Saturday, 23rd November 2024

ಬಲೂಚಿಸ್ತಾನ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶರ ಗುಂಡಿಕ್ಕಿ ಹತ್ಯೆ

ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಮಸೀದಿಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಖರಾನ್ ಪ್ರದೇಶದ ಮಸೀದಿ ಹೊರಗೆ ʻಮುಹಮ್ಮದ್ ನೂರ್ ಮೆಸ್ಕಂಜೈʼ ಮೇಲೆ ದಾಳಿಕೋರರು ಗುಂಡು ಹಾರಿಸಿದ್ದಾರೆ, ಗಂಭೀರವಾಗಿ ಗಾಯಗೊಂಡ ಅವ ರನ್ನು ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲಾಗಲೇ ಮಾಜಿ ಮುಖ್ಯ ನ್ಯಾಯಾ ಧೀಶರು ಮೃತ ಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾಗಿ ಪೊಲೀಸ್ ವರಿಷ್ಠಾಧಿ ಕಾರಿ ಆಸಿಫ್ ಹಲೀಮ್ ತಿಳಿಸಿದ್ದಾರೆ.

ಬಲೂಚಿಸ್ತಾನ್ ಮುಖ್ಯಮಂತ್ರಿ ಮೀರ್ ಅಬ್ದುಲ್ ಖುಡೂಸ್ ಬಿಜೆಂಜೊ ನ್ಯಾಯಾಧೀಶರ ಸಾವಿಗೆ ಸಂತಾಪ ಸೂಚಿಸಿದರು.

ಮಸ್ಕಂಜೈ ಅವರು ಷರಿಯಾ ವಿರುದ್ಧ ರಿಬಾ ಆಧಾರಿತ ಬ್ಯಾಂಕಿಂಗ್ ವ್ಯವಸ್ಥೆ ಘೋಷಿಸುವ ಮಹತ್ವದ ತೀರ್ಪನ್ನು ನೀಡಿದ್ದರು.

ಪಾಕಿಸ್ತಾನದ ಕಾನೂನು ರಾಜ್ಯ ಸಚಿವ ಶಹದತ್ ಹುಸೇನ್ ಅವರು ಭಯೋತ್ಪಾದಕ ಚಟುವಟಿಕೆಗಳು ತೀವ್ರ ಹೆಚ್ಚಳಕ್ಕೆ ಇದು ಸಾಕ್ಷಿಯಾಗಿದೆ ಎಂದರು.

ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಭಯೋತ್ಪಾದಕ ದಾಳಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಫಾರ್ ಕಾನ್‌ಫ್ಲಿಕ್ಟ್ ಅಂಡ್ ಸೆಕ್ಯುರಿಟಿ ಸ್ಟಡೀಸ್ ಉಲ್ಲೇಖಿಸಿದೆ. ಸಪ್ಟೆಂಬರ್‌ನಲ್ಲಿ 42 ಉಗ್ರಗಾಮಿ ದಾಳಿಗಳು ನಡೆದಿದ್ದು, ಆಗಸ್ಟ್‌ಗೆ ಹೋಲಿಸಿದರೆ ಶೇ.35ರಷ್ಟು ಹೆಚ್ಚಳವಾಗಿದೆ.