ಬೆಂಗಳೂರು
ನಗರದಲ್ಲಿ ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆೆ ಹೆಚ್ಚಾಗುತ್ತಲೇ ಇವೆ. ಕಳೆದ 5 ದಿನಗಳಿಂದ ನಗರದಲ್ಲಿ ಅಧಿಕ ಕರೋನಾ ಸೋಂಕು ಪ್ರಕರಣಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ತಿಂಗಳಾಂತ್ಯಕ್ಕೆ ಕರೋನಾ ಪೀಡಿತರ ಸಂಖ್ಯೆೆ ಹೆಚ್ಚಾಗಲಿದ್ದು, ಜುಲೈ ತಿಂಗಳು ನಗರದ ನಾಗರಿಕರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆಗಳಿವೆ ಎಂದು ಇಲಾಖೆ ತಿಳಿಸಿದೆ.
ದಿನನಿತ್ಯ ಸಾವಿರಾರು ಕರೋನಾ ಸೋಂಕಿತರು ಪತ್ತೆೆಯಾಗುತ್ತಿರುವುದರಿಂದ ಜನಸಾಮಾನ್ಯರು ಎಚ್ಚತ್ತುಕೊಳ್ಳದಿದ್ದರೆ ಬೆಂಗಳೂರು ನಗರ ಕರೋನಾ ಸೋಂಕು ಅಧಿಕವಾಗುವ ಸಾಧ್ಯತೆಗಳಿವೆ. 198 ವಾರ್ಡ್ಗಳ ಪೈಕಿ ಈಗಾಗಲೇ 47 ವಾರ್ಡ್ಗಳಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
ಸುಧಾಮನಗರ, ಧರ್ಮರಾಯಸ್ವಾಾಮಿ ದೇವಸ್ಥಾನ, ಸುಂಕೇನಹಳ್ಳಿ, ವಿವಿಪುರ, ಸಿದ್ದಾಪುರ, ಹೊಂಬೇಗೌಡ ನಗರ, ಕೋರಮಂಗಳ, ಸದ್ದುಗುಂಟೆಪಾಳ್ಯ, ಜಯನಗರ, ಹನುಮಂತನಗರ, ಬಸವನಗುಡಿ, ವಿದ್ಯಾಪೀಠ, ಯಡಿಯೂರು, ಪಟ್ಟಾಭಿರಾಮನಗರ, ಮಡಿವಾಳ, ಬಿಟಿಎಂ ಲೇಔಟ್, ಶಾಕಾಂಬರಿನಗರಗಳಲ್ಲಿ ಅತಿ ಹೆಚ್ಚು ಸೋಂಕಿತರಿದ್ದಾರೆ. ಪಶ್ಚಿಮ ವಲಯದಲ್ಲಿ ಕಾಡುಮಲ್ಲೇಶ್ವರ, ಗಾಂಧಿನಗರ, ಸುಭಾಷ್ನಗರ, ರಾಜಾನಗರ, ಚಿಕ್ಕಪೇಟೆ, ಕಾಟನ್ಪೇಟೆ, ಪಾದರಾಯನಪುರ, ಕೆಆರ್ ಮಾರುಕಟ್ಟೆೆ, ಚಾಮರಾಜಪೇಟೆ, ಪೂರ್ವವಲಯದ ಬಾಣಸವಾಡಿ, ಪುಲಕೇಶಿನಗರ, ಶಿವಾಜಿನಗರ, ವಸಂತನಗರ, ಸಂಪಂಗಿರಾಮನಗರ, ಶಾಂತಲಾನಗರ ಮತ್ತು ಶಾಂತಿನಗರದಲ್ಲಿ ಸೋಂಕಿತರಿದ್ದಾರೆ.
ಯಲಹಂಕ, ಹೊಂಗಸಂದ್ರ, ಬೊಮ್ಮನಹಳ್ಳಿಯ ಉತ್ತರಹಳ್ಳಿ, ಸಿಂಗಸಂದ್ರ, ವಸಂತಪುರ, ಎಚ್ಎಸ್ಆರ್ ಲೇಔಟ್, ಆರ್ಆರ್ ನಗರ, ಹೆಮ್ಮಿಗೆಪುರ, ಜಾನಭಾರತಿ, ಮಹದೇವಪುರದ ಹೊರಮಾವು ಮತ್ತು ಯಳಂದೂರು, ಯಲಹಂಕದ ಥಣಿಸಂದ್ರ ಮತ್ತು ವಿದ್ಯಾರಣ್ಯಪುರದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ವಾರ್ಡ್ಗಳಲ್ಲಿ ವಾಸಿಸುವ ಜನರು ಈಗಾಗಲೇ ಎಚ್ಚರಿಕೆ ವಹಿಸಿ ಸೋಂಕು ಹರಡುವುದನ್ನು ತಡೆಗಟ್ಟಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಸೋಂಕಿತರಿಗೆ ಸರಿಯಾದ ಸೌಲಭ್ಯ ಸಿಗುತ್ತಿಲ್ಲ ಎಂಬ ದೂರು ಕೇಳಿಬಂದಿರುವುದರಿಂದ ಮತ್ತು ಖಾಸಗಿ ಆಸ್ಪತ್ರೆೆಗಳು ಚಿಕಿತ್ಸೆೆ ನೀಡಲು ನಿರಾಕರಿಸುತ್ತಿವೆ ಎಂಬ ದೂರುಗಳ ಹಿನ್ನೆೆಲೆಯಲ್ಲಿ ಹೆಲ್ಪ್ಲೈನ್ ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆೆಗಳು ಚಿಕಿತ್ಸೆೆ ನೀಡಲು ನಿರಾಕರಿಸಿದಲ್ಲಿ 1912 ಸಂಖ್ಯೆೆಗೆ ಹಾಗೂ ತುರ್ತು ವೈದ್ಯಕೀಯ ನೆರವಿಗೆ 108ಕ್ಕೆೆ ಕರೆ ಮಾಡಿ
- ಅನಿಲ್ಕುಮಾರ್, ಬಿಬಿಎಂಪಿಯ ಆಯುಕ್ತರು