Wednesday, 27th November 2024

ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ

ಮಧುಗಿರಿ: ನಾನು ಸ್ಥಳೀಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ದಿಸಲಿದ್ದು, ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಮಧು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎನ್.ಮಧು ತಿಳಿಸಿದರು.

ತಾಲೂಕಿನ ದೊಡ್ಡೇರಿಯ ಕೂನಹಳ್ಳಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ನಂತರ ಪುಲಮಾಚಿಯ ಶ್ರೀ ಭೂತನಾರಾಯಣ ಸ್ವಾಮಿ ಸನ್ನಿದಿಯಲ್ಲಿ ಪೂಜಾ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ದೇಗುಲದ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುವ ಭರವಸೆ ನೀಡಿ ಮಾತನಾಡಿದ ಅವರು, ಕಳೆದ ಹಲವು ದಶಕಗಳಿಂದಲೂ ಸ್ಥಳೀಯ ಶಾಸಕರಿಲ್ಲದೆ ಮಧುಗಿರಿ ಅಭಿವೃದ್ಧಿ ಶೂನ್ಯವಾಗಿದ್ದು ಹಳೆಯ ಸಮಸ್ಯೆಗಳಾದ ರಸ್ತೆ, ಮನೆ, ಪಿಂಚಣಿ, ದೇಗುಲ ಹಾಗೂ ಶಾಲೆಗಳ ಅಭಿವೃದ್ಧಿಯಾಗಿಲ್ಲ.

ಇದನ್ನು ಮನಗಂಡು ಕಳೆದ ೨ ವರ್ಷದಿಂದ ಧಾರ್ಮಿಕ ಕೇಂದ್ರಗಳ ಹಾಗೂ ಜನತೆಯ ಸಾಮಾಜಿಕ ಸಮಸ್ಯೆಗಳಿಗೆ ಸಾಧ್ಯ ವಾದಷ್ಟು ಸ್ಪಂದಿಸುತ್ತಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ ಗಾಗಿ ಏಕಶಿಲಾ ಬೆಟ್ಟಕ್ಕೆ ರೋಪ್‌ವೇ, ಜಿಲ್ಲಾಕೇಂದ್ರ, ನಿರುದ್ಯೋಗ ನಿವಾರಣೆಗೆ ಕೈಗಾರಿಕೆ ಸ್ಥಾಪನೆ ಸೇರಿದಂತೆ ಕ್ಷೇತ್ರದ ಮಕ್ಕಳಿಗೆ ಉನ್ನತ ಶಿಕ್ಷಣ ಸಿಗಲು ಉನ್ನತ ಶಿಕ್ಷಣದ ಕಾಲೇಜು ಗಳನ್ನು ಆರಂಭಿ ಸುವ ಗುರಿ ಹೊಂದಿದ್ದೇನೆ. ಅದಕ್ಕಾಗಿ ರಾಜಕೀಯ ಶಕ್ತಿಯ ಅಗತ್ಯ ವಿದ್ದು ಕ್ಷೇತ್ರದ ಜನತೆ ಕೈಹಿಡಿಯುವ ವಿಶ್ವಾಸದಿಂದ ಸಮಾಜ ಸೇವೆ ಕೈಗೊಂಡಿದ್ದೇನೆ ಎಂದರು.

ನನ್ನ ಮೊದಲ ಆದ್ಯತೆ ಬಿಜೆಪಿ. ಈ ಪಕ್ಷದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ವಾಜಪೇಯಿ ಹಾಗೂ ಈಗಿನ ಸರ್ಕಾರದ ಜನಪರ ಕಾರ್ಯಗಳಿಂದ ಪ್ರೇರೆಪಿತನಾಗಿ ರಾಜಕೀಯಕ್ಕೆ ಬಂದಿದ್ದು ಬಿಜೆಪಿಯಿಂದ ಟಿಕೆಟ್ ನೀಡಿದರೆ ಬಿಜೆಪಿಗೆ ಒಂದು ಶಾಸಕ ಸ್ಥಾನ ನೀಡಲಿದ್ದು ಕ್ಷೇತ್ರದ ಜನರ ಸೇವೆ ಮಾಡುತ್ತೇನೆ. ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾವಿದೆ ಎಂದರು.

ಈ ಸಂದರ್ಭದಲ್ಲಿ ಪುಲಮಾಚಿ ಗ್ರಾ.ಪಂ. ಮಾಜಿ ಸದಸ್ಯ ಈರಣ್ಣ, ಶ್ರೀನಿವಾಸಪುರದ ವೆಂಕಟರಮಣಪ್ಪ, ಗಿಯನಪಾಳ್ಯದ ಸಿದ್ದರಾಜು, ಶಿವಣ್ಣ, ನಾಗರಾಜಪ್ಪ, ಚೌಡಪ್ಪ, ಉಲ್ಲೇಪ್ಪ, ಲಕ್ಷಿ÷್ಮÃನಾರಾಯಣ್, ಇತರರು ಜೊತೆಗಿದ್ದರು.