Thursday, 28th November 2024

ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರ ಆಕ್ರೋಶ

ಗುಬ್ಬಿ : ತಾಲೂಕಿನ ನಿಟ್ಟೂರ್ ಹೋಬಳಿ ಮಾರ ಶೆಟ್ಟಿಹಳ್ಳಿ ಗೊಲ್ಲರಟ್ಟಿ ಗ್ರಾಮದಲ್ಲಿ   ಎಚ್ಎಎಲ್ ಕಾಂಪೌಂಡ್ ಪಕ್ಕದ ರಸ್ತೆಯು ಸಂಪೂರ್ಣ ಆಳಾಗಿದ್ದು ಅಧಿಕಾರಿಗಳು ರಸ್ತೆ ಸರಿಪಡಿಸದಿದ್ದರೆ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ನಿವೃತ್ತ  ಅಧಿಕಾರಿ ರಾಜಶೇಖರಯ್ಯ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳ ನಿರ್ಲಕ್ಷವೇ ಸಮಸ್ಯೆಗೆ ಕಾರಣ ಕೆಸರುಗದ್ದೆಯoತಾಗಿ ರುವ ರಸ್ತೆಯಿಂದ ನಮ್ಮ ಪರದಾಟ ಹೇಳತೀರದು ಯಾವೊಬ್ಬ ಅಧಿಕಾರಿಯೂ ಸಹ  ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ  ಹಲವು ತಿಂಗಳಿಗಳಿಂದ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು ಯಾರು ಸಹ ಇದು ವರೆಗೂ ಸಂಪರ್ಕ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡಿರುವುದಿಲ್ಲ ಇದರಿಂದ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಯಾಗುತ್ತಿದ್ದು ಕೂಡಲೇ ಸಂಪರ್ಕ ಕಲ್ಪಿಸಿ ಕೊಡಬೇಕೆಂದು ಹಾಗೂ ಶಾಲೆಗೆ ಹೋಗಲು  ರಸ್ತೆಯಿಂದ ತೊಂದರೆಯಾಗುತ್ತಿದ್ದು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡ ಬೇಕೆಂದು ಕಾಡುಪ್ರಾಣಿಗಳ ಹಾವಳಿಯಿಂದಾಗಿ ಭಯದಿಂದ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಹಲವರು ಆಸ್ಪತ್ರೆಗೆ ಹೋಗಲು ತೊಂದರೆ ಅನುಭವಿಸುತ್ತಿದಾರೆ. ತುರ್ತು ಸಮಯದಲ್ಲಿ ಆಂಬುಲೆನ್ಸ್ ಸಹ ಬರಲಾಗುವುದಿಲ್ಲ ದ್ವಿಚಕ್ರವಾಹನದಲ್ಲಿ ಸಂಚರಿಸುವ ಹಲವರು ರಸ್ತೆಯಲ್ಲಿ ಬಿದ್ದು ಕೈ ಕಾಲುಗಳಿಗೆ ಏಟಾಗಿ ನೋವನ್ನು ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಸೈನಿಕರಾದ ಮಹಾಲಿಂಗಯ್ಯ  ಇಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲಿ, ಪಂಚಾಯಿತಿ ಸದಸ್ಯರಿಂದ ಹಿಡಿದು ಶಾಸಕರಾಗಲಿ, ಸಂಸದರಾಗಲಿ, ಈ ಗ್ರಾಮದ ಅಭಿವೃದ್ಧಿಯ ಕಡೆಗೆ ಗಮನಹರಿಸದೆ ಬೇಜವಾಬ್ದಾರಿಯನ್ನು ತೋರುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜಶೇಖರ್, ಮೋಹನ್ ಕುಮಾರ್, ಅಪ್ಪಣ್ಣ, ನವೀನ್ ಕುಮಾರ್, ಶಿವಲಿಂಗಯ್ಯ, ಮಹೇಶ್, ಯಶೋಧಮ್ಮ, ಶಾಂತಮ್ಮ,ಜಯಮ್ಮ, ರೇಣುಕಮ್ಮ, ಗೀತಾ, ಮಹಾಲಿಂಗಯ್ಯ, ವಿದ್ಯಾರ್ಥಿಗಳಾದ ರಕ್ಷಿತಾ, ಪ್ರಶಾಂತ್, ಮುಖಂಡ ಉಮೇಶ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.