ತುಮಕೂರು: ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ವಿವೇಕಾನಂದ ಬಿ ನಾಯಕ್ (75) ಎಂಬವರು ಮೃತಪಟ್ಟ ಹಿನ್ನಲೆಯಲ್ಲಿ ಮೃತರ ಇಚ್ಛೆಯಿಂದ ಕುಟುಂಬಸ್ಥರು ಮೃತ ನೇತ್ರದಾನ ಮಾಡಿದರು.
ಎನ್ ಐ ಫೌಂಡೇಶನ್ ನ ಶ್ರೀಧರ್ , ಜಿಲ್ಲಾಸ್ಪತ್ರೆ ನೇತ್ರವಿಭಾಗದ ರವಿಕುಮಾರ್, ಸಿದ್ಧಗಂಗಾ ಆಸ್ಪತ್ರೆ ಐಸಿಯು ಸ್ಪೆಷಲಿಸ್ಟ್ ಡಾ.ಮಧು ಹಾಗೂ ನಾಯಕ್ ಕುಟುಂಬಸ್ಥರಾದ ಉತ್ಸವ್ ಪೈ, ರೂಪಕ್ ಪೈ, ವಿಜಯ್ ಕಾಮತ್,ಅರುಣ್ ನಾಯಕ್,ಆಶೋಕ್ ಪೈ, ಪ್ರೇರಣಾ ನಾಯಕ್, ಅನಘ್ನ ಪೈ ಉಪಸ್ಥಿತರಿದ್ದರು.