ಮೂರು ವರ್ಷದ ಮಗುವಿನ ಹೆಸರು ಸದ್ದಾಂ. ಅಮ್ಮ ಕ್ಯಾಂಡಿಗಳನ್ನು ಕದ್ದು, ಕಪಾಳಕ್ಕೆ ಬಾರಿಸಿದ್ದಕ್ಕೆ ಕುಪಿತಗೊಂಡ ಮಗು ಅಮ್ಮನ ವಿರುದ್ಧವೇ ದೂರು ದಾಖಲಿಸಿದೆ. ಠಾಣೆಗೆ ಕರೆದೊಯ್ಯುವಂತೆ ಅಪ್ಪನ ಬಳಿ ಕೇಳಿ, ಠಾಣೆಗೆ ಕರೆದದೊಯ್ಯುತ್ತಿದ್ದಂತೆ ಸಬ್ ಇನ್ಸ್ಪೆಕ್ಟರ್ ಬಳಿ ಮಗು ತಾಯಿಯ ವಿರುದ್ಧ ದೂರು ನೀಡಿದೆ.
ಬುರ್ಹಾನ್ಪುರ್ನ ಡೆಡ್ತಲೈದಲ್ಲಿರುವ ಪೊಲೀಸ್ ಠಾಣೆಗೆ ತೆರಳಿ, ಸಬ್ ಇನ್ಸ್ಪೆಕ್ಟರ್ ಪ್ರಿಯಾಂಕಾ ನಾಯಕ್ ಅವರಿಗೆ ತನ್ನ ನೋವಿನ ಕತೆ ಹೇಳಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಅಮ್ಮ ನನ್ನ ಕ್ಯಾಂಡಿಗಳನ್ನು ಕದ್ದಿದ್ದಾರೆ. ಆಕೆಯನ್ನು ಜೈಲಿಗೆ ಹಾಕಿ ಎಂದು ಮಗು, ಸಬ್ ಇನ್ಸ್ಪೆಕ್ಟರ್ಗೆ ಹೇಳಿದೆ. ಮಗುವಿನ ಮುಗ್ಧತೆಯನ್ನು ನೋಡಿ, ನಗೆಗಡಲಲ್ಲಿ ತೇಲಿದ ಎಸ್‌ಐ ಪ್ರಿಯಾಂಕಾ, ತಮ್ಮ ನಗುವನ್ನು ನಿಯಂತ್ರಿಸಲು ಪರದಾಡುತ್ತಾ, ಮಗುವಿಗೆ ಕೆಲವು ಪ್ರಶ್ನೆಗಳನ್ನು ಕೇಳಿ, ದೂರು ಬರೆದು ಕೊಳ್ಳುತ್ತಿರುವಂತೆ ನಟಿಸುತ್ತಾರೆ.
ಬಳಿಕ ಮಗು ಪೇಪರ್ಗೆ ಸಹಿ ಮಾಡುತ್ತದೆ. ಆದಷ್ಟು ಬೇಗ ನಿಮ್ಮ ಅಮ್ಮನನ್ನು ಬಂಧಿಸುವುದಾಗಿ ಹೇಳಿ ಭರವಸೆ ನೀಡಿ ಕಳುಹಿಸು ವುದು ವಿಡಿಯೋದಲ್ಲಿದೆ.
ಮಗುವಿನ ತಂದೆ ಈ ಬಗ್ಗೆ ಮಾತನಾಡಿದ್ದು, ಸದ್ದಾಂ ಕ್ಯಾಂಡಿಗಳನ್ನು ಕೇಳಿದಾಗ ತಾಯಿ ಮೃದುವಾಗಿ ಕೆನ್ನೆಗೆ ಬಾರಿಸಿದಳು. ಇದರ ಬೆನ್ನಲ್ಲೇ ತನ್ನ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ಸದ್ದಾಂ ಹೇಳಿದನು ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ವಿಡಿಯೋ ವೈರಲ್ ಆದ ನಂತರ, ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಮಗುವಿಗೆ ವಿಡಿಯೋ ಕರೆ ಮೂಲಕ ಮಾತನಾ ಡಿದ್ದು, ದೀಪಾವಳಿಯಂದು ಮಗುವಿಗೆ ಚಾಕೊಲೇಟ್ ಮತ್ತು ಸೈಕಲ್ ಕಳುಹಿಸುವುದಾಗಿ ಭರವಸೆ ನೀಡಿದ್ದಾರೆ.