Tuesday, 26th November 2024

ಆಯಾತಪ್ಪಿ ರಾಜಕಾಲುವೆಗೆ ಬಿದ್ದ ಮಗು,

ಆಟವಾಡುತ್ತಿದ್ದ ಮಗು ಆಯಾತಪ್ಪಿ ರಾಜಕಾಲುವೆಗೆ ಬಿದ್ದು ಕೊಚ್ಚಿಕೊಂಡು ಹೋಗಿರುವಂತಹ ಘಟನೆ ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದಿದೆ.

ಮೊನಾಲಿಕ ( 6) ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ. ಮಾರತ್ತಹಳ್ಳಿಯ ಮಂತ್ರಿ ಅಪಾರ್ಟ್ಮೆಂಟ್ ಹಿಂಭಾಗದ ಗುಡಿಸಲಿನಲ್ಲಿ ವಾಸವಿದ್ದ ಅಸ್ಸಾಂ ಮೂಲದ ನವರಾದ ಹಾಗೂ ನಿತ್ಯಾನಂದ ದಂಪತಿಗಳ 6 ವರ್ಷದ ಮೊನಾಲಿಕ ಎಂಬ ಪುಟ್ಟ ಮಗು ಶುಕ್ರವಾರ ಮಧ್ಯಾಹ್ನ  2 ಗಂಟೆಯ ಸುಮಾರಿಗೆ ಸ್ನೇಹಿತರ ಜೊತೆ ಆಟವಾಡುತ್ತಾ ರಾಜಕಾಲುವೆ ಬಳಿ ತೆರಳಿದ್ದಳು. ಈ  ಸಂಧರ್ಭದಲ್ಲಿ ಮಗು ಆಯಾತಪ್ಪಿ ರಾಜಕಾಲುವೆಗೆ ಬಿದ್ದಿದ್ದು ಮಗು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕೂಡಲೇ ವಿಷಯ ತಿಳಿದ ಮಗುವಿನ ಪೋಷಕರು ಹುಡುಕಾಟ ನಡೆಸಿದ್ರು ಪ್ರಯೋಜನವಾಗಿಲ್ಲ.

ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ವತಿಯಿಂದ ರಾಜಕಾಲುವೆ ಎರಡು ಬದಿಗಳಲ್ಲಿ ಪೆನ್ಸಿಂಗ್ ಅಳವಡಿಸಿದ್ದರು ಇಲ್ಲಿನ ಸ್ಲಂ ನಿವಾಸಿಗಳು ಅದನ್ನು ಕಿತ್ತುಹಾಕಿದ್ದರಿಂದ ಮಕ್ಕಳು ಕಾಲುವೆ ಬಳಿ ಆಟವಾಡಲು ತೆರಳುತ್ತಿದ್ದರು. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ರಾಜಕಾಲುವೆಯಲ್ಲಿ ಹೆಚ್ಚು ನೀರು ಹರಿಯಿತ್ತಿದ್ದು ಕಾಲುವೆ ಬಳಿ ಬಂದು ಕಾಲುಜಾರಿ ಬಿದ್ದಿದ್ದರಿಂದ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದು ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮಾರತಹಳ್ಳಿ ಪೋಲೀಸರು ಕಾರ್ಯಚರಣೆ ನಡೆಸಿ  ಸಂಜೆ ಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.