ತಿಪಟೂರು: ರಾಜ್ಯದಲ್ಲಿ ಪಠ್ಯಪುಸ್ತಕ ಅನಾಹುತವನ್ನು ಮಾಡಿ, ಸರ್ಕಾರದ ಸೌಲಭ್ಯ ಗಳನ್ನು ಪಡೆಯಲು ಮಾತ್ರ ನಮ್ಮ ತಾಲ್ಲೂಕಿನ ಶಾಸಕರು ಮಂತ್ರಿಯಾಗಿರುವುದು ಅವರಿಂದ ಯಾವುದೇ ಅಭಿವೃದ್ದಿ ನೀರಿಕ್ಷಿಸಲು ಸಾಧ್ಯವಿಲ್ಲ ಸರ್ಕಾರವು ಬರೀ ಹಗರಣ ನಲವತ್ತು ಪರ್ಸೆಂಟ್ ಕಮೀಷನ್, ಭ್ರಷ್ಟಚಾರದ ಸರ್ಕಾರವಾಗಿದೆ ಎಂದು ತಿಪಟೂರು ತಾಲ್ಲೂಕು ಹೋರಾಟ ಸಮಿತಿಯ ಅದ್ಯಕ್ಷ ಹಾಗೂ ಕಾಂಗ್ರೇಸ್ ಮುಖಂಡ ಲೋಕೇಶ್ವರ್ ಆರೋಪ ಮಾಡಿದರು.
ನಗರದ ಕಲ್ಪತರು ಗ್ರಾಂಡ್ ಹೋಟೆಲ್ನಲ್ಲಿ ಕರೆದಿದ್ದ ಪ್ರತಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ನಗರದ ನಗರಸಭೆಯಲ್ಲಿ ಲಂಚದ ಹಾವಳಿ ಹೆಚ್ಚಾಗಿದ್ದು ನಗರಸಭೆಯ ಆಯುಕ್ತ ಹಾಗೂ ಅಧ್ಯಕ್ಷ ಸಾರ್ವಜನಿಕರಿಗೆ ಕಚೇರಿ ಸಮಯದಲ್ಲಿ ಸಿಗದೆ ಜನರು ಸರ್ಕಾರಿ ಹಾಗೂ ತಮ್ಮ ವೈಯುಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳಲು ಹರಸಾಹಸ ಪಡಬೇಕಾಗಿದೆ ಎಂದರು.
ನಗರದಲ್ಲಿ ರಾಜಕಾಲುವೆಗಳು ಒತ್ತುವರಿಯಾಗಿದ್ದು ಮೊನ್ನೆ ಸುರಿದ ಬಾರಿ ಮಳೆಗೆ ನಗರದ ಪ್ರಮುಖ ರಸ್ತೆಗಳು ಜಲಾವೃತ ಗೊಂಡು ಸಾರ್ವಜನಿಕರು ಪರದಾಟ ಅನುಭವಿಸಿದ್ದಾರೆ, ರಾಜ್ಯದಲ್ಲಿ ಮಳೆ ಬಂದು ಕೆರೆ ಕಟ್ಟೆಗಳು ತುಂಬಿದ್ದರೆ ತಿಪಟೂರಿನ ಕೆರೆಗೆ ಸರಿಯಾಗಿ ನೀರು ಬರದೆ ಭರ್ತಿಯಾಗಲು ಸಾಧ್ಯವಾ ಗಲಿಲ್ಲ ಇದಕ್ಕೆ ರಾಜಕಾಲುವೆಗಳ ಒತ್ತುವರಿ ಕಾರಣವಾಗಿದೆ ಎಂದು ಆರೋಪ ಮಾಡಿದರು.
ತಾಲ್ಲೂಕಿನಲ್ಲಿ ಸಚಿವರಿಗಿಂತ ಆತನ ಸಹಾಯಕ ಮುರಳಿ ಎಲ್ಲಾ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು ಸಚಿವ ನಾಗೇಶ್ ವಾರದಲ್ಲಿ ಶನಿವಾರ, ಭಾನುವಾರ ರಜಾದಿನದಂದು ತಾಲ್ಲೂಕಿಗೆ ಬಂದು ಪೂಜೆ ಮಾಡಿರುವ ಹಾಗೂ ಸಣ್ಣ ಪುಟ್ಟ ಕಾಮಗಾರಿ ಗಳಿಗೆ ಮೂರು ಮೂರು ಬಾರಿ ಪೂಜೆ ನೇರವೇರಿಸುತ್ತಿದ್ದು ತಾಲ್ಲೂಕು ಆಡಳಿತ ಇದರಿಂದ ಸಂಪೂರ್ಣವಾಗಿ ಬಿದ್ದುಹೋಗಿದೆ.
ಇದನ್ನು ತಾಲ್ಲೂಕಿನ ಜನತೆ ಗಮನಿಸುತ್ತಿದ್ದು ಮುಂದೆ ಬಾರಿ ಬದಲಾವಣೆ ಕಾಯುತ್ತಿದ್ದಾರೆ ಹಾಗೂ ತಾಲ್ಲೂಕಿನಲ್ಲಿ ಕಳ್ಳತನ ಸರಣಿಗಳು, ಬಹಳಷ್ಟು ಪ್ರಮಾಣದಲ್ಲಿ ಅತಿಯಾಗಿದ್ದು ಪೋಲೀಸ್ ಇಲಾಖೆಯು ಕ್ರಮಕೈಗೊಳ್ಳುವುದರಲ್ಲಿ ವಿಪಲತೆ ಹೊಂದಿದೆ.
ಎತ್ತಿನ ಹೊಳೆ ವಿಚಾರದಲ್ಲಿ ಭೂಮಿ ಕಳೆದುಕೊಂಡಿರುವವರಿಗೆ ಪರಿಹಾರ ಹಣ ನೀಡುವುದರಲ್ಲಿ ಸರ್ಕಾರ ಮೀನಾಮೇಷ ತೋರಿಸುತ್ತಿದ್ದು ಬೆಳೆ ಪರಿಹಾರ, ಭೂ ಪರಿಹಾರ ಇನ್ನೂ ಬಂದಿರುವುದಿಲ್ಲ, ಬಗುರ್ ಹುಕಂ ಜಮೀನಿನ ವಿಚಾರದಲ್ಲಿ ಸಚಿವರ ಹಿಂಬಾಲಕರಿಗೆ ಹಾಗೂ ಶ್ರೀಮಂತದವರಿಗೆ ಭೂಮಿಗಳು ದೊರೆಯುತ್ತಿದ್ದು ಅಲ್ಲಿನ ಸದಸ್ಯರು ನಾಮಕವಸ್ತೆಗಾಗಿ ಹೆಬ್ಬಟ್ಟಿನ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು U್ಪಣೇಶ್, ಸದಸ್ಯರಾದ ಭಾರತಿ ಮಂಜುನಾಥ್, ಯಮುನಾ ಧರಣೇಶ್, ಆಶಿಫ್ ಭಾನು, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ತ್ರಿಯಂಭಕ, ಮಾಜಿ ತಾ ಪಂ ಅದ್ಯಕ್ಷ ಪರಮಶಿವಯ್ಯ. ಮಾಜಿ ಎಪಿಎಮ್ಸಿ ಸದಸ್ಯರಾದ ಬಸವರಾಜು, ಸಾರ್ಥವಳ್ಳಿಶಿವಕುಮಾರ್, ಮುಂಖAಡರಾದ ಮಲ್ಲೇಶ್, ರೇಣುಕ, ಗಂಗಾಧರ್, ದಶರಥ್ ಮತ್ತಿತ್ತರು ಹಾಜರಿದ್ದರು.