Wednesday, 27th November 2024

ಎಸ್ಸಿ,ಎಸ್ಟಿ ಸಮುದಾಯಕ್ಕೆ ೭೫ ಯೂನಿಟ್ ಉಚಿತ ವಿದ್ಯುತ್: ಸಚಿವ ಸುನೀಲ್ ಕುಮಾರ್

ತುಮಕೂರು: ಬಿಪಿಎಲ್ ಕಾರ್ಡ್ ಇರುವ ಎಸ್ಸಿ,ಎಸ್ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಖಾತೆ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್ ಕುಮಾರ್ ಸ್ಪಷ್ಟಪಡಿಸಿದರು.

ಬೆಸ್ಕಾಂ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಾಲಯಕ್ಕೆ ಭೇಟಿ ನೀಡಇದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಮೃತ ಯೋಜನೆಯಡಿಯಲ್ಲಿ ಎಸ್ಸಿ,ಎಸ್ಟಿ ಸಮುದಾಯದ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ 75 ಯೂನಿಟ್ ವಿದ್ಯುತ್ ಮತ್ತು ರೈತರ ಟಿ.ಸಿ. ಸುಟ್ಟ 24 ಘಂಟೆಗಳಲ್ಲಿ ಟಿ.ಸಿ.ಅಳವಡಿಕೆ ಮಾಡಲಾಗುತ್ತಿದೆ ಎಂದರು.

ರಾಜ್ಯ ಸರಕಾರವು ರೈತರು ಐಪಿ ಸೆಟ್ ಅಳವಡಿಕೆ ಮಾಡಿಕೊಳ್ಳಲು ಹಲವಾರು ವರ್ಷಗಳಿಂದ ಅರ್ಜಿ ಹಾಕಿದ್ದವರಿಗೆ ಐಪಿ ಸೆಟ್ ಅಳವಡಿಕೆ ಕ್ರಮ ಆರಂಭಿಸಿದ್ದು, ತುಮಕೂರು ಜಿಲ್ಲೆಯ 65,000 ಐಪಿ ಸೆಟ್ ಅಳವಡಿಕೆಗೆ ಕ್ರಮ ಕೈಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ತುಮಕೂರು ಜಿಲ್ಲೆಯ 8500 ಮನೆಗಳಿಗೆ ವಿದ್ಯುತ್ ಕಲ್ಪಿಸಲಾಗಿದೆ ಎಂದರು.

2014ರಲ್ಲಿ ವಿದ್ಯುತ್ ದರ ಹೆಚ್ಚಳದ ಬಗ್ಗೆ ಅಂದಿನ ಸರಕಾರ ನಿರ್ಣಯ ತೆಗೆದುಕೊಂಡಿತ್ತು. ಬಿಜೆಪಿ ಸರಕಾರ ಯಾರಿಗೂ ಹೊರೆಯಾಗದಂತೆ ವಿದ್ಯುತ್ ದರವನ್ನು ನಿರ್ವಹಿಸುತ್ತಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭಾರಿ ಬದಲಾವಣೆ ಮತ್ತು ಕನ್ನಡ ಪರವಾದ ಸೇವಾ ಚಟುವಟಿಕೆ ಆರಂಭಿಸಿದ್ದು, ಎಡಪಂಥೀಯ ಧೋರಣೆ ಇಟ್ಟುಕೊಂಡು, ಗೊಂದಲದ ವಾತಾವರಣ ಮಾಡುತ್ತಿರುವವರನ್ನು ಹೊರಗಿಟ್ಟು ಕನ್ನಡ ನಾಡು, ನುಡಿ, ನೆಲ, ಭಾಷೆ ಅಭಿವೃದ್ಧಿ ಪರವಾದ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಈ ವರ್ಷ ನವಂಬರ್ ಒಂದರಿಂದ ಮಾತಾಡು-ಮಾತಾಡು ಕನ್ನಡ ಕಾರ್ಯಕ್ರಮ ಮತ್ತು ಕೋಟಿ ಜನರ ಬಳಿ ಹಾಡು-ಹಾಡು ಕನ್ನಡ ಎಂಬ ಕೋಟಿ ಕಂಠ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜನಸ್ತೋಮ ನೋಡಿ ಭಯವಿಲ್ಲ: ಕಾಂಗ್ರೆಸ್ ಹಮ್ಮಿಕೊಂಡಿರುವ ಭಾರತ್ ಜೋಡೋ ಕಾರ್ಯಕ್ರಮದಲ್ಲಿನ ಜನಸ್ತೋಮ ನೋಡಿ ಬಿಜೆಪಿ ಹೆದರುವುದಿಲ್ಲ. ುತ್ತರ ಭಾರತಕ್ಕೆ ಪಾದಯಾತ್ರೆ ಹೋಗುವಷ್ಟರಲ್ಲಿ ಕಾಂಗ್ರೆಸ್ ಇರುವುದಿಲ್ಲ ಎಂದು ವ್ಯಂಗ್ಯ ವಾಡಿದರು. ಈ ವೇಳೆ ಸಂಸದ ಬಸವರಾಜು, ಶಾಸಕ ಜ್ಯೋತಿಗಣೇಶ್, ಮಾಜಿ ಶಾಸಕ ಕಿರಣ್ ಕುಮಾರ್ ಇತರರಿದ್ದರು.

ಸಮಾರಂಭದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ ಅಧ್ಯಕ್ಷತೆ ವಹಿಸಿದರೆ, ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜೈವಿಕ ತಂತ್ರ ಜ್ಞಾನದ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ , ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ನಾಗರತ್ನಮ್ಮ, ಹೆಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿಗಳಾದ ಅ.ನಾ.ಲಿಂಗಪ್ಪ, ಸುಜಾತ ಚಂದ್ರಶೇಖರ್, ಕಾಯಾಧಲಯ ಕಾರ್ಯದರ್ಶಿ ಪ್ರವೀಣ್.ಎಸ್.ಹೊಸಹಳ್ಳಿ, ವಕ್ತಾರ ಕೆ.ಪಿ.ಮಹೇಶ, ಸಹ ವಕ್ತಾರ ಟಿ.ಜೆ.ಸನತ್, ಎಸ್.ಸಿ.ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಲೋಕೇಶ್, ನರಸಿಂಹಮೂರ್ತಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ಸಾಮಾಜಿಕ ಜಾಲತಾಣದ ಸಹ ಸಂಚಾಲಕಿ ಶಕುಂತಲಾ, ಯುವಮೋರ್ಚಾ ಜಿಲ್ಲಾಧ್ಯಕ್ಷ ಯಶಸ್ ಟಿ.ವೈ, ಉಪಾಧ್ಯಕ್ಷ ಗುರುಪ್ರಸಾದ್, ಕಾರ್ಯದರ್ಶಿ ವಿ.ರಕ್ಷಿತ್, ಒಬಿಸಿ ಪ್ರಧಾನ ಕಾರ್ಯದರ್ಶಿಗಳಾದ ಗೋಕುಲ್ ಮಂಜುನಾಥ್, ಕೆ.ವೇದಮೂರ್ತಿ, ಮಹಿಳಾ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಸೌಮ್ಯ, ಕಾರ್ಯದರ್ಶಿ ಕಾವ್ಯ, ದಾವಣಗೆರೆ ವಿಭಾಗ ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಟ ಸಹ ಸಂಚಾಲಕಿ ಎಂ.ಪಿ.ಜ್ಯೋತಿ, ಫಲಾನುಭವಿ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಜಿ.ಎಸ್.ಶ್ರೀಧರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯೆ ಕೋಮಲ, ನಗರ ಅಧ್ಯಕ್ಷ ಹನುಮಂತರಾಜು. ಹೆಚ್.ಟಿ, ಉಪಾಧ್ಯಕ್ಷ ಹೆಚ್.ಎಸ್.ವಿರೂಪಾಕ್ಷಪ್ಪ, ಪ್ರಧಾನ ಕಾರ್ಯದರ್ಶಿ ಗಣೇಶ್.ಜಿ.ಪ್ರಸಾದ್, ಕಾರ್ಯದರ್ಶಿ ಕೆ.ಎಸ್.ಕುಮಾರ್, ಗುಬ್ಬಿ ಮಂಡಲ ಅಧ್ಯಕ್ಷ ಬಿ.ಎಸ್.ಪಂಚಾಕ್ಷರಯ್ಯ, ಮಧುಗಿರಿ ಮಂಡಲ ಅಧ್ಯಕ್ಷ ಪುರವರ ಮೂರ್ತಿ, ಮಹಾನಗರಪಾಲಿಕೆ ಸದಸ್ಯ ಮಲ್ಲಿಕಾರ್ಜುನ್, ಜಿಲ್ಲಾ ವಕ್ಫ್ಬೋರ್ಡ್ ಉಪಾಧ್ಯಕ್ಷ ಶಬೀರ್ ಅಹಮ್ಮದ್ ಮುಂತಾದರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಸ್ವಾಗತ, ವಂದನಾರ್ಪಣೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಟಿ.ಭೈರಪ್ಪ ಮಾಡಿದರೆ, ನಿರೂಪಣೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ ಮಾಡಿದರು.