ತುಮಕೂರು: ತುಮಕೂರು ದಸರಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಮಿತಿಯ ಜಂಟಿ ಆಶ್ರಯದಲ್ಲಿ ನಗರದ ಇತಿಹಾಸ ದಲ್ಲೇ ಅ.3 ರಿಂದ 5 ರವರೆಗೆ ಸಂಭ್ರಮದಿ೦ದ ನಡೆಯಲಿರುವ ಅಹೋರಾತ್ರಿ ಊರ ದೇವರುಗಳ ಹಾಗೂ ಸಿದ್ದಿ ವಿನಾಯಕನ ಉತ್ಸವವನ್ನೊಳಗೊಂಡ ದಸರಾ ಮಹೋತ್ಸವದ ಲಾಂಛನವನ್ನು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಬಿಡುಗಡೆಗೊಳಿಸಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷರಾದ ಎಸ್.ಪಿ.ಚಿದಾನಂದ್ ಮಾತನಾಡಿ, ಕಳೆದ 32 ವರ್ಷಗಳಿಂದ ದಸರಾ ಉತ್ಸವ ಅದ್ದೂರಿ ಯಾಗಿ ನಡೆದುಕೊಂಡು ಬಂದಿದೆ. ವಿಶೇಷ ವೆಂದರೆ ಈ ದಸರಾ ಉತ್ಸವದಲ್ಲಿ ಎಲ್ಲಾ ಸಮುದಾಯದ ಗುರುಗಳನ್ನು ಆಹ್ವಾನಿಸಿ ಅವರಿಂದ ಆಶೀರ್ವಚನ ಕೊಡಿಸುವಂತಹ ಕಾರ್ಯಕ್ರಮ ರೂಢಿಸಿಕೊಂಡು ಬರಲಾ ಗುತ್ತಿದೆ. ಇದರಂದ ಎಲ್ಲಾ ಸಮುದಾಯ ಗಳನ್ನು ಒಗ್ಗೂಡಿಸುವಂತ ಕೆಲಸ ದಸರಾ ಸಮಿತಿ ಮಾಡಿಕೊಂಡು ಬರುತ್ತಿದೆ ಎಂದರು.
ಕಳೆದ ವರ್ಷ ಮೈಸೂರಿಗೆ ಹೋದಂತಹ ಸಂದರ್ಭದಲ್ಲಿ ಅಲ್ಲಿನ ವಿದ್ಯುತ್ ದೀಪಾ ಲಂಕಾರವನ್ನು ಗಮನಿಸಿದ ವೇಳೆ ನಮ್ಮ ತುಮಕೂರಿನಲ್ಲೂ ಸಹ ಇಂತಹ ವಿದ್ಯುತ್ ದೀಪಾಲಂಕಾರವನ್ನು ಏಕೆ ಮಾಡಬಾರದು ಎಂಬ ಪರಿಕಲ್ಪನೆ ಮಾಡಿ ನಗರ ಶಾಸಕರ ಜತೆ ಚರ್ಚಿಸಿದ್ದೆವು ಇದಕ್ಕೆ ಶಾಸಕರೂ ಸಹಮತ ವ್ಯಕ್ತಪಡಿಸಿ ಅವರೂ ಸಹ ಕೈಜೋಡಿಸಿದ್ದಾರೆ ಎಂದು ಹೇಳಿದರು.
ಇಡೀ ತುಮಕೂರು ನಗರದಲ್ಲಿ ಜಗಮಗಿಸುವ ವಿದ್ಯುತ್ ದೀಪಾಲಂಕಾರವನ್ನು ಅಳವಡಿಸುವ ಕಾರ್ಯ ಮಾಡಬೇಕೆಂದು ಆರಂಭದಲ್ಲಿ 13 ಲಕ್ಷ ರೂ.ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕೆಂದುಕೊ0ಡಿದ್ದೆವು, ಆದರೆ ಅದು ಈಗ 50 ಲಕ್ಷ ರೂ.ವೆಚ್ಚಕ್ಕೆ ತಲುಪಿದೆ. ಇದಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಕೂಡ ಮುಂದಿನ ದಿನಗಳಲ್ಲಿ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಗರ ವಿಧಾನಸಭಾ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಹಾನಗರಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್, ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ದಸರಾ ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ, ಟೂಡಾ ಅಧ್ಯಕ್ಷ ಚಂದ್ರಶೇಖರ್, ಬ್ಯಾಟರಂಗೇಗೌಡ, ಗೋವಿಂದರಾವ್, ಹಿಂದೂ ಜಾಗರಣ ವೇದಿಕೆಥಿ ಜಿ.ಎಸ್.ಬಸವರಾಜು sಸೇರಿದಂತೆ ಹಲವರು ಭಾಗವಹಿಸಿದ್ದರು.