Saturday, 23rd November 2024

ಕನ್ನಮೇಡಿ ಗ್ರಾ.ಪಂ.ನೂತನ ಅಧ್ಯಕ್ಷರಾಗಿ ದ್ಯಾವಯ್ಯನಪಾಳ್ಯ ನರಸಿಂಹಯ್ಯ ಆಯ್ಕೆ

ಪಾವಗಡ: ತಾಲೂಕಿನ  ಕನ್ನಮೇಡಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಇತ್ತೀಚೆಗಷ್ಟೇ ತೆರವಾಗಿದ್ದ ಹಿನ್ನೆಲೆಯಲ್ಲಿ ನೂತನವಾಗಿ ಅಧ್ಯಕ್ಷರಾಗಿ ನರಸಿಂಹಯ್ಯ ಆಯ್ಕೆಗೊಂಡಿದ್ದಾರೆ.
ಶನಿವಾರ ಕನ್ನಮೇಡಿ ಗ್ರಾಮ  ಪಂಚಾಯತಿ ಕಚೇರಿ ಆವರಣದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ  ದ್ಯಾವಯ್ಯನ ಪಾಳ್ಯ ನರಸಿಂಹಯ್ಯ ಅವರನ್ನು ತಹಸೀಲ್ದಾರ್ ವರದರಾಜು ಚುನಾವಣಾ ಅಧಿಕಾರಿಯಾಗಿ ಸಮಕ್ಷಮದಲ್ಲಿ ಮತ ಹಾಕುವುದರಮೂಲಕ  ಆಯ್ಕೆ ಮಾಡಿದರು.
ಗ್ರಾ ಪಂ ಯಲ್ಲಿ ಒಟ್ಟು ಇಪ್ಪತ್ತು ಸದಸ್ಯರಿದ್ದು 13 ಜನ ಕಾಂಗ್ರೆಸ್    ಆರು ಜನ ಜೆಡಿಎಸ್ ಬೆಂಬಲಿತ ರಿದ್ದು  ಮತ ಚಲಾಯಿಸಿದ್ದು  ಒಬ್ಬ ಸದಸ್ಯರು ಮತ ಚಲಾಯಿಸಲು ಹಾಜ ರಾಗಿರಲ್ಲಿಲ್ಲ  ಚುನಾವಣೆ ಸ್ವರ್ಧೆಯಲ್ಲಿ  ಅಧ್ಯಕ್ಷರ ನರಸಿಂಹಯ್ಯನವರ ಗೆಲುವಿಗೆ ಕಾರಣರಾದರು.
ನೂತನ ಅಧ್ಯಕ್ಷ ದ್ಯಾವಯ್ಯನಪಾಳ್ಯ ನರಸಿಂಹಯ್ಯ ಮಾತನಾಡಿ, ನನ್ನ ಮೇಲೆ ಭರವಸೆ ಯಿಟ್ಟು ನನ್ನನ್ನು ಅಧ್ಯಕ್ಷೆಯಾಗಿ ಆಯ್ಕೆ ಮಾಡಿರುವ ಎಲ್ಲಾ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ನನ್ನ ಅಧ್ಯಕ್ಷ ಸ್ಥಾನದಲ್ಲಿ ನಾನು ಇರುವವರೆಗೂ ಪ್ರಾಮಾಣಿಕವಾಗಿ ಜನರ ಕುಂದು ಕೊರತೆಗಳನ್ನು ನಾನು ಜನರ ಬಳಿ ಹೋಗಿ ಬಗೆಹರಿಸುತ್ತೇನೆ ನನಗೆ ಮತ ನೀಡಿ ಗೆಲ್ಲಿಸಿರುವ ಜನರ ಸೇವೆಗೆ ನಾನು ಸದಾ ಸಿದ್ಧಳಿರುತ್ತೇನೆ ಎಂದರು.
 ಹಾಗೆಯೇ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗಳ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅಲ್ಲಿಗೆ ಅವಶ್ಯ ಕತೆ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಮ್ಮ ಕರ್ತವ್ಯ ಜನರಿಗೆ ಬೇಕಾಗಿರುವ ನೀರು ಚರಂಡಿ ವಿದ್ಯುತ್ ಸಿಸಿ ರಸ್ತೆ ಇನ್ನಿತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ನಮ್ಮ ಗ್ರಾಮ ಪಂಚಾಯಿತಿಯ ಸದಸ್ಯರ ಜೊತೆ ಕೈಜೋಡಿಸಿ ಕೆಲಸಗಳನ್ನು ಮಾಡಲು ಪ್ರಾಮಾಣಿಕನಾಗಿರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ತಾಪಂ ಸದಸ್ಯ ನಾಗೇಂದ್ರ. ಮಾಜಿ ಎಪಿಎಂಸಿ ಸದಸ್ಯ ಶಿವಮೂರ್ತಿ. ಗ್ರಾಪಂ ಉಪಾಧ್ಯಕ್ಷೆ ಜಯ ಲಕ್ಷ್ಮಿ, ಸದಸ್ಯರುಗಳಾದ ಆಶಾ, ಸರೋಜಮ್ಮ, ಗೌರಮ್ಮ, ಗೀತಮ್ಮ, ಲಿಂಗಮ್ಮ ವಸಂತಮ್ಮ, ಪಿಡಿಒ ರಾಘವೇಂದ್ರ,  ಸೇರಿ ದಂತೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.