Friday, 20th September 2024

ಮತಿಯ ಸಾಮರ್ಥ್ಯಕ್ಕೆ ಒತ್ತು ನೀಡಿದ ತೀರ್ಪು

ಪಂಪಾಪತಿ ಹಿರೇಮಠ, ನಿವೃತ್ತ ಸ್ಟೇಟ್ ಬ್ಯಾಾಕ್ ಅಧಿಕಾರಿ, ಧಾರವಾಡ

ಮುಖ್ಯ ನ್ಯಾಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರಿಿಂ ಕೋರ್ಟ್‌ನ ಪಂಚಪೀಠ ಮಂಡಳಿಯ ರಾಮಜನ್ಮಭೂಮಿ- ಬಾಬಿರಿ ಮಸೀದಿ ವಿವಾದ ಕುರಿತು ನೀಡಿದ ಐತಿಹಾಸಿಕ ತೀರ್ಪಿನಿಂದ ದಶಕಗಳ ಕಾಲ ದೇಶವನ್ನು ಬೆಂಬಿಡದೆ ಕಾಡುತ್ತಿಿದ್ದ ಸಮಸ್ಯೆೆಯೊಂದು ತಾತ್ವಿಿಕ ಅಂತ್ಯ ಕಂಡಿದೆ. 40 ದಿನಗಳ ಕಾಲ ಪಂಚಪೀಠದ ಸದಸ್ಯರು ಸೂಕ್ಷ್ಮವಾದ ವಿವಾದವನ್ನು ಎಲ್ಲಾಾ ಕೋನಗಳಿಂದ ಅಳೆದು ತೂಗಿ ಕಾನೂನು, ಇತಿಹಾಸ ಕುರಿತು ಅವರಿಗಿದ್ದ ವಿದ್ಯೆೆಯನ್ನುಒರೆಗಿಟ್ಟು ತೀರ್ಪು ನೀಡಿದ್ದಾಾರೆ. ನ್ಯಾಾಯ, ಅನ್ಯಾಾಯದ ವಿಚಾರಕ್ಕಿಿಂತ ಕಾನೂನಿನ ಚೌಕಟ್ಟಿಿನಲ್ಲಿಯೇ ಮತೀಯ-ಸಾಮರಸ್ಯಕ್ಕೆೆ ಹೆಚ್ಚು ಒತ್ತು ನೀಡಿರುವುದು ಈ ತೀರ್ಪಿನ ವಿಶೇಷ.

ಒಂದು ವೇಳೆ ಸುಪ್ರೀಂ ಮೆಟ್ಟಿಿಲೇರಿದ್ದವರ ಪೈಕಿ ಒಂದು ಗುಂಪಿನ ಪರ ಮಾತ್ರ ತೀರ್ಪು ಹೊರ ಬಂದರೆ ಕೋಮು ಗಲಭೆ ಉಂಟಾಗಿ ದೇಶಾದ್ಯಂತ ಹಿಂಸಾಚಾರ ಬುಗಿಲೇಳಬಹುದೆಂದು ಭಯಭೀತರಾಗಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿಿದ್ದಾಾರೆ. ಸಮಸ್ತ ಎಲ್ಲಾಾ ವರ್ಗಕ್ಕೆೆ ಸೇರಿದ ನಾಗರಿಕರು ಸ್ವಾಾಗತಿಸಿದ್ದಾಾರೆ. ಈ ತೀರ್ಪಿನಿಂದ ಎಲ್ಲರೂ ಪಾಠ ಕಲೆಯ ಬೇಕಾದದ್ದು ಬಹಳವಿದೆ. ಕೇವಲ ದಾವೆ ಹೂಡುವುದು ಮುಖ್ಯವಲ್ಲ. ವ್ಯಾಾಜ್ಯಕ್ಕೆೆ ಸಂಬಂಧಿಸಿದ ಪೂರಕ ದಾಖಲೆಗಳಿಲ್ಲದ ಪಕ್ಷದಲ್ಲಿ ಕೇವಲ ನಂಬಿಕೆಗಳ ಆಧಾರದ ಮೇಲೆ ತೀರ್ಪು ನೀಡುವುದು ಸಾಧ್ಯವಿಲ್ಲ.

ಬಾಬರಿ ಮಸೀದಿಯನ್ನು ಬಾಬರನ ಕಮಾಂಡರ್ ಸುನ್ನಿಿ ಪಂಗಡಕ್ಕೆೆ ಸೇರಿದ್ದ ಮೀರ್ ಬಾಕಿ ಕಟ್ಟಿಿಸಿದ್ದರಿಂದ ವಿವಾದಿತ ಸ್ಥಳವನ್ನು ತಮಗೆ ನೀಡಬೇಕೆಂದು ಕಕ್ಷಿದಾರ ಸುನ್ನಿಿ ವಕ್‌ಫ್‌ ಮಂಡಳಿ ವಾದ ಮಂಡಿಸಿತ್ತು. ‘ಲಿಮಿಟೇಷನ್ ಆಕ್‌ಟ್‌’ ಕಾನೂನಿನ ಪ್ರಕಾರ ಶಿಯಾ ವಾದವನ್ನು ಸುಪ್ರಿಿಂ ತಳ್ಳಿಿಹಾಕಿದ್ದು, ಪೂಜೆ ಸಲ್ಲಿಸುತ್ತಿಿದ್ದರೆಂಬ ಒಂದೇ ಕಾರಣಕ್ಕಾಾಗಿ ನಿರ್ಮೋಹಿ ಅಖಾಡಕ್ಕೆೆ 2.77 ಎಕರೆ ಜಮೀನು ನೀಡಲು ಸಾಧ್ಯವಿಲ್ಲ ಪೀಠ ಹೇಳಿದೆ. ರಾಮಮಂದಿರವನ್ನು ನಿರ್ಮಿಸಲು ರಚನೆಯಾಗಲಿರುವ ಟ್ರಸ್‌ಟ್‌‌ನಲ್ಲಿ ನಿರ್ಮೋಹಿಗೆ ಕೂಡ ಸದಸ್ಯತ್ವ ನೀಡಬೇಕೆಂದು ಸರಕಾರಕ್ಕೆೆ ಸೂಚಿಸುವ ಮೂಲಕ ಅವರನ್ನು ಕೂಡ ಸಮಾಧಾನ ಪಡಿಸಿದೆ.

2.77 ಎಕರೆ ಜಾಗದಲ್ಲಿ ತಮ್ಮ ಹಕ್ಕು ಪ್ರತಿಪಾದಿಸಲು ಬೇಕಾಗುವ ಯಾವುದೇ ಪೂರಕ ದಾಖಲೆಗಳನ್ನು ನೀಡದೇ ಇದ್ದರಿಂದ ಸುಪ್ರೀಂ ತಿರಸ್ಕರಿಸಿದೆ. ಪ್ರಾಾಚ್ಯವಸ್ತು ಇಲಾಖೆಯ ತಜ್ಞರಿಂದ ಬಾಬರಿ ಮಸೀದಿ ಇದ್ದ ಸ್ಥಳದಲ್ಲಿ ರಾಮಮಂದಿರವಿತ್ತು ಎಂಬುದರ ಬಗ್ಗೆೆ ತಾವು ವೈಜ್ಞಾಾನಿಕ ರೀತಿಯಲ್ಲಿ ನಡೆಸಿದ ಉತ್ಖನನ ವೇಳೆ ದೊರೆತ ಅವಶೇಷಗಳ ಆಧಾರಗಳಿಂದ ಸ್ಪಷ್ಟ. ನಾವು ಪುರಾಣಗಳ ಆಧಾರದ ಮೇಲೆ ಇತ್ಯರ್ಥಕ್ಕೆೆ ಬರುವುದು ಸಾಧ್ಯವಿಲ್ಲ. ಇತಿಹಾಸ ಮತ್ತು ದಾಖಲೆಗಳನ್ನು ನಂಬುತ್ತೇವೆ ಎಂದು ಪೀಠದ ಸದಸ್ಯರು ಹೇಳಿರುವುದನ್ನು ಗಮನಿಸಬೇಕು.

1992ರಲ್ಲಿ ಮಸೀದಿ ದ್ವಂಸ ಮಾಡಿದ್ದು ಕಾನೂನಿನ ಉಲ್ಲಂಘನೆಯಲ್ಲದೇ ಒಂದು ಐತಿಹಾಸಿಕ ಪ್ರಮಾದವೆಂದು ಸುಪ್ರಿಿಂ ಎಚ್ಚರಿಸಿದೆ. ನಮ್ಮ ದೇಶದ ಸಂವಿಧಾನದಲ್ಲಿ ಎಲ್ಲಾಾ ಧರ್ಮದವರಿಗೂ ತಮ್ಮ ಮತಕ್ಕನುಸಾರವಾಗಿ ಪ್ರಾಾರ್ಥನೆ ಸಲ್ಲಿಸಲು ಹಕ್ಕು ಇದೆ. 2.77 ಎಕರೆಯ ಸಂಪೂರ್ಣ ಹಕ್ಕನ್ನು ರಾಮಲಲ್ಲಾಾಗೆ (ಬಾಲರಾಮ) ನೀಡಿರುವ ಸುಪ್ರಿಿಂ ಕೋರ್ಟ್ ಸುನ್ನಿಿ ವಕ್‌ಫ್‌ ಬೋರ್ಡ್‌ಗೆ ಅಯೋಧ್ಯೆೆದಲ್ಲಿ ಜಾಗ ನೀಡಿ ಮಸೀದಿ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕೆಂದು ಸರಕಾರಕ್ಕೆೆ ಆದೇಶಿಸಿದೆ. ಹಿಂದಿನ ಘಟನೆಗಳನ್ನೆೆಲ್ಲಾಾ ಮರೆತು ಕೋಮು ಸೌಹಾರ್ದ ಕಾಪಾಡಿಕೊಂಡು ಹೋಗಬೇಕೆಂಬ ಆಶಯ ವ್ಯಕ್ತಪಡಿಸಿದೆ.
ಈ ತೀರ್ಪು ವಿರಳಗಳಲ್ಲಿ-ವಿರಳ, ಅಪರೂಪಗಳಲ್ಲಿ-ಅಪರೂಪ. ಇದಕ್ಕಿಿಂತ ಉತ್ತಮ ತೀರ್ಪು ನಿರಿಕ್ಷಿಸಲು ಸಾಧ್ಯವಿಲ್ಲ. ಸರಕಾರ ಕಾನೂನು ಸುವ್ಯವಸ್ಥೆೆ ಕಾಪಾಡಲು ಎಲ್ಲಾಾ ಕ್ರಮಗಳನ್ನು ಕೈಗೊಂಡಿದೆ. ದೇಶದ ಜನತೆ ಕೂಡ ಯಾವುದೇ ಅತಿರೇಕಕ್ಕೆೆ ಹೋಗದಂತೆ ಸ್ಪಂದಿಸಿದೆ.

ಪಂಚಪೀಠ ಸದಸ್ಯರು ಅಭಿನಂದನಾರ್ಹರು. ಜತೆಗೆ ಎಲ್ಲಾಾ ವರ್ಗಕ್ಕೆೆ ಸೇರಿದ ನಾಗರಿಕರು ಶಾಂತಿ ಕದಡದಂತೆ ತೀರ್ಪು ಸ್ವಾಾಗತಿಸಿದ್ದರಿಂದ ಇಂತಹ ಸಮಯದಲ್ಲಿ ಜಾತಿ, ಮತ, ಪಂಥ, ಧರ್ಮ ಮೀರಿ ಔದಾರ್ಯತೆ, ಪ್ರೌೌಡಿಮೆ ಮತ್ತು ಹೃದಯವಂತಿಕೆ ಮೆರೆದಿದ್ದಾಾರೆ. ‘ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ವಾಣಿಯಂತೆ’, ‘ರಸವೇ ಜೀವನ, ವಿರಸ ಮರಣ, ಸಮರಸ ಜೀವನವೆಂಬ ವರಕವಿ ಬೇಂದ್ರೆೆ’ಯವರ ನುಡಿಯಂತೆ, ನಮ್ಮ ದೇಶದ ಸಂಸ್ಕೃತಿಯಲ್ಲಿ ಸೌಹಾರ್ದತೆ ಹಾಸು ಹೊಕ್ಕಾಾಗಿದೆ. ಯಾವ ಕಾರಣಕ್ಕೂ ಸೌಹಾರ್ದತೆಗೆ ಧಕ್ಕೆೆಯಾಗದಂತೆ ಎಚ್ಚರದಿಂದ ನೋಡಿಕೊಳ್ಳೂವುದು ಎಲ್ಲರ ಕರ್ತವ್ಯ. ಶ್ರೀರಾಮ ಒಬ್ಬ ಆದರ್ಶ ವ್ಯಕ್ತಿಿಯಾಗಿರಬಹುದು, ಮರ್ಯಾದಾ ಪುರಷೋತ್ತಮನಾಗಿರಬಹುದು. ನಮ್ಮ ದೇಶಕ್ಕೆೆ ರಾಮನೊಬ್ಬನೇ ದೇವರು ಎಂದು ಕೆಲ ವರ್ಗಗಳಿಂದ ಹೇಳಿಕೆಗಳು ಬರುತ್ತಿಿರುವುದು ತರವಲ್ಲ, ಈ ನಿಲುವು ಅಪಾಯಕಾರಿ, ಮಾನವ ಸಂಬಂಧಗಳು ಯಾವ ಕಾರಣಕ್ಕೂ ಕದಡಬಾರದು.