Wednesday, 27th November 2024

ಕರ್ನಾಟಕ ರೈತ ಸಂಘದಿ0ದ ‘ನಮ್ದು’ ಸಾವಯವ ಉತ್ಪನ್ನಗಳ ಮಳಿಗೆ ಉದ್ಘಾಟನೆ

ತಿಪಟೂರು : ಸ್ವಾತಂತ್ರ‍್ಯ ಪೂರ್ವದಿ0ದಲೂ ರೈತರ ಮೇಲೆ ಶೋಷಣೆ ನಡೆಯುತ್ತಾ ಬಂದಿದ್ದು ಇಂತಹ ಶೋಷಣೆಯನ್ನು ತಡೆಗಟ್ಟಲು ಪತ್ಯೇಕ ನೇರ ಮಾರುಕಟ್ಟೆಯ ಅಗತ್ಯವಿದ್ದು ಹಲವು ಕಡೆಗಳಲ್ಲಿ ಜಾರಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಚುಕ್ಕಿ ನಂಜು0ಡಸ್ವಾಮಿ ತಿಳಿಸಿದರು.

ನಗರದ ಕೆ.ಆರ್.ಬಡಾವಣೆಯಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕಗಳ ಸಹಯೋಗದಲ್ಲಿ ‘ನಮ್ದು’ ಎಂಬ ಹೆಸರಿನಲ್ಲಿ ಸಾವಯವ ಉತ್ಪನ್ನಗಳ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಬೆಳೆಯುವ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗದೇ ಉತ್ತಮ ಮಾರುಕಟ್ಟೆ ಲಭ್ಯ ವಾಗದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತರ ಸದೃಢತೆಗೆ ಯಾವುದೇ ಸರ್ಕಾರಗಳು ಇಲ್ಲಿಯವರೆವಿಗೂ ಸಹಕಾರವನ್ನು ನೀಡುವ ಮನಸ್ಥಿತಿಯನ್ನು ಹೊಂದಿಲ್ಲ. ಅದ್ದರಿಂದ ರೈತರು ಬೆಳೆದಂತಹ ಸಾವಯವ ಬೆಳೆಯನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ನಂಜುAಡಸ್ವಾಮಿಯವರು ‘ನಮ್ದು’ ಎಂಬ ಹೆಸರಿನಲ್ಲಿ ಸಾವಯವ ಉತ್ಪನ್ನಗಳ ನೇರ ಮಾರಾಟಕ್ಕೆ ಚಿಂತನೆ ನಡೆಸಿದ್ದರು.

ಅದರ ಪರಿಣಾಮ ತಿಪಟೂರಿನಲ್ಲಿ ೨೦ ವರ್ಷದಿಂದಲೂ ಹಾಲು ಉತ್ಪಾದನೆ ಮಾರಾಟ ನಡೆಯುತ್ತಾ ಬಂದಿದ್ದು ಇದೀಗ ಸಾವಯವ ಉತ್ಪನ್ನಗಳ ಮಳಿಗೆ ಉದ್ಘಾಟನೆ ಆಗಿದ್ದು ಉತ್ತಮ ಬೆಳವಣಿಗೆ ಆಗಿದೆ. ಕೃಷಿ ಕ್ಷೇತ್ರದಲ್ಲಿ ರೈತರಿಗೆ ಅನುಕೂಲವಾಗು ವಂತಹ ಸಕಾರಾ ತ್ಮಕ ಬೆಳವಣಿಗೆ ಕಂಡು ಬಂದಿಲ್ಲ. ರೈತರ ಆತ್ಮಹತ್ಯೆ, ಮಾರುಕಟ್ಟೆ ಕುಸಿತ, ಹವಾಮಾನ ವೈಪರಿತ್ಯದಂತಹ ಪ್ರಕೃತಿ ವಿಕೋಪ ದಿಂದ ರೈತ ಕಂಗಾಲಾಗಿದ್ದಾನೆ. ಸರ್ಕಾರದಿಂದ ಆಪೇಕ್ಷೆಗಳನ್ನು ನಿರೀಕ್ಷಿಸುವ ಬದಲು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ನೇರವಾಗಿ ತಲುಪುವಂತಹ ಕಾರ್ಯವನ್ನು ಮಾಡುವುದು ಉತ್ತಮ ಚಿಂತನೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಆಹಾರ ವಸ್ತುಗಳಲ್ಲಿ ಕಲಬೆರಕೆ ಯಿಂದಾಗಿ ಜನಸಾಮಾನ್ಯರ ಆರೋಗ್ಯದ ಮೇಲೆ ವಿಪರೀತವಾದಂತಹ ಪರಿಣಾಮ ಬೀರುತ್ತಿದೆ. ಅದ್ದರಿಂದ ರೈತರು ಬೆಳೆದಂತಹ ಸಾವಯವ ಉತ್ಪನ್ನಗಳನ್ನು ನೇರವಾಗಿ ಉತ್ತಮ ಗುಣಮಟ್ಟದಲ್ಲಿ ಗ್ರಾಹಕರಿಗೆ ತಲುಪುವಂತಹ ಕಾರ್ಯವನ್ನು ನಮ್ದು ಎಂಬ ಹೆಸರಿನಲ್ಲಿ ರೈತ ಸಂಘ ಮಾಡುತ್ತಿದ್ದು ಇದರ ಸದ್ಬಳಕೆ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರೊ.ಜಯಾನಂದಪ್ಪ, ಬಿ.ಯೋಗೀಶ್ವರಸ್ವಾಮಿ, ತಿಮ್ಲಾಪುರ ದೇವರಾಜು, ಶ್ರೀಕಾಂತ್ ಕೆಳಹಟ್ಟಿ, ಶಿವ ಶಂಕರಪ್ಪ, ಷಡಕ್ಷರಿ, ಸದಣ್ಣ, ರಾಜಣ್ಣ, ಸಿದ್ದಣ್ಣ, ನಾಗರಾಜು, ಚಂದನ್ ತಿಮ್ಲಾಪುರ ಸೇರಿದಂತೆ ಹಲವರು ಇದ್ದರು.