Tuesday, 26th November 2024

ರಾಷ್ಟ್ರೀಯ ಗ್ರಿಡ್ ವೈಫಲ್ಯ: ಕತ್ತಲೆಯಲ್ಲಿ ಬಾಂಗ್ಲಾ ಜನತೆ

ಢಾಕಾ: ಬಾಂಗ್ಲಾದೇಶದಲ್ಲಿ ಸುಮಾರು 140 ಮಿಲಿಯನ್ ಜನರು ಮಂಗಳವಾರ ಮಧ್ಯಾಹ್ನ ವಿದ್ಯುತ್ ಇಲ್ಲದೆ ಬಳಲು ತ್ತಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರೀಯ ಗ್ರಿಡ್ ವೈಫಲ್ಯ ದಿಂದಾಗಿ ದೇಶದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್‌ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ.

ರಾಜ್ಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಸಚಿವ ಜುನೈದ್ ಅಹ್ಮದ್ ಪಾಲಕ್ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಪವರ್ ಗ್ರಿಡ್ನ ಎಂಜಿನಿಯರ್ಗಳು ಮತ್ತು ತಂತ್ರಜ್ಞರು ಸಮಸ್ಯೆಯನ್ನು ಪರಿಹರಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ರಾತ್ರಿ 8 ಗಂಟೆಯ ವೇಳೆಗೆ ವಿದ್ಯುತ್ ಪೂರೈಕೆಯನ್ನು ಮರುಸ್ಥಾಪಿಸುವ ಸಾಧ್ಯತೆಯಿದೆ ಎಂದು ಬಾಂಗ್ಲಾದೇಶದ ಇಂಗ್ಲಿಷ್ ಭಾಷೆಯ ದಿನಪತ್ರಿಕೆ ವರದಿ ಮಾಡಿದೆ.