Wednesday, 27th November 2024

ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರಶಸ್ತಿ ಪ್ರದಾನ ಸಮಾರಂಭ

ತುಮಕೂರು: ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನದ ವತಿಯಿಂದ ಸೆ.21ರಂದು ಚಂದ್ರಶೇಖರ ಆಲೂರು, ಲಲಿತಾ ಸಿದ್ಧಬಸವಯ್ಯಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸೆ.21ರಂದು ಸಂಜೆ 4.30ಕ್ಕೆ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯ ಲಿದೆ. ರಾಜ್ಯಸಭಾ ಸದಸ್ಯ ಡಾ.ಎಲ್.ಹನು ಮಂತಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳಾಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಸವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಸಣ್ಣಗುಡ್ಡಯ್ಯ ಅವರ ಪತ್ನಿ ಶಾಂತಾ ಸಣ್ಣ ಗುಡ್ಡಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಉಪಸ್ಥಿತರಿರುವರು.

ಪ್ರೊ.ಸಣ್ಣಗುಡ್ಡಯ್ಯ ಸಾಹಿತ್ಯ ಪ್ರಶಸ್ತಿ

ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಅವರ ಹೆಸರಿನಲ್ಲಿ ತುಮಕೂರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದ್ದು, ಈ ಪ್ರತಿಷ್ಠಾನದಿಂದ ಪ್ರತಿವರ್ಷ ಇಬ್ಬರು ಸಾಹಿತಿಗಳಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

ಪ್ರಶಸ್ತಿಯು ತಲಾ ಹತ್ತು ಸಾವಿರ ರುಪಾಯಿ ಒಳಗೊಂಡಿ ರುತ್ತದೆ. ಮೊದಲ ವರ್ಷದ ಪ್ರಶಸ್ತಿಯನ್ನು ಸಣ್ಣಗುಡ್ಡಯ್ಯ ಅವರ ಪ್ರಮುಖ ಸೃಜನಶೀಲ ಕ್ಷೇತ್ರಗಳಾದ ಕಾವ್ಯ ಮತ್ತು ಲಲಿತ ಪ್ರಬಂಧ ಪ್ರಧಾನ ಸಾಹಿತಿಗಳಿಗೆ ನೀಡುತ್ತಿದ್ದು, ಕ್ರಮವಾಗಿ ಲಲಿತಾ ಸಿದ್ಧಬಸವಯ್ಯ ಮತ್ತು ಚಂದ್ರಶೇಖರ ಆಲೂರು ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪ್ರೊ.ಎಚ್.ಜಿ.ಸಣ್ಣಗುಡ್ಡಯ್ಯ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ತಿಳಿಸಿ ದ್ದಾರೆ.

ಪ್ರಭಾರ ಕುಲಪತಿ ಪ್ರೊ. ಕೇಶವ ಅವರು ಅಧ್ಯಕ್ಷತೆ ವಹಿಸುವರು. ಕುಲಸಚಿವ ಪ್ರೊ. ಕೆ. ಶಿವಚಿತ್ತಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ. ನಿರ್ಮಲ ರಾಜು, ಸಿಂಡಿಕೇಟ್ ಸದಸ್ಯ ವಿನಯ್ ಟಿ ಡಿ, ಶಿರಾ ತಹಶೀಲ್ದಾರ್ ಮಮತಾ ಎಂ., ಉಪಸ್ಥಿತರಿರುವರು.