ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಮೀನು ಉತ್ಪಾಾದನೆಯಲ್ಲಿ ರಾಜ್ಯ 4ನೇ ಸ್ಥಾಾನದಲ್ಲಿದ್ದು, ಮತ್ಸೋೋದ್ಯಮದಲ್ಲಿ ರಾಜ್ಯ ಮೊದಲ ಸ್ಥಾಾನಕ್ಕೇರಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದಾಾರೆ.
ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಾಟಿಸಿದ ಯಡಿಯೂರಪ್ಪ ಅವರು, ಮೀನುಗಾರಿಕೆ ಇಲಾಖೆ ಮಾಹಿತಿಯನ್ನೊೊಳಗೊಂಡ ಅಂಕಿ ಅಂಶಗಳ ಸಂಚಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ಅಕಾಲಿಕವಾಗಿ ಮರಣ ಹೊಂದಿದ ಮೀನುಗಾರ ಕುಟುಂಬಗಳಿಗೆ 6 ಲಕ್ಷ ರುಪಾಯಿ ಪರಿಹಾರ ಹಾಗೂ ಫಲಾನುಭವಿಗಳಿಗೆ ಮೀನು ಮರಿಗಳನ್ನು ವಿತರಿಸಿದರು. ಮುಂದಿನ 2 ವರ್ಷಗಳಲ್ಲಿ 2 ರಿಂದ 3 ಪಟ್ಟು ಪ್ರಮಾಣದಲ್ಲಿ ಮೀನು ಉತ್ಪನ್ನಗಳ ಹೆಚ್ಚಳಕ್ಕೆೆ ಕ್ರಮ ಕೈಗೊಳ್ಳಲಾಗಿದೆ. ಒಳನಾಡು ಮೀನುಗಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ವಿಶೇಷ ಗಮನ ಹರಿಸಲಾಗಿದೆ ಎಂದು ತಿಳಿಸಿದರು.
ಮೀನುಗಾರಿಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಕರೋನಾ ಸೋಂಕಿನ ನಡುವೆ ಮೀನುಗಾರರ ಹಿತರಕ್ಷಣೆಗೆ ಸರಕಾರ ಆದ್ಯತೆ ನೀಡಿದ್ದು, 24 ಸಾವಿರ ಮಹಿಳೆಯರಿಗೆ ಸಾಲ ಸೌಲಭ್ಯ, ಮಹಿಳಾ ಮೀನುಗಾರರಿಗೆ ದ್ವಿಿಚಕ್ರ ವಾಹನ ಮತ್ತು ಗರಿಷ್ಠ 1 ಲಕ್ಷ ರುಪಾಯಿ ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರಾಭಿವೃದ್ಧಿಿ ಸಚಿವ ಭೈರತಿ ಬಸವರಾಜ್, ಕಂದಾಯ ಸಚಿವ ಆರ್. ಅಶೋಕ್ ಇದ್ದರು.