್ನ ತಾಲೂಕು ಪಂಚಾಯ್ತಿ ಕಛೇರಿ ಪಕ್ಕದಲ್ಲಿನ ಅರಸಯ್ಯನ ಕಲ್ಯಾಣಿ ಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರಿಗೆ ಸೆ.೧೦ರ ಶನಿವಾರ ಸಂಜೆ ೬ಗಂಟೆಯಿ0ದ ೭:೩೦ರವರೆಗೆ ‘ತೆಪ್ಪೋತ್ಸವ ‘ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಭಕ್ತಮಂಡಳಿಯವರು ಕೋರಿದ್ದಾರೆ.
ಮಧುಗಿರಿ ಪಟ್ಟಣದಲ್ಲಿ ನೆಲೆಸಿರುವ ಜಗತ್ ಕಲ್ಯಾಣ ಚಕ್ರವರ್ತಿಯಾದ ಶ್ರೀ ವೆಂಕಟ ರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಶುಭಕೃತು ನಾಮ ಸಂವತ್ಸರದ ಭಾದ್ರಪದ ಮಾಸದ ಶುದ್ಧ ದ್ವಾದಶಿಯಿಂದ ಸೆಪ್ಟೆಂಬರ್ ೭ಗುರುವಾರದಿಂದ ಸೆಪ್ಟೆಂಬರ್ -೧೦ ಶನಿವಾರ ಪೂರ್ಣಿಮೆಯವರೆಗೂ ಭಗತ್ ಶಾಸ್ತ್ರವಾದ ಶ್ರೀ ಪಾಂಚರಾತ್ರ ರೀತ್ಯ ತ್ರಿದಿನ ಸಂಕಲ್ಪವಾಗಿ ಪವಿತ್ಸೋವ ಮತ್ತು ತೆಪ್ಪೋತ್ಸವ ನಡೆಸಲು ಶ್ರೀ ಸ್ವಾಮಿಯವರ ಆಜ್ಞೆ ಆಗಿರುತ್ತದೆ. ಆಚಾರ್ಯರು ಭಕ್ತಾಧಿಗಳು ಹಾಗೂ ಸರ್ಕಾರದ ಸಹಕಾರದೊಂದಿಗೆ ನಿಶ್ಚಯಿಸಿರುತ್ತಾರೆ. ಆದುದರಿಂದ ಭಕ್ತಾದಿಗಳು ಹಾಗೂ ಸಾರ್ವಜನಿಕರು ಕೈಂಕರ್ಯದಲ್ಲಿ ಭಾಗವಹಿಸ ಬೇಕಾಗಿ ಭಕ್ತಮಂಡಳಿ ಯವರು ಪ್ರಾರ್ಥಿಸಿದ್ದಾರೆ.
ಸೆಪ್ಟೆಂಬರ್-೧೦ ರ ಶನಿವಾರ ಪೌರ್ಣಿಮೆ ದಿನ ಬೆಳಿಗ್ಗೆ ದ್ವಾರರರಾಧನೆ, ಉಪ ಕುಂಭ ಮಹಾ ಕುಂಭಾರಾಧನೆ, ವೇದಪಾರಾಯಣ ,ಮೂಲಮಂತ್ರ ಹೋಮಾದಿಗಳು ಶ್ರೀಸೂಕ್ತ ಪುರುಷ ಸೂಕ್ತ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಮಹಾ ಪೂರ್ಣಾಹುತಿ ಪವಿತ್ರ ಅವರೋಹಣ, ಅವಭೃತ ಸ್ನಾನ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿ ಯೋಗ ರಾಷ್ಟ್ರಾಶೀರ್ವಾದ ನಡೆಯಲಿವೆ. ಈ ಕಾರ್ಯಕ್ರಮವನ್ನು ದಿವಂಗತ ವಿದ್ವಾನ್ ವೆಂಕಟಾಚಾರ್ ಕುಟುಂಬಸ್ಥರು ಗಳಾದ ಬಿ ಆರ್ ಎಸ್ ಪ್ರಸಾದ್ ಮತ್ತು ಎಂ ಎಸ್ ನಾರಾಯಣ್ ಇವರುಗಳು ಮಕ್ಕಳು ಮೊಮ್ಮಕ್ಕ ಳಿಂದ ನಡೆಯಲಿದೆ.
ಸಂಜೆ ೪:೩೦ ಕ್ಕೆ ದೇವರ ಉತ್ಸವ ಕಲ್ಯಾಣಿ ಅವರು ಸಂಜೆ ೬ಗಂಟೆಯಿAದ ೭:೩೦ ಕ್ಕೆ ತೆಪ್ಪೋತ್ಸವ ,ಮಹಾಮಂಗಳಾರತಿ ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ನಡೆಯಲಿದೆ.
ನಂತರ ದೇವಸ್ಥಾನಕ್ಕೆ ದೇವರನ್ನು ಮೆರವಣಿಗೆಯಲ್ಲಿ ಕರೆತಂದು ದೇವಾಲಯ ತುಂಬಿಸುವುದು. ಆಶೀರ್ವಚನ ಪ್ರಾಕಾರೋತ್ಸವ ದ ಶ್ರೀ ಪಾದಸೇವಕರಿಂದ ನಡೆಯಲಿದೆ. ಈ ಕಾರ್ಯಕ್ರಮವನ್ನು ದಿವಂಗತ ವಿದ್ವಾನ್ ವೆಂಕಟಾಚಾರ್ ಕುಟುಂಬಸ್ಥರು ಗಳಾದ ಬಿಆರ್ ಎಸ್ ಪ್ರಸಾದ್ ಮತ್ತು ಎಂ ಎಸ್ ನಾರಾಯಣ್ ಇವರುಗಳ ಮಕ್ಕಳು ಮೊಮ್ಮಕ್ಕಳಿಂದ ಹಾಗೂ ಶ್ರೀಹರಿ ಪ್ರಸನ್ನರವರು ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತೆಪ್ಪೋತ್ಸವ ಕಾರ್ಯಕ್ರಮಕ್ಕೆ ಉಪವಿಭಾಧಿಕಾರಿ ಸೋಮಪ್ಪಕಡಕೊಳ,ತಹಸೀಲ್ದಾರ್ ಟಿ. ಜಿ ಸುರೇಶ್ ಆಚಾರ್ , ಊರಿನ ಪ್ರಮುಖರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆಂದು ಅರ್ಚಕ ಅನಂತಪದ್ಮನಾಭ ಭಟ್ಟರ್ ತಿಳಿಸಿರುತ್ತಾರೆ