ತುಮಕೂರು: ಜಿಲ್ಲೆಯಲ್ಲಿ ಗಾಂಜಾ ಅಡ್ಡೆಗಳು ದಿನೆ ದಿನೆ ಬೆಳೆಯುತ್ತಿದ್ದರೂ ನಿಯಂತ್ರಿಸುವಲ್ಲಿ ಪೊಲೀಸರು ಅಸಡ್ಡೆ ವಹಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ಪಡ್ಡೆ ಹುಡುಗರು ಗಾಂಜಾ ವ್ಯಸನಿ ಗಳಾಗಿ ಜೀವನ ಹಾಳು ಮಾಡಿಕೊಳ್ಳುತ್ತಿರು ವುದು ಪೋಷಕರಿಗೆ ಆತಂಕ ಸೃಷ್ಠಿಸಿದೆ. ಅಕ್ರಮ ಗಾಂಜಾ ಮಾರಾಟದ ಬಗ್ಗೆ ಪೊಲೀಸರಿಗೆ ಸಾಕಷ್ಟು ಮನವಿ ನೀಡಿದ್ದರೂ ಗಮನಹರಿಸುತ್ತಿಲ್ಲ. ಮಾರಾಟಗಾರರಿಂದ ಕಮೀಷನ್ ಪಡೆದು ಮೌನ ವಹಿಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಕೋರಾ ಠಾಣಾ ವ್ಯಾಪ್ತಿಯ ಊರುಕೆರೆ , ಅಣ್ಣೇನಹಳ್ಳಿ ಮಧ್ಯೆ ಗಾಂಜಾ ಅಡ್ಡೆ ಸೃಷ್ಟಿಯಾಗಿದ್ದು ೨೦ ವರ್ಷದೊಳಗಿನ ಯುವಕರು ಗಾಂಜಾ ವ್ಯಸನಿಗಳಾಗಿ ಮಾನಸಿಕ ಅಸ್ವಸ್ಥರಾಗುತ್ತಿದ್ದಾರೆ. ಕೆಲವು ಯುವಕರನ್ನು ಸಾಂತ್ವನ ಕೇಂದ್ರಗಳಿಗೆ ಸೇರಿಸಿ ವ್ಯಸನಮುಕ್ತರಾಗಿಸಲು ಪೋಷಕರು ಪರದಾಡುತ್ತಿದ್ದಾರೆ. ಗಾಂಜಾ ಅಡ್ಡೆ ನಡೆಯುವ ಮಾಹಿತಿಯನ್ನು ಕೋರಾ ಠಾಣೆ ಪೊಲೀಸರಿಗೆ ತಿಳಿಸಿದ್ದರೂ ನಿರ್ಲಕ್ಷ್ಯ ವಹಿಸಿರುವುದು ದುರಂತ ಎಂದು ಪೋಷಕರು ಕಿಡಿಕಾರಿದ್ದಾರೆ.