ವರದಿ ಪ್ರಕಾರ ರಾಷ್ಟ್ರ ರಾಜಧಾನಿ ದೆಹಲಿ 2021 ರಲ್ಲಿ ಭಾರತದಲ್ಲಿ ಅತ್ಯಂತ ಕಲುಷಿತ ನಗರವಾಗಿದೆ. ನಂತರ ಆ ಪಟ್ಟಿಯಲ್ಲಿ, ಕೋಲ್ಕತ್ತಾ, ಮುಂಬೈ ಮತ್ತು ಹೈದರಾಬಾದ್ ಸೇರಿಕೊಂಡಿವೆ. ದೆಹಲಿ, ಕೋಲ್ಕತ್ತಾ ಮತ್ತು ಮುಂಬೈ ಈಗಾಗಲೇ ಈ ಪಟ್ಟಿಯಲ್ಲಿದ್ದವು. ಆದರೆ, ಹೊಸದಾಗಿ ಹೈದರಾಬಾದ್ ಸೇರಿರುವುದು ಒಂದು ಆತಂಕದ ವಿಷಯವಾಗಿದೆ.
ಪ್ರಮುಖ ಮಾಲಿನ್ಯಕಾರಕವೆಂದರೆ ಆಟೋಮೊಬೈಲ್‌ಗಳು ಮತ್ತು ಕೈಗಾರಿಕೆಗಳಿಂದ ಬಿಡುಗಡೆಯಾಗುವ ಪಾರ್ಟಿಕ್ಯುಲೇಟ್ ಮ್ಯಾಟರ್ (PM) 2.5 ಅಥವಾ ಸಣ್ಣ ಕಣಗಳು ಇದರ ಪ್ರಾಥಮಿಕ ಮೂಲಗಳು ಎನ್ನಲಾಗಿದೆ.
ಪಳೆಯುಳಿಕೆ ಇಂಧನ ದಹನ, ನಿರ್ಮಾಣ, ಭೂಕುಸಿತ ಮತ್ತು ಘನ ತ್ಯಾಜ್ಯದ ಭೂಮಿಯಲ್ಲಿ ಹೂಳುವುದು ಕೂಡ ಹೈದರಾಬಾದ್ ನಗರದಲ್ಲಿ ವಾಯು ಗುಣಮಟ್ಟ ಹದಗೆಡಲು ಕಾರಣ. ಇದರ ಜೊತೆಗೆ ವಾಹನ ಮಾಲಿನ್ಯ ಕೂಡ ವಾಯು ಮಾಲಿನ್ಯಕ್ಕೆ ದೊಡ್ಡ ಕಾರಣವೆಂದು ಹೇಳಲಾಗಿದೆ.