ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ರಾಜ್ಯದಲ್ಲಿ ಕರೋನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದೆ. ಕಳೆದ ಎರಡು ದಿನಗಳಲ್ಲಿ 2,372 ಮಂದಿಗೆ ಸೋಂಕು ತಗುಲಿದ್ದು, 35 ಮರಣ ಪ್ರಕರಣ ದಾಖಲಾಗಿದೆ.
ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರು ಕರೋನಾದಿಂದ ಸದ್ಯಕ್ಕೆ ರಾಜ್ಯ ಮುಕ್ತಿ ಪಡೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಜೂನ್. 28 ರಂದು 1,267 ಮಂದಿಗೆ ಸೋಂಕು ತಗುಲಿ 16 ಮಂದಿ ಮೃತಪಟ್ಟಿದ್ದಾರೆ. ಜೂನ್. 29 ರಂದು 1,105 ಸೋಂಕಿತರಲ್ಲಿ 19 ಮಂದಿ ಅಸುನೀಗಿದ್ದು, ರಾಜ್ಯಕ್ಕೆ ಶಾಕ್ ನೀಡಿದೆ. ಇದೇ ಮೊದಲ ಬಾರಿಗೆ ಇಷ್ಟೊಂದು ಮಂದಿ ಮೃತಪಟ್ಟಿರುವುದು.
ಬಳ್ಳಾರಿಯಲ್ಲಿ ಒಂದೇ ದಿನ 12 ಮಂದಿಯನ್ನು ಕರೋನಾ ಬಲಿ ಪಡೆದಿದೆ. 4 ಬೆಂಗಳೂರು, ಹಾಸನ, ದಕ್ಷಿಣ ಕನ್ನಡ, ಬಾಗಲಕೋಟೆ, ಬಳ್ಳಾರಿಯಲ್ಲಿ ತಲಾ ಒಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ. ಇದುವರೆಗೂ 14,295 ಮಂದಿಗೆ ಕರೋನಾ ಸೋಂಕು ತಗುಲಿದೆ. ಅದರಲ್ಲಿ 226 ಮಂದಿ ಸಾವನ್ನಪ್ಪಿದ್ದಾರೆ. ಸೋಮವಾರ ಒಂದೇ ದಿನ 176 ಮಂದಿ ಬಿಡುಗಡೆ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಯಾವ ರೋಗಿಯೂ ಗುಣಮುಖರಾಗುತ್ತಿಲ್ಲ.
ಬೆಂಗಳೂರಿನಲ್ಲಿ ಕರೋನಾ ಶರವೇಗ ಮುಂದುವರಿದಿದ್ದು, 738 ಹೊಸ ಪ್ರಕರಣಗಳು ವರದಿ ಆಗಿದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 4052 ಆಗಿದ್ದು, 3427 ಸಕ್ರಿಯ ಪ್ರಕರಣಗಳಿವೆ. ಇಂದು ಕೊರೊನಾದಿಂದ ಗುಣಮುಖರಾಗಿ 533 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 91 ಮಂದಿಗೆ ಕರೊನಾದಿಂದ ಸಾವನ್ನಪ್ಪಿದ್ದಾರೆ.
ಬಾಕ್ಸ್ ….
ಬೆಂಗಳೂರಿಗೆ ಕಾದಿದೆ ಗಂಡಾಂತರ!
ಸರಕಾರ ಕರೋನಾ ನಿಯಂತ್ರಣಕ್ಕೆ ಎಷ್ಟೇ ಕ್ರಮಗಳನ್ನು ಕೈಗೊಂಡರು ಪ್ರತಿಫಲ ಸಿಗುತ್ತಿಲ್ಲ. ಸೋಂಕು ಕಾಣಿಸಕೊಂಡ ದಿನಗಳಲ್ಲಿ ಕಡಿಮೆ ಇದ್ದ ಕರೋನಾ ಇತ್ತೀಚಿಗೆ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದ ಅರ್ಧದಷ್ಟು ಕರೋನಾ ಸೋಂಕಿತರು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಹೆಚ್ಚು ಸಾವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾಗಿತ್ತಿರುವುದು ಪರಿಗಣಿಸಿದರೆ ಜೀವನಕ್ಕೆ ಬೆಂಗಳೂರು ಯೋಗ್ಯವಲ್ಲ ಎಂಬ ಆತಂಕದ ಮನೆಮಾಡಿದೆ ಜನತೆಯಲ್ಲಿ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಸೋಂಕಿತರು ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತಿವೆ. ಬೆಂಗಳೂರಿನ ಭವಿಷ್ಯ ಕರೋನಾದಿಂದ ಚಿಂತಾ ಜನಕವಾಗಿದೆ.
—
ಒಂದೇ ದಿನ ಕರೋನಾ ಹೆಚ್ಚು ದಾಖಲಾದ ಜಿಲ್ಲೆಗಳು
ಬೆಂಗಳೂರು 738
ಬಳ್ಳಾರಿ 76
ದಕ್ಷಿಣ ಕನ್ನಡ 32
ಬೀದರ್ 28
ಉತ್ತರ ಕನ್ನಡ 24
——-
ಹೆಚ್ಚು ಕರೋನಾ ಹಾಗೂ ಸಾವಿನ ಪ್ರಕರಣ ಜಿಲ್ಲೆಗಳು
ಜಿಲ್ಲೆ ಪ್ರಕರಣಗಳು ಸಾವು
ಬೆಂಗಳೂರು 4052 91
ಕಲಬುರಗಿ 1421 18
ಉಡುಪಿ 1197 02
ದಕ್ಷಿಣ ಕನ್ನಡ 773 13
ಬಳ್ಳಾರಿ 697 23
ಬೀದರ್ 590 19
ಉತ್ತರ ಕನ್ನಡ 213 0
…..
ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು ಗುಣಮುಖ?
ರಾಮನಗರ -51
ಕಲಬುರಗಿ -39
ಯಾದಗಿರಿ -23
ದಾವಣಗೆರೆ -11
ಧಾರವಾಡ -11
ಬೀದರ್ -10
ಚಿಕ್ಕಮಗಳೂರು -08
ಶಿವಮೊಗ್ಗ -05
ಬಾಗಲಕೋಟೆ -04
ವಿಜಯಪುರ -04
ದಕ್ಷಿಣ ಕನ್ನಡ -04
ಉಡುಪಿ -03
ಹಾಸನ -02
ಉತ್ತರ ಕನ್ನಡ -01