Saturday, 23rd November 2024

ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Odisha

ಒಡಿಶಾ: ಭಾರತವು ‘ಅಗ್ನಿ-ಪ್ರೈಮ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ.

ರಕ್ಷಣಾ ಅಧಿಕಾರಿಗಳು, ಮೂರನೇ ಬಾರಿಗೆ ‘ಅಗ್ನಿ ಪ್ರೈಮ್ ನ್ಯೂ ಜನರೇಷನ್ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಬೆಳಿಗ್ಗೆ ಒಡಿಶಾದ ಕರಾವಳಿಯಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದೆ’ ಎಂದು ತಿಳಿಸಿ ದ್ದಾರೆ.

ಪರೀಕ್ಷಾ ಹಾರಾಟದ ಸಮಯದಲ್ಲಿ, ಕ್ಷಿಪಣಿಯು ಗರಿಷ್ಠ ವ್ಯಾಪ್ತಿಯನ್ನು ಪ್ರಯಾಣಿಸಿತು. ಎಲ್ಲಾ ಪರೀಕ್ಷಾ ಉದ್ದೇಶಗಳನ್ನು ಯಶಸ್ವಿಯಾಗಿ ಪೂರೈಸಲಾಯಿತು. ಅಗ್ನಿ ಪ್ರೈಮ್ ಕ್ಷಿಪಣಿಯ ಸತತ ಮೂರನೇ ಯಶಸ್ವಿ ಹಾರಾಟ ಪರೀಕ್ಷೆಯೊಂದಿಗೆ, ವ್ಯವಸ್ಥೆಯ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನ ಸ್ಥಾಪಿಸಲಾಗಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿ ದ್ದಾರೆ.

ವಿವಿಧ ಸ್ಥಳಗಳಲ್ಲಿ ನಿಯೋಜಿಸಲಾದ ರಾಡಾರ್, ಟೆಲಿಮೆಟ್ರಿ ಮತ್ತು ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಗಳಂತಹ ಹಲವಾರು ಶ್ರೇಣಿಯ ಉಪಕರಣಗಳಿಂದ ಪಡೆದ ದತ್ತಾಂಶ ಬಳಸಿಕೊಂಡು ವ್ಯವಸ್ಥೆಯ ಕಾರ್ಯಕ್ಷಮತೆಯನ್ನ ಪ್ರಮಾಣೀಕರಿಸ ಲಾಗಿದೆ ಎಂದರು.