Wednesday, 27th November 2024

ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗ ಅವಕಾಶ ಇದೆ

ಮಧುಗಿರಿ : ಐಟಿಐ ಓದಿ ಕೌಶಲ್ಯವನ್ನು ಪಡೆದವರಿಗೆ ಕೈಗಾರಿಕೆಗಳಲ್ಲಿ ಉತ್ತಮ ಉದ್ಯೋಗ ಅವಕಾಶ ಇದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಂ.ಎನ್. ರೇಣುಕಾ ರಾಧ್ಯ ತಿಳಿಸಿದರು.

ಪಟ್ಟಣದ ಲಾಲ್ ಬಹದ್ದೂರ ಐಟಿಐ ಕಾಲೇಜಿನಲ್ಲಿ ೨೦೨೦-೨೨ ಸಾಲಿನಲ್ಲಿ ಐಟಿಐ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ತರಬೇತಿ ದಾರರಿಗೆ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವೃತ್ತಿ ಪ್ರಮಾಣಪತ್ರಗಳನ್ನು ವಿತರಿಸಿ ಮಾತನಾಡಿದ ಅವರು, ಈ ರಾಷ್ಟ್ರೀಯ ಪ್ರಮಾಣಪತ್ರಗಳನ್ನು ಭಾರತ ಸರ್ಕಾರದ ಅಡಿಯಲ್ಲಿ ದೇಶದ ಎಲ್ಲಾ ಐಟಿಐಗಳಲ್ಲಿ ಏಕಕಾಲಕ್ಕೆ ವಿತರಿಸಲಾಗುತ್ತಿದೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಡಿ.ಜಿ.ಶಂಕರನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎಲ್.ಪ್ರಕಾಶಬಾಬು, ಜಂಟಿ ಕಾರ್ಯದರ್ಶಿ ಕೆ.ಎಸ್.ವಿ. ಪ್ರಸಾದ್, ಖಜಾಂಚಿ ಎಂ.ಎಲ್.ಸೂರ್ಯನಾರಾಯಣ, ನಿರ್ದೇಶಕ ಎಂ.ಕೆ.ನಾಗರಾಜು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ ನಾಗೇಶ್, ಪ್ರಾಚಾರ್ಯ ಜಿ. ಹನು ಮಂತರಾಯಪ್ಪ, ಉಪನ್ಯಾಸಕರಾದ ಬಿ.ಎಲ್.ಮಲ್ಲಿಕಾರ್ಜುನಪ್ಪ, ಆರ್.ಆರ್. ನಾಗೇಶಯ್ಯ, ಬಿ.ಚಂದ್ರಯ್ಯ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.