Tuesday, 26th November 2024

ಕರೋನಾ ನಿಯಂತ್ರಣ: ಹೆಚ್ಚುವರಿ  ಸಿಬ್ಬಂದಿ ನಿಯೋಜನೆ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ನಗರ  ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕಂಟೇನ್ಮೆೆಂಟ್ ವಲಯಗಳ ನಿರ್ವಹಣೆಗಾಗಿ  ರಚಿಸಲಾಗಿರುವ ತಂಡಕ್ಕೆೆ ಕಾರ್ಯನಿರ್ವಹಣೆಗೆ ಸಹಕರಿಸಲು ಇತರೆ ಇಲಾಖೆಗಳಿಂದ ಹೆಚ್ಚುವರಿ  ಸಿಬ್ಬಂದಿಗಳನ್ನು ಸರಕಾರ ನಿಯೋಜಿಸಿ ಎಂದು ಆದೇಶಿಸಿದೆ.
ಅನ್‌ಲಾಕ್ -1 ಅವಧಿಯಲ್ಲಿ  ಕೋವಿಡ್ 19 ಸಾಂಕ್ರಾಾಮಿಕ ಸೋಂಕು ಹರಡುವಿಕೆ ನಿಯಂತ್ರಿಿಸುವ ಉದ್ದೇಶಕ್ಕಾಾಗಿ  ಕಣ್‌ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಪ್ರಯತ್ನಗಳಿಗಾಗಿ ಬಿಬಿಎಂಪಿ ಆಯುಕ್ತ  ಅನಿಲ್‌ಕುಮಾರ್ ಹಾಗೂ ಆಡಳಿತ ತರಬೇತಿ ಸಂಸ್ಥೆೆ ಮಹಾನಿರ್ದೇಶಕಿ ವಿ.ಮಂಜುಳಾ  ನೇತೃತ್ವದಲ್ಲಿ ಸಂಪರ್ಕ ಪತ್ತೆೆಗಾಗಿ ವಿವಿಧ ಕಾರ್ಯತಂಡಗಳನ್ನು ರಚಿಸಲಾಗಿತ್ತು. ಈಗ  ಕೋವಿಡ್ -19 ಸಂಪರ್ಕ ಪತ್ತೆೆಗಾಗಿ ರಚಿಸಿದ ಕಾರ್ಯತಂಡದಲ್ಲಿ  ಸೇರ್ಪಡೆಗೊಳಿಸಿ  ಹೆಚ್ಚುವರಿ ಸಿಬ್ಬಂದಿ ಸೇರಿಸಲಾಗಿದೆ.
ಸುತ್ತಮುತ್ತಲಿನ ಪ್ರದೇಶಗಳಲ್ಲಿನ  ಕಂಟೈನ್ಮೆೆಂಟ್ ವಲಯಗಳ ನಿರ್ವಹಣೆಗಾಗಿ ಪುನರ್ ರಚಿಸಲಾದ ತಂಡಕ್ಕೆೆ ಅನುಕೂಲ ಮಾಡಲು ಸರ್ವೆ  ಸಮೀಕ್ಷೆ ಮತ್ತು ಭೂ ದಾಖಲೆಗಳ ಇಲಾಖೆ ಪದನಾಮ ಹೆಚ್ಚುವರಿ ನಿರ್ದೇಶಕ ಸಿ.ಎನ್ . ಶ್ರೀಧರ್, ಸಹಾಯಕ ಸಾಂಖ್ಯಿಿಕ ಅಧಿಕಾರಿ  ಪಿ . ಹೇಮಂತ್ ಕುಮಾರ್, ಸಾಂಖ್ಯಿಿಕ ನಿರೀಕ್ಷಕ  ರಘು,  ಸರ್ವೆ ಸಮೀಕ್ಷೆ ಮತ್ತು ಭೂ ದಾಖಲೆಗಳ ಬೆರಳಚ್ಚುಗಾರ ರಘು,ಸರ್ವೆ ಸಮೀಕ್ಷೆ  ಬೆರಳಚ್ಚುಗಾರ ಜಯಶಂಕರ್, ಭೂಮಾಪಕ ರಂಜನ್ ಅವರಿಗೆ ಹೆಚ್ಚುವರಿ ಜವಾಬ್ದಾಾರಿ ನೀಡಲಾಗಿದೆ.