Sunday, 24th November 2024

ಶಿಷ್ಯರನ್ನು ಕರೆತಂದು ಗುರುವಾದ ಶರಣ್‌

ಪ್ರಶಾಂತ್‌ ಟಿ.ಆರ್‌.

ನಾಲ್ಕು ದಶಕಗಳ ಬಳಿಕ ಮತ್ತೆ ಗುರುಶಿಷ್ಯರು ಚಂದನವನಕ್ಕೆ ಬಂದಿದ್ದಾರೆ. ಈ ಬಾರಿ ಪೌರಾಣಿಕ ಕಥೆ ಹೇಳುತ್ತಿಲ್ಲ. ಬದಲಾಗಿ ದೇಸಿ ಕ್ರೀಡೆಯ ರೋಚಕ ಕಥೆಯನ್ನು ಹೊತ್ತು ತಂದಿದ್ದಾರೆ.

ಶರಣ್ ಗುರುವಾಗಿ ಎಂಟ್ರಿಕೊಟ್ಟಿದ್ದು, ಶಿಷ್ಯರೊಂದಿಗೆ ಖೋ ಖೋ ಆಡಲು ಅಖಾಡಕ್ಕಿಳಿ ದಿದ್ದಾರೆ. ಹಾಗಾಗಿ ಗುರು ಶಿಷ್ಯರು ಹೊಸತನವನ್ನು ಹೊತ್ತುಬಂದಿದ್ದಾರೆ. ತಮ್ಮ ಚಿತ್ರದ ಬಗ್ಗೆ ಶರಣ್ ವಿ.ಸಿನಿಮಾಸ್‌ನೊಂದಿಗೆ ಮಾತನಾಡಿದ್ದಾರೆ.

ವಿ.ಸಿನಿಮಾಸ್: ಗುರುವಾಗಿ ಯಾವ ಕಥೆ ಹೇಳುತ್ತೀರಾ ?
ಶರಣ್ : ಗುರು ಶಿಷ್ಯರು ಶೀರ್ಷಿಕೆ ಕೇಳಲು ಬಲು ಹಿತ. ಐತಿಹಾಸಿಕ ಮತ್ತು ಪೌರಾಣಿಕ ಕಥೆಯನ್ನು ಒಳಗೊಂಡಿದ್ದ ಗುರು ಶಿಷ್ಯರು ನನ್ನ ಅಚ್ಚುಮೆಚ್ಚಿನ ಸಿನಿಮಾ. ಈಗ ಅದೇ ಶೀರ್ಷಿಕೆಯ ಸಿನಿಮಾದಲ್ಲಿ ನಾನು ತೆರೆಗೆ ಬರುತ್ತಿರುವುದು ಸಂತಸ ತಂದಿದೆ. ಈ ಚಿತ್ರದಲ್ಲಿ ಖೋ ಖೋ ಕ್ರೀಡೆಯ ಬಗ್ಗೆ ಹೇಳಲಾಗಿದೆ. ನಾನು ಗುರುವಾಗಿ ಕಾಣಿಸಿಕೊಂಡಿ ದ್ದು, ನನ್ನೊಂದಿಗೆ ಹದಿಮೂರು ಶಿಷ್ಯರಿದ್ದಾರೆ.

ವಿ.ಸಿ : ಸಿನಿಮಾದಲ್ಲಿ ಸಂಪೂರ್ಣ ಖೋಖೋ ಕುರಿತ ಕಥೆ ಇದೆಯೆ ?
ಶರಣ್: ಚಿತ್ರದ ಕಥೆಗೆ ತಕ್ಕಂತೆ ಖೋಖೋ ಆಟ ಬಗ್ಗೆ ಹೇಳಿದ್ದೇವೆ. ದೇಸಿ ಕ್ರೀಡೆಯನ್ನು ಒಂದಷ್ಟು ರೋಚಕವಾಗಿ ತೆರೆಯಲ್ಲಿ ಕಟ್ಟಿಕೊಟ್ಟಿದ್ದೇವೆ. ಸ್ಪೂರ್ತಿದಾಯಕ ಸ್ಟೋರಿ ತೆರೆಯಲ್ಲಿ ಸಾಗುತ್ತದೆ. ಜತೆಗೆ ಕಾಮಿಡಿ, ಸೆಂಟಿ ಮೆಂಟ್ ಎಲ್ಲವೂ ಚಿತ್ರದ ಕಥೆಯಲ್ಲಿ ಮಿಳಿತವಾಗಿದೆ..

ವಿ.ಸಿ :ಈ ರೀತಿಯ ಕಥೆಯನ್ನು ಆಯ್ದುಕೊಳ್ಳಲು ಕಾರಣ ?

ಶರಣ್ : ನನಗೂ ಖೊಖೋ ಬಗ್ಗೆ ಒಲವಿತ್ತು. ಹಿಂದೆ ಶಾಲೆಗಳಲ್ಲಿ ಖೋಖೋ ಕೋರ್ಟ್ ಗಳಿರು ತ್ತಿದ್ದವು. ಆದರೆ ಈಗ ಖೋ ಖೋ ಕ್ರೀಡೆಗೆ ಅಷ್ಟಾಗಿ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನಿಸುತ್ತಿದೆ. ಹೊಸ ತನದ ಸಿನಿಮಾ ಕೊಡಬೇಕು ಎಂಬ ನಿಟ್ಟಿನಲ್ಲಿ ಇಂತಹ ಕಥೆ ಯನ್ನು ಆಯ್ದು ಕೊಂಡೆವು. ತೊಂಬತ್ತರ ಕಾಲ ಘಟ್ಟದಲ್ಲಿ ನಡೆಯುವ ಕಥೆಯಿದು. ಯಾಕೆಂದರೆ ಆಗ ಖೋ ಖೋ ಕ್ರೀಡೆ ಉತ್ತುಂಗದಲ್ಲಿತ್ತು. ನಿರ್ದೇಶಕ ಜಡೇಶ್ ಕುಮಾರ್ ಹಂಪಿ ಈ ಚಿತ್ರವನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ.

ವಿ.ಸಿ : ಈ ಸಿನಿಮಾಗೆ ತಯಾರಿ ಹೇಗಿತ್ತು ?
ಶರಣ್ : ಈ ಚಿತ್ರಕ್ಕಾಗಿ ಭರ್ಜರಿ ತಯಾರಿ ನಡೆಸಿದೆವು. ನನ್ನೊಂದಿಗೆ ಹದಿಮೂರು ಶಿಷ್ಯರು ಇದ್ದಾರೆ. ಕೆಲವರಿಗೆ ಖೋಖೋ ಬಗ್ಗೆ ತಿಳಿದಿದ್ದರು ಅಷ್ಟಾಗಿ ಆಟವಾಡಲು ಬರುವುದಿಲ್ಲ. ಹಾಗಾಗಿ ರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಕರೆತಂದು ಎಲ್ಲರಿಗೂ ತರಬೇತಿ ಕೊಡಿಸಿದೆವು. ಸುಮಾರು ಎಂಟು ತಿಂಗಳು ತರಬೇತಿ ನೀಡಿದ ಮೇಲೆ, ಶೂಟಿಂಗ್‌ಗೆ ಹೊರಟೆವು. ಈ ಚಿತ್ರದಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಖೋಖೋ ಆಟಗಾರರು ನಟಿಸಿರುವುದು ಚಿತ್ರದ ಹೆಮ್ಮೆ.

ವಿ.ಸಿ : ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೆ? 
ಶರಣ್ : ನಾನು ಖೋ ಖೋ ಕೋಚ್ ಪಾತ್ರದಲ್ಲಿ ನಟಿಸಿದ್ದೇನೆ. ನಾನು ನಟಿಸಿದ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ಇಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದೇನೆ. ಇನ್ನು ಹತ್ತು ವರ್ಷ ಕಳೆದರೂ ಗುರುಶಿಷ್ಯರು ನನ್ನ ಹೃದಯದಲ್ಲಿ ಉಳಿಯುವ ಚಿತ್ರವಾಗಿದೆ.

***

ನನ್ನೊಂದಿಗೆ ನಟಿಸಿದ ಈ ಮಕ್ಕಳು ಯಾವುದೇ ಪಾತ್ರ ಕೊಟ್ಟರೂ ನಟಿಸಲು ಸಿದ್ಧವಾಗಿದ್ದಾರೆ. ಅವರಲ್ಲಿ ಶ್ರದ್ದೆ ಇತ್ತು. ಕಲಿಯುವ ಹಂಬಲವೂ ಇದೆ. ಇವರು ಮುಂದೆ ಒಳ್ಳೆಯ ನಿರ್ದೇಶಕರೂ, ನಟರೂ ಆಗಬಹುದು.