ವಿಧಾನಸಭೆ ಅಂಗೀಕರಿಸಿದ ಕೂಡಲೇ ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಆರೋಗ್ಯ ವಿಶ್ವವಿದ್ಯಾಲಯಕ್ಕೆ ಎನ್ಟಿಆರ್ ಅವರ ಹೆಸರನ್ನು ಮುಂದುವರಿಸ ಬೇಕು ಎಂದು ಒತ್ತಾಯಿಸಿದರು.
ಆಂಧ್ರ ಪ್ರದೇಶದಲ್ಲಿ ಈ ಹಿಂದೆ ವೈ.ಎಸ್ ರಾಜಶೇಖರ ರೆಡ್ಡಿ ಸೇರಿದಂತೆ ಯಾವೊಬ್ಬ ಮುಖ್ಯಮಂತ್ರಿಯೂ ಎನ್‌ಟಿಆರ್ ಯುಎಚ್‌ಎಸ್ ಅನ್ನು ಮರುನಾಮಕರಣ ಮಾಡಲು ಪ್ರಯತ್ನಿಸಿರಲಿಲ್ಲ.
ದೇಶಾದ್ಯಂತ ಪ್ರಶಂಸೆ ಹೊಂದಿರುವ ಎನ್‌ಟಿಆರ್‌ಯು ಎಚ್‌ಎಸ್ ಸ್ಥಾಪನೆಯಾಗಿ 36 ವರ್ಷಗಳ ನಂತರ ಅದರ ಹೆಸರನ್ನು ಮರುನಾಮಕರ ಮಾಡುವುದು ತರ್ಕಬದ್ಧ ವಾಗಿಲ್ಲ,” ಎಂದು ನಾಯ್ಡು ಹೇಳಿದ್ದಾರೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಟಿ. ರಾಮರಾವ್ ವೈದ್ಯಕೀಯ ಶಿಕ್ಷಣಕ್ಕೆ ಪ್ರತ್ಯೇಕ ವಿಶ್ವವಿದ್ಯಾನಿಲಯವನ್ನು ಹೊಂದಬೇಕು ಎಂಬ ದೃಷ್ಟಿಯಿಂದ 1986 ರಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು.
1998 ರಲ್ಲಿ ತೆಲುಗು ದೇಶಂ ಪಕ್ಷದ ಸರ್ಕಾರವು ಅವರ ಹೆಸರನ್ನು ವಿಶ್ವವಿದ್ಯಾಲಯಕ್ಕೆ ಇರಿಸಿತ್ತು. ಈಗಿನ ಜಗನ್ ಮೋಹನ್ ರೆಡ್ಡಿ ಸರ್ಕಾರದ ನಡೆಯನ್ನು ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಟೀಕಿಸಿದ್ದಾರೆ. “ವಿಶ್ವವಿದ್ಯಾನಿಲಯವನ್ನು ಎನ್‌ಟಿಆರ್ ಸ್ಥಾಪಿಸಿ ದ್ದರೇ ಅಥವಾ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರೇ?,” ಎಂದು ಟಿಡಿಪಿ ಅಧ್ಯಕ್ಷರು ಪ್ರಶ್ನಿಸಿದರು.