”ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇ ಮೂಲಕ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಅಲ್ಪಾಸಿ ಆರಟ್ಟು ಮೆರವಣಿಗೆಗಾಗಿ ಶತಮಾನಗಳ ಹಿಂದಿನ ಆಚರಣೆಯನ್ನು ಸುಗಮವಾಗಿ ಮುಂದುವರಿಸಲು 1ನೇ ನವೆಂಬರ್ 2022 ರಂದು ವಿಮಾನ ಸೇವೆಗಳನ್ನು 5 ಗಂಟೆಗಳವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಶತಮಾನದಷ್ಟು ಹಳೆಯದಾದ ವಿಷ್ಣು ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ಆರಟ್ಟು ಮೆರವಣಿಗೆ ಮಾಡಲಾಗುತ್ತದೆ. ದೇವಾಲಯದ ಉತ್ತರಾಧಿಕಾರಿಗಳಾದ ಮಾಜಿ ತಿರುವಾಂಕೂರು ದೊರೆ ಮಾರ್ತಾಂಡ ವರ್ಮ ಅವರ ಕಾಲದಿಂದಲೂ ಈ ಪದ್ಧತಿಯನ್ನು ನಡೆಸಿಕೊಂಡು ಬರಲಾಗಿದೆ. ಅಂದಿನಿಂದ 1,000 ವರ್ಷಗಳಿಗೂ ಹೆಚ್ಚು ಕಾಲ ಈ ಸಂಪ್ರದಾಯವನ್ನು ಮುಂದು ವರೆಸಿಕೊಂಡು ಬರಲಾಗಿದೆ.
ವಿಮಾನ ನಿಲ್ದಾಣ ಪ್ರತಿ ವರ್ಷ ಸಾಂಪ್ರದಾಯಿಕ ಆರಾಟ್ಟು ಮೆರವಣಿಗೆಯ ಸಮಯದಲ್ಲಿ ತನ್ನ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸುತ್ತದೆ.