Wednesday, 27th November 2024

ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರಾಸಕ್ತಿ

ಗುಬ್ಬಿ: ಯುವಕರು ಗ್ರಾಮೀಣ ಕ್ರೀಡೆಗಳ ಬಗ್ಗೆ ನಿರಾಸಕ್ತಿ ತೋರುತ್ತಿದ್ದು , ಹೀಗೆ ಮುಂದುವರೆದರೆ ಮುಂದಿನ ಪೀಳಿಗೆಗೆ ಸಾಹಸ ಮಯ ಕ್ರೀಡೆಗಳು ಕಣ್ಮರೆಯಾಗುದರಲ್ಲಿ ಸಂದೇಹವಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆ.ಟಿ.ಪಾಂಡುರಂಗ ತಿಳಿಸಿದರು.

ತಾಲ್ಲೂಕಿನ ಸಿಎಸ್ ಪುರ ಗ್ರಾಮದ ಪಿಪಿಎಸ್ ಶಾಲಾ  ಆವರನದಲ್ಲಿ ಸಿಎಸ್ ಪುರ ಗ್ರಾಮ ಪಂಚಾಯಿತಿ ವತಿಯಿಂದ  ಏರ್ಪಡಿಸಿದ್ದ ಗ್ರಾಮೀಣ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯ ವನ್ನು ಹೊಂದುವುದರ ಜತೆಗೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗ್ರಾಮೀಣ ಕ್ರೀಡೆ ಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದರು.
ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಇಂದ್ರೇಶ್ ಮಾತನಾಡಿ ಮಕ್ಕಳ ಜ್ಞಾನ ವಿಕಾಸ ಮಾಡುವ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣ ಕಲೆ ಸಾಹಿತ್ಯ ಹಾಗೂ ಕ್ರೀಡಾಕೂಟಗಳನ್ನು ಉಳಿಸಿ ಬೆಳೆಸಲು ಶಿಕ್ಷಕರು ಮತ್ತು ಪೋಷಕರು ಸಹಕರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಎಂ.ಸಿ.ಕಾಂತರಾಜು, ಕಾರ್ಯದರ್ಶಿ ಶೇಖರ್, ಮಾಜಿ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷೆ ಕೆ.ಪಿ.ನವ್ಯ, ಕೆಪಿಎಸ್ ಶಾಲೆಯ ಪ್ರಾಂಶುಪಾಲ ಗೋವಿಂದರಾಜು, ಸದಸ್ಯರಾದ ಮಹಾಲಕ್ಷ್ಮಿ, ಶಿವಣ್ಣ, ಅಶ್ವಥ್, ಸವಿತಾ, ಎಂ.ಕೆಂಪರಾಜು, ಅರುಣ್ಶ್ರೀನಿವಾಸ್, ಕಾಂತರಾಜು, ಮಂಜುಳಾರಘು, ಮುಖಂಡ ಸದಾಶಿವಕುಮಾರ್ ಮತ್ತಿತರರು ಇದ್ದರು.