Friday, 18th October 2024

ಸ್ಯಾಂಡಲ್’ವುಡ್‌ ಅಂಗಳದಲ್ಲಿ ಕಬೀರ್‌ ಬೇಡಿ

ಹಾಲಿವುಡ್ ಹಾಗೂ ಬಾಲಿವುಡ್ ನಟ ಕಬೀರ್ ಬೇಡಿ ಈಗ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಹಂಟರ್ ಎಂಬ ಕನ್ನಡ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಾಲಿವುಡ್ ನಲ್ಲಿ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಕಬೀರ್ ಬೇಡಿ ಅಲ್ಲಿ ಜೇಮ್ಸ ಬಾಂಡ್, ಮೈಕಲ್ ಕೇನ್ ಮೊದಲಾದ ಖ್ಯಾತ ನಾಮರೊಂದಿಗೆ ಅಭಿನಯಿಸಿ ಸೈ ಎನಿಸಿ ಕೊಂಡಿದ್ದಾರೆ.

ಇದೀಗ ಕಬೀರ್ ಬೇಡಿಯರವನ್ನು ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಕನ್ನಡ ಚಿತ್ರರಂಗಕ್ಕೂ ಪರಿಚಯಿಸಿದ್ದಾರೆ. ಪ್ಯಾನ್ ಇಂಡಿಯಾ ಮಾದರಿಯ ಈ ಸಿನಿಮಾದಲ್ಲಿ ನಿರಂಜನ್ ನಾಯಕ ನಾಗಿದ್ದು ಸೌಮ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದಾರೆ. ಪ್ರಕಾಶ್ ರಾಜ್, ನಾಝರ್ ಮತ್ತು ಸುಮನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ಕಬೀರ್ ಬೇಡಿ, ತ್ರಿವಿಕ್ರಮ ಸಾಪಲ್ಯ ನಿರ್ಮಿಸುತ್ತಿರುವ ಮತ್ತೊಂದು ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಎಂಟುನೂರು ವರ್ಷಗಳ ಹಿಂದಿನ ಐತಿಹಾಸಿಕ ಕಥೆಯ ಚಿತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಅಕ್ಟೋಬರ್ ೭ ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.

ಈ ಸಿನಿಮಾದಲ್ಲಿ ಬೆಂಗಾಲಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟಿಯರಾದ ಶ್ರುತಿ ಹಾಗೂ
ಭವ್ಯಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.