ತುಮಕೂರು:ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಯೊಬ್ಬ ನಾಲ್ಕು ಮಂದಿಗೆ ದೃಷ್ಟಿ ನೀಡುವುದರೊಂದಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.
ನತದೃಷ್ಟದರ್ಶನ್ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನಲ್ಲಿಅಂತಿಮ ಬಿ.ಎ. ವಿದ್ಯಾರ್ಥಿ ಯಾಗಿದ್ದು, ಶುಕ್ರವಾರ ಸಂಜೆ ತುರು ವೇಕೆರೆ ತಾಲೂಕಿನ ನರಿಗೇಹಳ್ಳಿ ಸಮೀಪ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದ.
ಅಪಘಾತ ನಡೆದ ತಕ್ಷಣ ಆತನನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಪ್ರಯೋಜನ ವಾಗಲಿಲ್ಲ. ಆದರೆ ದರ್ಶನ್ ಕುಟುಂಬದ ವಿನಂತಿ ಮೇರೆಗೆ ವೈದ್ಯರು ಆತನ ಕಣ್ಣುಗಳನ್ನು ಸುರಕ್ಷಿತವಾಗಿ ಪಡೆದುಕೊಂಡರು. ಇವು ನಾಲ್ಕು ಮಂದಿಗೆ ದೃಷ್ಟಿ ನೀಡಲಿವೆ ಎಂದುಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದ ದರ್ಶನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ತನ್ನ ಹಳ್ಳಿಯಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲೇಖನ, ಕವಿತೆ ಇತ್ಯಾದಿಗಳನ್ನು ಬರೆದು ಪ್ರಕಟಿಸುತ್ತಿದ್ದ ದರ್ಶನ್, ಅನೇಕ ಕಿರುಚಿತ್ರಗಳನ್ನು ನಿರ್ದೇಶಿ ಸಿದ್ದ. ಆತ ನಟಿಸಿ ನಿರ್ದೇಶಿಸಿದ್ದ ‘ವಿಹಂಗಮಾಯ’ ಎಂಬ ಕಿರುಚಿತ್ರ ಸೆಮ್ಕಾ-ಯುನೆಸ್ಕೋ ನಡೆಸಿದ ಹವಾಮಾನ ಬದಲಾವಣೆ ಕುರಿತ ರಾಷ್ಟç ಮಟ್ಟದ ಕಿರುಚಿತ್ರ ಸ್ಪರ್ಧೆಗೆ ಆಯ್ಕೆಯಾಗಿತ್ತು.
“ಅತ್ಯಂತ ಸಜ್ಜನಿಕೆಯ ಶಿಸ್ತುಬದ್ಧ ವಿದ್ಯಾರ್ಥಿಯಾಗಿದ್ದ ದರ್ಶನ್‌ಎರಡು ದಿನಗಳ ಹಿಂದೆಯಷ್ಟೇ ನಡೆದ ಕಾಲೇಜು ವಾರ್ಷಿ ಕೋತ್ಸ ವದಲ್ಲಿ ಕುಲಪತಿಗಳಿಂದ ಅತ್ಯುತ್ತಮ ಎನ್.ಎಸ್.ಎಸ್. ಸ್ವಯಂಸೇವಕ ಪ್ರಶಸ್ತಿ ಪಡೆದಿದ್ದ. ಆತನ ಅಕಾಲಿಕ ಮರಣ ದಿಂದ ಕಾಲೇಜಿಗೆ ಆಘಾತವಾಗಿದೆ” ಎಂದು ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ ಸಂತಾಪ ವ್ಯಕ್ತಪಡಿಸಿದ್ದಾರೆ.
ದರ್ಶನ್‌ನ ಅಂತ್ಯಕ್ರಿಯೆ ನರಿಗೇಹಳ್ಳಿಯಲ್ಲಿ ಶನಿವಾರಅಪರಾಹ್ನ ನಡೆಯಿತು. ಕಲಾ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು ತೆರಳಿ ಅಂತಿಮ ನಮನ ಸಲ್ಲಿಸಿದರು. ದರ್ಶನ್ ಹೆತ್ತವರಾದ ಪ್ರಕಾಶ್-ಮಂಜುಳಾ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿದ್ದು, ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಸಹಾಯ ಮಾಡಬಯಸುವವರು ಈ ಖಾತೆಗೆ ಉದಾರದೇಣಿಗೆ ನೀಡಬಹುದು: ಮಂಜುಳಾ ಪ್ರಕಾಶ್, ಸ್ಟೇಟ್ ಬ್ಯಾಂಕ್ ಆಫ್ ಇ೦ಡಿಯಾ, ಸೀಗೇಹಳ್ಳಿ ಶಾಖೆ, ಖಾತೆ ಸಂಖ್ಯೆ: 54053435451 ಐಎಫ್‌ಎಸ್‌ಸಿ: ಎಸ್‌ಬಿಐಎನ್0040495.