ಗುಬ್ಬಿ: ನಾವೆಲ್ಲರೂ ಸಹ ಬಿಜೆಪಿ ಪಕ್ಷವನ್ನು ಸದೃಢವಾಗಿ ಬೆಳೆಸಬೇಕು. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನ ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕೆ ನಾವೆಲ್ಲರೂ ಸಹ ಬದ್ದರಾಗಬೇಕು ಎಂದು ಬಿಜೆಪಿ ಮುಖಂಡ ಜಿ.ಎನ್.ಬೆಟ್ಟ ಸ್ವಾಮಿ ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಎಂ.ಎನ್.ಕೋಟೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಾನಸಭೆ ಚುನಾವಣೆ ಬರುತ್ತಿದ್ದು ಮತದಾರರು ಯಾವುದೇ ಗೊಂದಲಗಳನ್ನು ಬಿಟ್ಟು ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಸಹ ಅವರಿಗೆ ನಾವೆಲ್ಲರೂ ಶ್ರಮಿಸಬೇಕು ಸೋಲು ಗೆಲುವು ಸಹಜ. ನಾನುಸಹ ಸ್ಪರ್ಧೆ ಮಾಡಿ ಸೋತ್ತಿದೇನೆ. ಆದರೆ ಗುಬ್ಬಿ ಕ್ಷೇತ್ರದಲ್ಲಿ ಜನಪರ ಕೆಲಸಗಳನ್ನು ಮಾಡಿಸುವ ಪ್ರಯತ್ನದಲ್ಲಿ ನಾವು ಇದೇವೆ ಮುಂದಿನ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಮತದಾರರು ಮತ್ತೆ ಬೆಂಬಲಿಸಿದ್ದಾರೆ.
ರಾಜ್ಯದ ರೈತ ಪರ ನಾಯಕರಾದ ಬಿ.ಎಸ್.ಯೂಡಿವರಪ್ಪನವರು ಹಾಗೂ ಈ ರಾಜ್ಯದ ಮುಖ್ಯಮಂತ್ರಿ ಬಸವರಾಜು ಬೊಮ್ಮಯಿ ಅವರ ಅಭಿವೃದ್ಧಿಗಳೆ ಈ ಭಾರಿ ಶ್ರೀರಕ್ಷೆಯಾಗ ಲಿದ್ದು ಕೇಂದ್ರದಲ್ಲಿ ಮತ್ತೆ 2024ರಲ್ಲಿ ನರೇಂದ್ರ ಮೋಧಿ ಅವರ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತ್ತೆ ಚುಕ್ಕಣಿ ಹಿಡಿಯಲಿದ್ದು ಮತದಾರರು ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ಕೈ ಇಡಿಯಲಿದ್ದಾರೆ ಎಂದರು.
ಕಾಂಗ್ರೇಸ್ ನವರು ಆಗಲು ಕನಸು ಕಾಣುತ್ತಿದ್ದಾರೆ ಅವರಲ್ಲಿ ಬಿನ್ನಭಿಪ್ರಾಯವಿದ್ದು ನಾನು ಸಿಎಂ ನಾನು ಎಂ ಎಂದು ಈಗಾಲೇ ಬಡಿದಾಡುಕೊಳುತ್ತಿದ್ದಾರೆ ಎಂದ ಅವರು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಸುಖ ಸುಮ್ಮನೆ ಬಿಜೆಪಿ ಪಕ್ಷದವರ ಮೇಲೆ ಗೊಬೆ ಕೊರಿಸುವ ಕೆಲಸ ಮಾಡುತ್ತಿದ್ದಾರೆ. ಮುದ್ದಹನುಮೇಗೌಡರು ಬಿಜೆಪಿ ಪಕ್ಷಕ್ಕೆ ಬರುತ್ತಿರುವದು ಸ್ವಾಗತ ಅವರು ಸಹ ಸಂಸದರು ಶಾಸಕರಾಗಿ ಕೆಲಸ ಮಾಡಿದ್ದಾರೆ ಅವರನ್ನೇ ಕಾಂಗ್ರೆಸ್ ನವರು ಮೂಲೆಗುಂಪು ಮಾಡಿದ್ದಾರೆ ಎಂದು ಕಾಂಗ್ರೇಸ್ ನಾಯಕರ ವಿರುದ್ದ ಕಿಡಿಕರಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ತಾಲ್ಲೂಕ್ ಅಧ್ಯಕ್ಷ ಲೋಗನಾಥ್, ಮುಖಂಡರಾದ ಕೃಷ್ಠಪ್ಪ ,ರಂಗಸ್ವಾಮಿ, ಯೋಗೀಶ್ ಭಾಗವಹಿಸಿದ್ದರು.