ರಾಜ್ಯ ಕ್ರಿಯಾ ಯೋಜನೆಗಳ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ನಿರ್ಮೂಲನೆ ಮುಂತಾದ ವಿಷಯಗಳ ಕುರಿತು ಕೆಲವು ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಹೊಂದಾಣಿಕೆ ಬೆಳೆಸಲು ಈ ಸಮ್ಮೇಳನವನ್ನು ಆಯೋಜಿಸ ಲಾಗಿದೆ.
ನಾಶವಾಗುತ್ತಿರುವ ಭೂಮಿ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಇದು ಗಮನಹರಿಸುತ್ತದೆ. ಎರಡು ದಿನಗಳ ಸಮ್ಮೇಳನವು ಸೆ.23-24 ರಂದು ನಡೆಯಲಿದೆ.
ಈ ವರ್ಷ ಜುಲೈನಿಂದ ಆಯ್ದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸ ಲಾಗಿದ್ದು, ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕವಾಗಿ ಮುಂದುವರೆದಿದೆ. ಏಕ-ಬಳಕೆಯ ಪ್ಲಾಸ್ಟಿಕ್‌ಗಳು ಸಾಮಾನ್ಯವಾಗಿ ಒಂದೇ ಬಾರಿ ಬಳಸಿದ ನಂತರ ಎಸೆಯಲ್ಪಡುತ್ತವೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ.