Tuesday, 26th November 2024

ಸರಕಾರಿ ವಾಹನ ದುರ್ಬಳಕೆ: ಅರಣ್ಯ ಅಧಿಕಾರಿ ವಿರುದ್ಧ ದೂರು ದಾಖಲು

ತುಮಕೂರು: ಸರಕಾರಿ ವಾಹನ ದುರ್ಬಳಕೆ ಮಾಡಿಕೊಂಡ ಅರಣ್ಯ ಇಲಾಖೆ ಅಧಿಕಾರಿ ವಿರುದ್ಧ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಮುಖಂಡರು ಕಾರ್ಯಾಚರಣೆ ನಡೆಸಿ ದೂರು ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿ ರವಿ ಅವರು ಸರಕಾರಿ ವಾಹನವನ್ನು(ವಾಹನ ಸಂಖ್ಯೆ: KA51G0119) ಭಾನುವಾರ ವೈಯಕ್ತಿಕ ಕಾರ್ಯ ಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದ ಕೆ.ಆರ್.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಗಜೇಂದ್ರಕುಮಾರ್ ಗೌಡ ಹಾಗೂ ಕಾರ್ಯ ಕರ್ತರು ಕ್ಯಾತ್ಸಂದ್ರದಲ್ಲಿ ವಾಹನ ಪರಿಶೀಲಿಸಲಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮನೆ ಬಳಕೆ ವಸ್ತುಗಳನ್ನು ತುಂಬಿಕೊಂಡು ಖಾಸಗಿ ಚಾಲಕನೊಂದಿಗೆ ಸರಕಾರಿ ವಾಹನ ದಲ್ಲಿ ಪ್ರಯಾಣಿಸುತ್ತಿದ್ದ ಅರಣ್ಯ ಅಧಿಕಾರಿಯನ್ನು  ಕೆ.ಆರ್.ಎಸ್ ಪಕ್ಷದ ಕಾರ್ಯ ಕರ್ತರು ತರಾಟೆಗೆ ತೆಗೆದುಕೊಂಡು ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
***
ಸರಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಿರುವ ಅರಣ್ಯ ಅಧಿಕಾರಿ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ಎಫ್.ಐ.ಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳದಿದ್ದರೆ ಪೊಲೀಸರ ವಿರುದ್ದವೂ ಮೇಲಧಿಕಾರಿಗಳಿಗೆ ದೂರು ನೀಡಲಾಗು ವುದು.
ಗಜೇಂದ್ರಕುಮಾರ್ ಗೌಡ, ಜಿಲ್ಲಾಧ್ಯಕ್ಷ, ಕೆ.ಆರ್.ಎಸ್ ಪಕ್ಷ
***
ಮೇಕೆಫಾರಂಗೆ ಬರಲು ಸರಕಾರಿ ವಾಹನ
ಕೊರಟಗೆರೆ ತಾಲೂಕಿನ ತೋವಿನಕೆರೆ ಬಳಿ ಇರುವ ಮೇಕೆ ಫಾರಂಗೆ ಅರಣ್ಯ ಅಧಿಕಾರಿ ರವಿ, ಪ್ರತಿ ಭಾನುವಾರ ಸರಕಾರಿ ವಾಹನ ದಲ್ಲಿಯೇ ಬಂದು ಹೋಗುತ್ತಿದ್ದರು ಎಂದು ಕೆ.ಆರ್.ಎಸ್ ಪಕ್ಷದ ಮುಖಂಡರು ಕಿಡಿಕಾರಿದ್ದಾರೆ.