Saturday, 23rd November 2024

ಪುರಾತನ ವಿಗ್ರಹಗಳ ಕಳ್ಳಸಾಗಣೆ ವಿಫಲಗೊಳಿಸಿದ ತಮಿಳುನಾಡು ಐಡಲ್ ವಿಂಗ್ ಸಿಐಡಿ

ಚೆನ್ನೈ : ತಮಿಳುನಾಡು ಐಡಲ್ ವಿಂಗ್ ಸಿಐಡಿ ದೇಶದಿಂದ ಪುರಾತನ ವಿಗ್ರಹಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿದೆ.

ಆರೋವಿಲ್ಲೆಯಲ್ಲಿರುವ ಫ್ರೆಂಚ್ ಪ್ರಜೆಯ ನಿವಾಸದಿಂದ 20 ವಿಗ್ರಹಗಳನ್ನು ವಶಪಡಿಸಿ ಕೊಂಡಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ತಮಿಳುನಾಡಿಗೆ ಸೇರಿದ ಕರಕುಶಲ ವಸ್ತುಗಳ ಅಂಗಡಿಯಲ್ಲಿ ಅಕ್ರಮವಾಗಿ ಕಳ್ಳತನ ವಾಗಿರುವ ಪುರಾತನ ಕಲಾಕೃತಿಗಳನ್ನು ವ್ಯವಹರಿಸಲಾಗಿದೆ ಎಂಬ ಮಾಹಿತಿಯ ಮೇರೆಗೆ ವಿಗ್ರಹ ವಿಭಾಗವು ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ನಿಂದ ಆದೇಶ ಪಡೆದ ನಂತರ ಇನ್ಸ್ಪೆಕ್ಟರ್ ಇಂದಿರಾ ನೇತೃತ್ವದಲ್ಲಿ ಶೋಧ ಆರಂಭಿಸಿತು.

ಫ್ರಾನ್ಸ್‌ಗೆ ಕಳ್ಳಸಾಗಣೆ ಮಾಡಲು ಫ್ರೆಂಚ್ ಪ್ರಜೆಯೊಬ್ಬರಿಗೆ ಸಹಾಯ ಮಾಡಲು ಡೀಲರ್ ಪ್ರಯತ್ನಿಸಿದ್ದ. 20 ಪುರಾತನ ವಸ್ತುಗಳಿಗೆ ಸಂಬಂಧಿಸಿದ ದಾಖಲೆಗಳು ಹುಡುಕಾಟದ ಸಮಯದಲ್ಲಿ ಅಂಗಡಿಯ ಆವರಣದಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಾಖಲೆಗಳಿಂದ ಪಡೆದ ವಿಳಾಸದೊಂದಿಗೆ, ಐಡಲ್ ವಿಂಗ್ ಆರೋವಿಲ್ಲೆಯಲ್ಲಿರುವ ಫ್ರೆಂಚ್ ಪ್ರಜೆಯ ನಿವಾಸವನ್ನು ಶೋಧಿಸಿದೆ ಮತ್ತು 13 ಕಲ್ಲಿನ ವಿಗ್ರಹಗಳು ಮತ್ತು 4 ಲೋಹದ ಚಿತ್ರಗಳು ಸೇರಿದಂತೆ 20 ಕಲಾಕೃತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.