ಅಬಕಾರಿ ರಕ್ಷಕರಿಗೆ ಬಡ್ತಿ ಮರೀಚಿಕೆ
ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಅಬಕಾರಿ ಇಲಾಖೆಯಲ್ಲಿ ಅಬಕಾರಿ ರಕ್ಷಕರಿಗೆ ಬಡ್ತಿ ಎಂಬುದು ಮರೀಚಿಕೆಯಾಗಿದೆ. ಕೇವಲ ಮೇಲಧಿಕಾರಿಗಳ ವರ್ಗದವರಿಗೆ ಮಾತ್ರ ಸೀಮಿತವಾಗಿದೆ. ಸರಕಾರಕ್ಕೆ ಆದಾಯ ತಂದುಕೊಡುವಲ್ಲಿ ಅಬಕಾರಿ ರಕ್ಷಕರ ಪಾತ್ರ ಪ್ರಮುಖವಾಗಿದೆ. ಆದರೆ ಇಲ್ಲಿಯವರೆಗೆ ಅಬಕಾರಿ ರಕ್ಷಕರಿಗೆ ಭಡ್ತಿ ಮತ್ತಿತರ ಸೌಲಭ್ಯಗಳು ಸಿಗದೇ ಬಹಳ ಅನ್ಯಾಯ ಆಗಿದೆ.
ಅಬಕಾರಿ ರಕ್ಷಕರ ಸಮಸ್ಯೆಗಳಿಗೆ ಕುರಿತು ಮೇಲಾಧಿಕಾರಿಗಳಿಗೆ ಮತ್ತು ಅಬಕಾರಿ ಆಯುಕ್ತರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಇಲಾಖೆಯಲ್ಲಿ ಅಬಕಾರಿ ರಕ್ಷಕರು ಆಧಾರ ಸ್ತಂಭ ಸಿಬ್ಬಂದಿಗಳಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ವೃಂದ ಮತ್ತು ನೇಮಕಾತಿಯ ಅವೈಜ್ಞಾನಿಕ ತಿದ್ದುಪಡಿಯಿಂದ ಪದೋನ್ನತಿ ಪಡೆಯದೆ ರಕ್ಷಕರಾಗಿಯೇ ನಿವೃತ್ತಿಯಾಗುತ್ತಿದ್ದೇವೆ ಎಂದು ರಾಜ್ಯ ಅಬಕಾರಿ ರಕ್ಷಕರ ಹಿತರಕ್ಷಣಾ ಸಂಘದ ಅಧ್ಯಕ್ಷರಾದ ಇಂಡಿ ಮತ್ತು ಕಾರ್ಯದರ್ಶಿ ಆದ ಶಿವಾನಂದ ಬೇಸರ ವ್ಯಕ್ತಪಡಿಸಿದರು.
ಅಬಕಾರಿ ರಕ್ಷಕರನ್ನು ಕೆಪಿಎಸ್ ಸಿ ಮೂಲಕ ರಾಜ್ಯ ಮಟ್ಟದಲ್ಲಿ ನೇರವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ರಕ್ಷಕರು ಪದವಿ, ಸ್ನಾತಕೋತ್ತರ ಹಾಗೂ ಇಂಜಿನಿಯರಿಂಗ್ ಪಡೆದಿರುತ್ತಾರೆ. ಮುಂದಿನ ಪದೋನ್ನತಿಗೆ ಸರ್ಕಾರ ನಿಗದಿಪಡಿಸಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಅಬಕಾರಿ ರಕ್ಷಕರ ಜೆಷ್ಠತಾ ಪಟ್ಟಿಯನ್ನು ರಾಜ್ಯಮಟ್ಟದಲ್ಲಿ ಮಾಡುತ್ತಿದ್ದು ಒಂದು ಜಿಲ್ಲೆ ಇಂದ ಇನ್ನೂಂದು ಜಿಲ್ಲೆಗೆ ವರ್ಗಾವಣೆ ಆದರೆ ಆ ಜಿಲ್ಲೆಯ ಜೆಷ್ಠತೆಯನ್ನು ಕಳೆದುಕೊಳ್ಳುತೀರಿ ಎಂದು ಮಾನ್ಯ ಅಬಕಾರಿ ಆಯುಕ್ತರು ಆದೇಶ ಮಾಡಿದ್ದು ಇದರಿಂದ ಅಬಕಾರಿ ರಕ್ಷಕರಿಗೆ ಗೊಂದಲವಾಗಿದೆ.
ಅಬಕಾರಿ ರಕ್ಷಕರಿಗೆ ಭಡ್ತಿ ನೀಡಲು ರಾಜ್ಯ ಜೆಷ್ಠತಾ ಪಟ್ಟಿ ಮಾಡಬೇಕು ಎಂದು ಸುಮಾರು 20 ವರ್ಷಗಳಿಂದ ಭಡ್ತಿಯನ್ನು ನೀಡಿರುವುದಿಲ್ಲ. ಆದ್ದರಿಂದ ನಮಗೆ ಭಡ್ತಿ ನೀಡಲು ಸಚಿವರು ಗಮನ ಹರಿಸಿ ನ್ಯಾಯ ದೊರಕಿಸ ಕೊಡಬೇಕು ಎಂದು ನೊಂದ ಅಬಕಾರಿ ರಕ್ಷಕರು ಅಳಲು ತೋಡಿಕೊಂಡಿದ್ದಾರೆ.
|
|
|