Wednesday, 27th November 2024

ಸಹೋದ್ಯೋಗಿಯಿಂದ ಪೊಲೀಸ್ ಪೇದೆ ಸುಧಾ ಕೊಲೆ

ಹುಳಿಯಾರು ಠಾಣೆಯಲ್ಲಿ ಘಟನೆ|ಇಬ್ಬರು ಆರೋಪಿಗಳು ಅಂದರ್|ರ‍್ವ ಆತ್ಮಹತ್ಯೆ

ತುಮಕೂರು/ಚಿಕ್ಕನಾಯಕನಹಳ್ಳಿ: ಹುಳಿಯಾರು ಪೊಲೀಸ್ ಠಾಣೆಯ ಪೇದೆ ಸುಧಾರನ್ನು ಸಹೋದರ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅದೇ ಠಾಣೆಯ ಸಹೋದ್ಯೋಗಿ ಪೇದೆ ರಾಣಿ ವೈಯಕ್ತಿಕ ದ್ವೇಷದ ಹಿನ್ನೆಲೆ ಯಲ್ಲಿ ಸುಫಾರಿ ನೀಡಿ ಕೊಲೆ ಮಾಡಿಸಿರುವ ಅಮಾನವೀಯ ಘಟನೆ ನಡೆದಿದ್ದು, ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.

ಸುಧಾರನ್ನು ಕೊಲ್ಲಲು ಸಹೋದರ(ಸುಧಾ ಚಿಕ್ಕಪ್ಪನ ಮಗ) ಮಂಜುನಾಥ(೨೩), ಸ್ನೇಹಿತ ನಿಖೇಶ(೩೦) ಎಂಬುವವರಿಗೆ ರಾಣಿ ಸುಫಾರಿ ನೀಡಿ ಹತ್ಯೆ ಮಾಡಿಸಿದ್ದಾರೆ. ಈ ಸಂಬಂಧ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳು ಅಂದರ್ ಆಗಿದ್ದಾರೆ.

ಅಕ್ಕ ಸುಧಾರನ್ನು ಕೊಲೆ ಮಾಡಿದ ಬಳಿಕ ಸಹೋದರ ಮಂಜುನಾಥ್ ಶಿವಮೊಗ್ಗದ ಲಾಡ್ಜ್ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಆರೋಪಿತ ಮಹಿಳಾ ಪೊಲೀಸ್ ಪೇದೆ ರಾಣಿಯನ್ನು ಇಲಾಖೆ ವಿಚಾರಣೆಗೆ ಕಾಯ್ದಿರಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಕೊಲೆ ನಡೆದದ್ದು ಹೇಗೆ?: ಸೆ.೧೩ರಂದು ಹುಳಿಯಾರು ಪೊಲೀಸ್ ಠಾಣೆಯ ಪೇದೆ ಸುಧಾ ಅವರ ಚಿಕ್ಕಮ್ಮನ ಮಗ ಮಂಜುನಾಥ್ ಚಿಕ್ಕನಾಯಕನಹಳ್ಳಿಯಿಂದ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಅಂದು ರಾತ್ರಿ ೮.೪೦ರಿಂದ ಇಬ್ಬರ ಫೋನ್ ಸಂರ‍್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸುಧಾಗಾಗಿ ಹುಡುಕಾಟ ನಡೆಯುತ್ತಿತ್ತು.

ಸೆ.೧೬ರಂದು ಶಿವಮೊಗ್ಗ ನಗರದ ಲಾಡ್ಜ್ ವೊಂದರಲ್ಲಿ ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜು ನಾಥ್(೨೬) ಆತ್ಮಹತ್ಯೆ ಮಾಡಿಕೊಂಡಿದ್ದ. ಮಂಜುನಾಥ್, ಲಾಡ್ಜ್ ರೂಮಿನಿಂದ ಹೊರ ಬಂದಿರಲಿಲ್ಲ. ಅನುಮಾನಗೊಂಡು ಸೆ.೧೬ರಂದು ಸಂಜೆ ಲಾಡ್ಜ್ ಸಿಬ್ಬಂದಿ ಬಾಗಿಲು ತೆಗೆದಾಗ ಮಂಜುನಾಥ್ ಶವ ಪತ್ತೆಯಾಗಿತ್ತು. ಅಲ್ಲಿ ಡೆತ್ನೋಟ್ ಕೂಡ ಸಿಕ್ಕಿತ್ತು.

ನನ್ನ ದೊಡ್ಡಮ್ಮನ ಮಗಳಾದ ಸುಧಾಳನ್ನು ಕೊಲೆ ಮಾಡಿ ಬೀದಿ ಹೆಣ ಮಾಡಿದ್ದೇನೆ ಎಂದು ಡೆತ್ನೋಟ್ ಬರೆದಿಟ್ಟಿದ್ದ. ಈ ಪ್ರಕರಣ ಸುಧಾ ಅವರ ಮನೆಯಲ್ಲಿ ಆತಂಕ ಸೃಷ್ಟಿಸಿತ್ತು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ‍್ಯನರ‍್ವಹಿಸುತ್ತಿದ್ದ ಸುಧಾ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು.

ಸೆ.೧೭ ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ ತಿಪಟೂರು ರಾಷ್ಟ್ರೀಯ ಹೆದ್ದಾರಿ ೨೦೬ರ ಮೈಲನಹಳ್ಳಿ ಗ್ರಾಮದ ಬಳಿ ಪೊದೆಯೊಂದರಲ್ಲಿ ಸುಧಾ ಶವ ಪತ್ತೆಯಾಗಿತ್ತು. ಸುಧಾ ಅವರ ಪತಿ ಎರಡು ರ‍್ಷದ ಹಿಂದೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಇದ್ದಾರೆ. ಆನ್ಲೈನ್ ಬೆಟ್ಟಿಂಗ್ಗೆ ದಾಸನಾಗಿದ್ದ ಮಂಜುನಾಥ್, ಹಣಕಾಸು ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ. ಸಹೋದರಿ ಸುಧಾ ಬಳಿ ಹಣ ಪಡೆದಿದ್ದ. ಇದನ್ನು ಕೇಳಿದ್ದಕ್ಕೆ ಕುಪಿತಗೊಂಡಿದ್ದ. ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ತೋರಿಸು ಎಂದು ಸುಧಾಗೆ ಒತ್ತಾಯಿಸಿದ್ದ ಮಂಜುನಾಥ್ ಸೆ.೧೩ರಂದು ಚಿಕ್ಕನಾಯಕನಹಳ್ಳಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಳ್ಳುವ ನೆಪದಲ್ಲಿ ಸುಧಾ ಜತೆ ಕಾರಿನಲ್ಲಿ ತೆರಳಿದ್ದ. ಹಣಕಾಸಿನ ವಿಚಾರಕ್ಕೆ ಅಕ್ಕನನ್ನೇ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿದೆ.

ಪೇದೆ ರಾಣಿ ಕೈವಾಡ: ಹುಳಿಯಾರು ಠಾಣೆಯ ಪೇದೆ ಸುಧಾರ ಕೊಲೆ ಕೇಸ್ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಇದೇ ಠಾಣೆಯಲ್ಲಿ ಕರ‍್ಯನರ‍್ವಹಿಸುತ್ತಿದ್ದ ಮತ್ತೊಬ್ಬ ಮಹಿಳಾ ಪೇದೆ ರಾಣಿ ಎಂಬಾಕೆಯೇ ಕೊಲೆಗೆ ಸುಫಾರಿ ನೀಡಿದ್ದರು ಎಂಬುದು ತಿಳಿದು ಬಂದಿದೆ.

ಸುಧಾರನ್ನು ಕೊಲೆ ಮಾಡಲು ರಾಣಿ ಸುಫಾರಿ ನೀಡಿದ್ದಳು. ಅದರಂತೆ ಸುಧಾರನ್ನು ಕೊಲ್ಲಲು ಇವರ ಚಿಕ್ಕಮ್ಮನ ಮಗ ಮಂಜು ನಾಥ(೨೩) ಸ್ನೇಹಿತ ನಿಖೇಶ(೩೦) ಇಬ್ಬರೂ ಸುಧಾರನ್ನು ಕಿಡ್ನಾಪ್ ಮಾಡಿ ದಾರಿ ಮಧ್ಯೆ ಕೊಲೆ ಮಾಡಿ ಬಿಸಾಕಿ ಹೋಗಿದ್ದರು.

ಕೊಲೆಯ ಬೆನ್ನತ್ತಿದ ಪೊಲೀಸರಿಗೆ ಶಾಕ್ ಕಾದಿತ್ತು. ಇದರ ಹಿಂದೆ ಪೇದೆ ರಾಣಿಯ ಕೈವಾಡ ಇರುವುದು ತಿಳಿದುಬಂದಿತ್ತು. ಕ್ಷುಲ್ಲಕ ಕಾರಣಕ್ಕೆ ಪೇದೆಗಳಾಗಿದ್ದ ಸುಧಾ ಮತ್ತು ರಾಣಿ ಮಧ್ಯೆ ಜಗಳವಾಗುತ್ತಿತ್ತು. ಇದರಿಂದಾಗಿ ಕುಪಿತಳಾಗಿದ್ದ ರಾಣಿ ಸುಧಾರ ಸಹೋದರನನ್ನು ದಾಳವಾಗಿಸಿಕೊಂಡು ಹತ್ಯೆ ಮಾಡಿಸಿದ್ದಾಳೆ. ಈ ಸಂಬಂಧ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.