ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿ ಬಲು ಜನಪ್ರಿಯತೆ ಪಡೆದಿತ್ತು. ವಾರಾಂತ್ಯ ಬಂತೆಂದರೆ ಗಿಚ್ಚಿ ಗಿಲಿಗಿಲಿ ನೋಡಲು ಪ್ರೇಕ್ಷಕರು ಟಿವಿ ಮುಂದೆ ಆಸೀನರಾಗುತ್ತಿದ್ದರು, ಕಾಮಿಡಿ ಸ್ಕಿಟ್ ನೋಡಿ ನಗೆಗಡಲಲ್ಲಿ ತೇಲು ತ್ತಿದ್ದರು.
ಈ ಶೋನಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರು ಒಬ್ಬರಿಗಿಂತ ಒಬ್ಬರು ಉತ್ತಮವಾಗಿ ಅಭಿನಯಿಸಿ, ಮನಸೂರೆಗೊಂಡರು. ಅದರಲ್ಲಿ ಅನನ್ಯಾ ಅಮರ್ ಕೂಡ ಒಬ್ಬರು. ಅಪರಂಜಿ ಅನನ್ಯಾ, ಮುಗ್ಧತೆಯ ಮೂಲಕವೇ ಮನಸೂರೆಗೊಂಡಿದ್ದರು. ಅಷ್ಟೇ ಅಲ್ಲ ಸ್ಕಿಟ್ನಲ್ಲಿ, ಯಾವುದೇ ಪಾತ್ರ ನೀಡಿದರು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.
ಸೈಲೆಂಟ್ ಆಗಿ ಇದ್ದುಕೊಂಡು ಎಲ್ಲರನ್ನೂ ನಗಿಸುತ್ತಿದ್ದರು. ಒಮ್ಮೆ ಮಗಳಾಗಿ, ಪೊಲೀಸ್ ಅಧಿಕಾರಿಯಾಗಿ, ಕಳ್ಳಿಯಾಗಿ.. ಹೀಗೆ ನಾನ ಪಾತ್ರಗಳಲ್ಲಿ ಮೆಚ್ಚುವ ಅಭಿನಯ ತೋರಿ ದರು. ಹಾಸ್ಯದ ಮೂಲಕವೇ ಮನಸೂರೆಗೊಂಡರು. ಗಿಚ್ಚಿ ಗಿಲಿಗಿಲಿಯ ಕೇಂದ್ರ ಬಿಂದುವಾಗಿದ್ದ ಅನನ್ಯಾ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು. ಈ ಶೋನಲ್ಲಿ ವಿಜೇತೆ ಯಾಗದಿದ್ದರೂ, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು.
ಅನನ್ಯಾ ಮಾಡೆಲಿಂಗ್ ಕ್ಷೇತ್ರದಲ್ಲಿ ಬ್ಯುಸಿಯಾಗಿದ್ದರು. ಜತೆಗೆ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿ ಸೈ ಎನಿಸಿಕೊಂಡವರು. ಮಾಡೆಲಿಂಗ್ನಲ್ಲಿ ಬ್ಯುಸಿಯಾಗಿದ್ದರೂ ಅನನ್ಯಾ ನಟನೆಯತ್ತಲೇ ಹಂಬಲಿಸುತ್ತಿದ್ದರು. ಅದೇ ವೇಳೆಗೆ ಆರಂಭವಾಗಿದ್ದ ಗಿಚ್ಚಿ ಗಿಲಿಗಿಲಿ ಶೋಗೆ ನೇರವಾಗಿ ಎಂಟ್ರಿಕೊಟ್ಟರು. ಈ ಶೋನಲ್ಲಿ ಕಾಮಿಡಿ ಮೂಲಕ ಕಮಾಲ್ ಮಾಡಿದರು. ಬುಜ್ಜಿ ಎಂತಲೇ ಖ್ಯಾತಿ ಪಡೆದರು.
ಮೆಚ್ಚುಗೆಯಾದ ಪಾತ್ರವದು: ಅನನ್ಯಾ, ಗಿಚ್ಚಿ ಗಿಲಿಗಿಲಿಯಲ್ಲಿ ಹಲವು ಸ್ಕಿಟ್ಗಳಲ್ಲಿ ನಟಿಸಿದ್ದಾರೆ. ಮೆಚ್ಚುವ ನಟನೆ ತೋರಿ ದ್ದಾರೆ. ಅವುಗಳಲ್ಲಿ ಬುಜ್ಜಿಯ ಎಲ್ಲಾ ಪಾತ್ರಗಳು ಮೆಚ್ಚುಗೆಯಾದವು. ಅದರಲ್ಲೂ ಕಾಂಚಿವರಂ, ಪೊಲೀಸನ ಹೆಂಡತಿಯ ಪಾತ್ರ ಅನನ್ಯಾಗೆ ಅಚ್ಚುಮೆ ಚ್ಚಂತೆ. ಮಾತ್ರವಲ್ಲ, ಈ ಸ್ಕಿಟ್ಗಳು ಕಾಮಿಡಿ ಪ್ರಿಯರಿಗೂ ಹಿಡಿಸಿವೆ.
ಸಿನಿಮಾರಂಗದತ್ತ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಅನನ್ಯಾಗೆ ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಅರಸಿ ಬರುತ್ತಿವೆ. ಈಗಾಗಲೇ ಕೆಲವು ಕಥೆಗಳನ್ನು ಕೇಳಿ ಮೆಚ್ಚಿರುವ ಅನನ್ಯಾ, ಸಿನಿಮಾದಲ್ಲಿ ನಟಿಸಲು ಒಪ್ಪಿದ್ದಾರೆ. ಇನ್ನೇನು ಚಿತ್ರ ಸೆಟ್ಟೇರುವ ಸಾಧ್ಯತೆಯೂ ಇದೆ. ಇದರ ಜತೆಗೆ ಧಾರಾವಾಹಿಗಳಲ್ಲೂ ನಟಿಸಲು ಆಫರ್ಗಳು ಬರುತ್ತಿವೆ.
***
ನನಗೆ ಎಲ್ಲಾ ಪಾತ್ರಗಳೂ ಇಷ್ಟವೆ. ಮುಖ್ಯ ಪಾತ್ರದಲ್ಲಿಯೇ ನಟಿಸಬೇಕು ಎಂದೇನು ಇಲ್ಲ. ಪ್ರೇಕ್ಷಕರು ಮೆಚ್ಚುವ ಮಹತ್ವದ ಪಾತ್ರ ಇದ್ದರೆ ಚೆಂದ. ನೃತ್ಯ ಎಂದರೆ ನನಗೆ ಅಚ್ಚುಮೆಚ್ಚು. ಹಾಗಾಗಿ ಭರತನಾಟ್ಯವನ್ನು ಕಲಿತೆ. ಮುಂದೆ ನೃತ್ಯಗಾರ್ತಿಯ ಪಾತ್ರ ಸಿಕ್ಕಿದರೆ
ಇನ್ನೂ ಖುಷಿ.