ಇಂಡಿ: ಸಾವಿರಾರು ಭಕ್ತಾದಿಗಳು ಗುಡ್ಡಾಪೂರ ನಡೇದಾಡಿಕೊಂಡು ಹೋಗಿ ಧಾನಮ್ಮಾದೇವಿಯ ದರ್ಶನ ಪಡೇಯಬೇಕಾಗಿತ್ತು ಆದರೆ ಧಾನಮ್ಮಾದೇವಿಯ ಗುಡಿ ಕಟ್ಟಿ ಸ್ಥಳೀಯವಾಗಿ ಭಕ್ತರಿಗೆ ದರ್ಶನ ಮಾಡಿಸುತ್ತಿರುವ ಧಾನಮ್ಮಾದೇವಿಯ ಕಮೀಟಿಯವರಿಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಸಿಂದಗಿ ರಸ್ತೆಯ ಧಾನಮ್ಮಾದೇವಿಯ ಜಾತ್ರಾಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕಳೇದ ಮೂರು ವರ್ಷಗಳಿಂದ ನನಗೆ ಕರೆದು ಕಾರ್ಯಕ್ರಮ ಮಾಡಲಾಗುತ್ತಿದೆ. ಏನಪ್ಪಾ ಇಬ್ಬರೇ ಅದಾರೇನು ಎನ್ನುವ ಭಾವ ಬೇರೆ ಯವರಲ್ಲಿ ಬರಬಾರದು ಇಂತಹ ಕಾರ್ಯ ಮಾಡಿರುವುದು ಪುಣ್ಯದ ಕೆಲಸ ಧಾನಮ್ಮ ದೇವಿಯ ಗುಡಿ ಪಟ್ಟಣದಲ್ಲಿ ಕಟ್ಟಿರು ವುದು ಭಕ್ತರ ಪಾಲಿನ ಪುಣ್ಯದೇವತೆ. ದೇವರ ಬಗ್ಗೆ ಮನುಷ್ಯನಿಗೆ ಭಯ ಭಕ್ತಿ ಇದ್ದರೆ ಸಾರ್ವಜನಿಕ ವಲಯಗಳಲ್ಲಿ ಒಳ್ಳೇಯ ಕೆಲಸಗಳು ನಡೆಯುತ್ತವೆ ನಿಮ್ಮಂತವರಿAದ ಇಂತಹ ಒಳ್ಳೇಯ ಕೆಲಸಗಳು ನಡೇಯಲಿ ಎಂದರು.
ಶಿರಶ್ಯಾಡ ಶ್ರೀಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು. ಜೈನಾಪೂರ ರೇಣುಕಾ ಶಿವಾಚಾರ್ಯರು ಸಾನಿಧ್ಯ ವಹಿಸಿದರು.
ಮಾಜಿ ಸಚಿವ ಅಪ್ಪಾಸಾಬ ಪಟ್ಟಣಶೆಟ್ಟಿ, ಅಧ್ಯಕ್ಷತೆ ಕಾಸುಗೌಡ ಬಿರಾದಾರ, ಕಮೀಟಿ ಅಧ್ಯಕ್ಷ ಅನೀಲಪ್ರಸಾದ ಏಳಗಿ, ಶೀಲವಂತ ಉಮರಾಣಿ, ಜಗದೀಶ ಕ್ಷತ್ರಿ, ಶಂಕರಗೌಡ ಪಾಟೀಲ, ಡಾ.ಮಂಜುನಾಥ ಕೋಟ್ಟೇಣ್ಣವರ್ ಸೇರಿದಂತೆ ಧಾನಮ್ಮದೇವಿಯ ಕಮೀಟಿ ಆಡಳಿತ ಮಂಡಳಿಯ ನಿರ್ದೇಶಕರು ಸಾವಿರಾರು ಭಕ್ತರು ಇದ್ದರು.